spot_img
spot_img

ಬೈಲಹೊಂಗಲ ತಾ. ಗ್ರಾ.ಪಂ. ಗ್ರಂಥ ಪಾಲಕರಿಗೆ ತರಬೇತಿ ಕಾರ್ಯಾಗಾರ

Must Read

- Advertisement -

ಬೆಳಗಾವಿ – ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಎಲ್ಲಾ 35ಗ್ರಾಮ ಪಂಚಾಯತ ಗ್ರಂಥಪಾಲಕರಿಗೆ ಬೈಲಹೊಂಗಲ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ದಿ. 19/03/2024 ರ ಮಂಗಳವಾರದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆಯ  ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಹಾಗೂ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನೂ  ಹಮ್ಮಿಕೊಳ್ಳಲಾಗಿತ್ತು.

       ಈ ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಂಗಾಧರ ಕಂದಕೂರ ಅವರು ವಹಿಸಿದ್ದರು ಹಾಗೂ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್  ರಘು ಅವರು ಮತ್ತು ಕಚೇರಿಯ ಸಹಾಯಕರು ಉಪಸ್ಥಿತರಿದ್ದರು. 

     ಶಿಕ್ಷಣ ಫೌಂಡೇಶನ್ನಿನ  ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ  ಸಂಯೋಜಕರಾದ ಶ್ರೀಶೈಲ ಅಥಣಿ, ಬೆಳಗಾವಿ ಜಿಲ್ಲಾ ಸಂಯೋಜಕರಾದ ಬಾಳಪ್ಪಾ ಮಡಿವಾಳರ ಬೈಲಹೊಂಗಲ  ತಾಲೂಕು ಸಂಯೋಜಕರಾದ ಗೀತಾ ಗುಜನಾಳ,  ಮಹದೇವ ಮಲಶೆಟ್ಟಿ, ವೀರಣ್ಣ ಗುಂಡಗಾಂವಿ, ಶ್ರೀದೇವಿ ಬೈಲವಾಡ ಮತ್ತು ತಾಲೂಕಿನ ಗ್ರಂಥಾಲಯ ಸಂಘದ ಅಧ್ಯಕ್ಷರಾದ ಸಿ.ಬಿ.ಕಳಸನ್ನವರ, ಉಪಾಧ್ಯಕ್ಷರಾದ ಕೆ.ಟಿ.ಹೂಗಾರ ಇನ್ನುಳಿದ ಎಲ್ಲ ಮೇಲ್ವಿಚಾರಕರು ಉಪಸ್ಥಿತರಿದ್ದರು.

- Advertisement -

      ಶ್ರೀಶೈಲ ಅಥಣಿ ಶಿಕ್ಷಣ ಫೌಂಡೇಶನ್ ಹಿನ್ನೆಲೆ ಬೆಳೆದು ಬಂದ ಹಾದಿ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಪರಿಚಯ ಮಾಡಿಕೊಟ್ಟರು. ನಂತರ ಇ.ಓ ಸರ್ ಅವರು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ನೀಡಿದ ಡಿಜಿಟಲ್ ಡಿವೈಸ್ ಗಳನ್ನು ಸಮರ್ಪಕವಾಗಿ ಬಳಸಬೇಕೆಂದು ತಿಳಿಸಿದರು ಮತ್ತು ಈ ಶತಮಾನಕ್ಕೆ ಬೇಕಾದ ಡಿಜಿಟಲ್ ಕೌಶಲ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

     ಬೆಳಗಾವಿ ವಲಯ  ಸಂಯೋಜಕರು ಶ್ರೀಶೈಲ ಅಥಣಿ ಅವರು ಕಂಪ್ಯೂಟರ್ ಮೂಲ ವಿಷಯಗಳಾದ ಎಂ.ಎಸ್. ಆಫೀಸ್,ಇಮೇಲ್, ಪಿಡಿಎಫ್, ಕನ್ನಡ ಟೈಪಿಂಗ್ ಇನ್ನು ಹಲವಾರು ಡಿಜಿಟಲ್ ಸಾಕ್ಷರತೆಯ ಬಗ್ಗೆ ತಿಳಿಸಿಕೊಟ್ಟರು ಹಾಗೂ ಶಿಕ್ಷಣ ಪೀಡಿಯಾ ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡಿದರು . ಶಿಕ್ಷಣ ಪಿಡಿಯಾ ಅಪ್ಲಿಕೇಶನ್  ಅಕಾಡೆಮಿಕ್ಸ್, ಡಿಜಿಟಲ್ ಸ್ಕಿಲ್ಸ್ ಹಾಗೂ ಸ್ಟೋರೀಸ್ ಎಂಬ 3 ಭಾಗಗಳನ್ನು ಒಳಗೊಂಡಿದ್ದು ಅಕಾಡೆಮಿಕ್ಸ್ ಅಲ್ಲಿ 8,9,10,12ನೆಯ ತರಗತಿಯ ಪಠ್ಯ ಪುಸ್ತಕದ ಪಾಠಗಳ ವಿಡಿಯೋ ಗಳಿದ್ದು, ಸ್ಕಿಲ್ಸ್ ಅಲ್ಲಿ ಡಿಜಿಟಲ್ ಸಾಕ್ಷರತೆ ಬಗ್ಗೆ ಅಂದರೆ ಡಿವೈಸ್ , ಡಿವೈಸ ಸೇಫ್ಟಿ,ಹಾರ್ಡ್ವೇರ್ ಅಂಡ್  ಸಾಪ್ಟ್ ವೇರ್, ಇಂಟರ್ನೆಟ್, ಇಮೇಲ್, ಗೂಗಲ್ ಡ್ರೈವ್ ಹಾಗೂ ಇನ್ನಿತರ ಡಿಜಿಟಲ್ ಸಾಕ್ಷರತೆ ಬಗ್ಗೆ ವಿಡಿಯೋ ಗಳನ್ನು ನೀಡಲಾಗಿದೆ. ಹಾಗೂ ಸ್ಟೋರೀಸ್ ಅಲ್ಲಿ ಚಿಕ್ಕ ಮಕ್ಕಳಿಗಾಗಿ ಕಥೆಗಳನ್ನು ನೀಡಲಾಗಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ತಮ್ಮ ವೃತ್ತಿ ಜೀವನಕ್ಕೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಅಳವಡಿಸಲಾಗಿದೆ . ಇದರ ಮುಖಾಂತರ ಗ್ರಾಮೀಣ ಭಾಗದ ಮಕ್ಕಳು ಪ್ರಯೋಜನ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿಕೊಟ್ಟರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group