spot_img
spot_img

ಮಹಿಳೆಯರಿಂದಲೇ ಸಮಾಜದ ಸರ್ವೋತೋಮುಖ ಅಭಿವೃದ್ಧಿ ; ಕಿತ್ತೂರು ಚೆನ್ನಮ್ಮಳ ತ್ಯಾಗ ನಮಗೆಲ್ಲಾ ಮಾದರಿ

Must Read

- Advertisement -

ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ, ಲಿಂಗಾಯತ ಮಹಿಳಾ ಸಮಾಜ ಬೆಳಗಾವಿ, ಕನ್ನಡ ಸಾಂಸ್ಕೃತಿಕ ಭವನ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಮತ್ತು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಕನ್ನಡ ಭವನ ನೆಹರು ನಗರದಲ್ಲಿ ದಿನಾಂಕ ೧೯-೩-೨0೨೪ ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಪ್ರಧಾನಕಾರ್ಯದರ್ಶಿ ಶ್ರೀಮತಿ ಮುಕ್ತಾಂಬ ಬಸವರಾಜ ಇವರು ಮಾತನಾಡಿ, ಬೆಳಗಾವಿ ಜಿಲ್ಲೆ ಐತಿಹಾಸಿಕವಾಗಿ ಅತ್ಯಂತ ಮಹತ್ವವನ್ನು ಪಡೆದುಕೊಂಡು ತನ್ನದೇ ಆದ ಇತಿಹಾಸವನ್ನು ಸೃಷ್ಟಿಸಿದೆ. ಕಿತ್ತೂರು ಚೆನ್ನಮ್ಮಳ ತ್ಯಾಗಮಯ ಜೀವನ ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ. ಹೆಸರಾಂತ ಲೇಖಕಿಯರು, ಜಾನಪದ ಕಲಾವಿದರು, ಸಮಾಜಸೇವಕಿಯರು, ಮಹಿಳಾ ಹೋರಾಟಗಾರರು ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ ಎಂದರು. 

ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿ ಶ್ರೀಮತಿ ಸುಶೀಲಾಬಾಯಿ ಜ. ಕುಲಕರ್ಣಿಯವರ ಹೋರಾಟದ ಬದುಕು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಶ್ರೀಮತಿ ಪ್ರೊ. ವಿನೀತಾ ಗೆಜ್ಜೆಯವರು ಉಪನ್ಯಾಸವನ್ನು ಮಾಡಿದರು.     

- Advertisement -

ಖ್ಯಾತ ರಂಗನಿರ್ದೇಶಕಿ ಶ್ರೀಮತಿ ವಿಶ್ವೇಶ್ವರಿ. ಬ. ಹಿರೇಮಠ ಇವರು ಜಾನಪದ ಕಲೆಯ ಮಹತ್ವದ ಬಗ್ಗೆ ತಿಳಿಸಿ ಜಾನಪದ ಗೀತೆಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು. 

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಂಗಲ. ಶ್ರೀ. ಮೆಟಗುಡ್ಡರವರು ಇಂದು ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಸಿಕ್ಕಿದೆಯಂದರೆ ಅದು ಹನ್ನೆರಡನೇ ಶತಮಾನದ ಬಸವಣ್ಣನವರು ಮಾಡಿದ ಸಾಮಾಜಿಕ ಸುಧಾರಣೆಯ ಪ್ರತಿಫಲವಾಗಿದೆ. ಆದ್ದರಿಂದ ಎಲ್ಲ ಮಹಿಳೆಯರು ಜೀವನದಲ್ಲಿ ಬರುವ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಬೇಕು. ಮಹಿಳೆಯರಿಂದಲೇ ಸಮಾಜದ ಸರ್ವೋತೋಮುಖ ಅಭಿವೃದ್ಧಿ ಸಾಧ್ಯ. ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಮುಂದಾಳತ್ವವನ್ನು ವಹಿಸಿದ್ದಾಳೆ. ಜೀವನವೆಂಬ ಸಾಗರದಲ್ಲಿ “ಈಸಬೇಕು ಇದ್ದು ಜೈಸಬೇಕು.”ಎಂದು ಸ್ಫೂರ್ತಿಯ ಮಾತುಗಳನ್ನಾಡಿದರು. 

ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕರಾದ ಶ್ರೀಮತಿ ಶೈಲಜಾ ಬಿಂಗೆಯವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಮಹಿಳಾ ಸಾಧಕಿಯರಾದ ರಾಷ್ಟ್ರಪ್ರಶಸ್ತಿ ವಿಜೇತರಾದ ಶ್ರೀಮತಿ ಶಾಂತಾದೇವಿ ಹುಲೆಪ್ಪನವರಮಠ, ರಾಧಿಕಾ ಮಿರ್ಜಿ, ನೀಲಂ ಗುತ್ತಿಗೋಳಿ, ಜೋತ್ಸ್ನಾ ಪೈ,ಸುರೇಖಾ ಪಾಟೀಲ, ಪಾರ್ವತಿ, ದಾನಮ್ಮ ಹಿಡದುಗ್ಗಿ, ಜಯಶ್ರೀ ಬಂಡಿ ವಡ್ಡರ, ಸುನೀತಾ ಸರ್ವದೆ ಮುಂತಾದವರನ್ನು ಸನ್ಮಾನಿಸಲಾಯಿತು. 

- Advertisement -

ಶ್ರೀಮತಿ ಆಶಾ ಕಡಪಟ್ಟಿ, ಜಿಲ್ಲಾ ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ, ಪ್ರತಿಭಾ ಕಳಿಮಠ, ಡಾ. ಗುರುದೇವಿ ಹುಲೆಪ್ಪನವರಮಠ, ಡಾ .ಭಾರತಿ ಮಠದ ಮುಂತಾದ ಮಹಿಳಾ ಸಾಹಿತಿಗಳು ಉಪಸ್ಥಿತರಿದ್ದರು.

ಕಾವೇರಿ ಕಿಲಾರಿ ಅಣಪೂಣಾ೯ ಹಿರೇಮಠ, ನಯನಾ ಗಿರಿಗೌಡರ ಭಾರತಿಮಠದ ಪರಿಚಯಿಸಿದರು. ಆರಂಭದಲ್ಲಿ ಡಾ.ಸುನೀತಾ ಪಾಟೀಲ ಹಾಗೂ ಸಂಗಡಿಗರಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ. ಹೇಮಾವತಿ ಸೊನೋಳಿಯವರು ವಂದನಾರ್ಪಣೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಲಿಂಗಾಯತ ಮಹಿಳಾ ಸಮಾಜದ ಎಲ್ಲ ಸದಸ್ಯರು, ಜಿಲ್ಲಾ ಮಹಿಳಾ ಲೇಖಕಿಯರ ಸಂಘದ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group