ಸಿಂದಗಿ: ಎಸ್‍ಎಸ್‍ಎಲ್‍ಸಿ ಮತ್ತು ಪಪೂ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ಮಾಡುವ ಶಿಕ್ಷಕರು ಅವರ ಪರೀಕ್ಷೆ ಮಾಡುವುದು ಕೆಎಸ್‍ಇಎಬಿ ಪರೀಕ್ಷಾ ಮಂಡಳಿಯ ಮೂಲಕ ಪರೀಕ್ಷಾ ಪದ್ದತಿಯಲ್ಲಿ ಸರಕಾರ ಧ್ವಂದ್ವ ನೀತಿ ಅನುಸರಿಸುತ್ತಿದೆ ಇಂತಹ ನೀತಿಯಿಂದ ಹೊರಬೇಕು ಇಲ್ಲದಿದ್ದರೆ ಚುನಾವಣೆ ನೀತಿ ಸಂಹಿತೆಯನ್ನು ಮರೆತು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ಮಾಧ್ಯಮ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪೂರ ಎಚ್ಚರಿಕೆ ನೀಡಿದರು.
ಪಟ್ಟಣದ ಚನ್ನವೀರ ಉದ್ಯಾವನದ ಹತ್ತಿರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಸಲ ಒಂದೇ ಬಾರಿ ಪರೀಕ್ಷೆ ನಡೆಸುವುದು ವಾಡಿಕೆ ಅದನ್ನು ಈ ಸರಕಾರ ಮೂರು ಮೂರು ಸಲ ಪರೀಕ್ಷೆ ನಡೆಸುವ ಬಗ್ಗೆ ಯಾವುದೇ ತರಬೇತಿಯೂ ಕೂಡಾ ನೀಡದೇ ಏಕ ಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡು ಪಾಲಕರ ಹಾಗೂ ಬಾಲಕರು ಆತಂಕ ಪಡುವಂತಾಗಿದೆ. ಪಾಸು ಫೇಲು ಶಿಕ್ಷಣ ಕ್ಷೇತ್ರದಲ್ಲಿ ಒಂದೇ ಗುರಿಯಾಗಿಟ್ಟುಕೊಂಡು ಪರೀಕ್ಷೆ ನಡೆಸುತ್ತ ಪರೀಕ್ಷೆಗೆ ಮಹತ್ವ ನೀಡಿ ದ್ವಂದ್ವ ನೀತಿ ತಾಳಿದೆ. ಕನಿಷ್ಠ ಪರೀಕ್ಷೆ ನಡೆಸಬೇಕಾದರೆ ಎಚ್ಚರಿಕೆ ವಹಿಸಬೇಕಾಗಿತ್ತು ಅಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಬಳಕೆ ಮತ್ತು ಹೊರಗಡೆ 144 ಕಲಂ ಜಾರಿ ಇರುತ್ತದೆ ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾ ಪರಿಸ್ಥಿತಿ ಸೃಷ್ಟಿಸಿದೆ. ವೆಬ್ ಕಾಸ್ಟೀಂಗ್ ಬಳಕೆ ಮಾಡಿರುವುದರಿಂದ ಶಿಕ್ಷಕರು ಕೂಡಾ ಪರೀಕೆ ಕಾರ್ಯ ಮಾಡುವ ಶಿಕ್ಷಕರು ಆತಂಕ ಪಡುವಂತಾಗಿದೆ. ಇದು ಪರೀಕ್ಷಾ ಪಾವಿತ್ರೆತೆಯ ಮೇಲೆ ಪರಿಣಾಮ ಬೀರುತ್ತದೆ ಪರೀಕ್ಷಾ ಪಾವಿತ್ರತೆ ಉಳಿದರೆ ಪಪೂ ಶಿಕ್ಷಣ ಇಲಾಖೆಯಲ್ಲಿ ಮಾತ್ರ ಉಳಿದುಕೊಂಡಿದೆ. ಶಿಕ್ಷಕರು ರಜೆ ರಹಿತ ಇಲಾಖೆಯಾಗಿ ಮಾರ್ಪಾಡಾಗಿ ನಿರಂತರ ಕಾರ್ಯನಿರ್ವಹಿಸುವಂತ ಪರಿಸ್ಥಿತಿ ಸೃಷ್ಟಿಸಿದೆ. ಇಂತಹ ನೀತಿಯಿಂದ ಹೊರಬಂದು ಪರೀಕ್ಷಾ ಕಾರ್ಯ ಮತ್ತು ಮೌಲ್ಯಾಂಕನ ಕಾರ್ಯ ವಿನಾಯಿತಿ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೀಮಾಶಂಕರ ತಾರಾಪೂರ ವಕೀಲರು, ಶಿವಾನಂದ ರೋಡಗಿ ಸೇರಿದಂತೆ ಅನೇಕರಿದ್ದರು.