ಆಕರ್ಷಕ ಕುಸ್ತಿ ಪಂದ್ಯ
ಮೂಡಲಗಿ:-ತಾಲೂಕಿನ ಯಾದವಾಡ ಗ್ರಾಮದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಜರುಗುವ ಘಟಗಿ ಶ್ರೀ ಬಸವೇಶ್ವರ ಜಾತ್ರಾ ನಿಮಿತ್ತ ವಾಗಿ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ
ಮಂಗಳವಾರ ಮಹಾರಾಷ್ಟ್ರ ಮತ್ತು ಕರ್ನಾಟಕದ ರಾಜ್ಯದ ೩೦ಕ್ಕೂ ಅಧಿಕ ಪೈಲ್ವಾನರು ಭಾಗಿಯಾಗಿದ್ದರು.
ಕುಸ್ತಿ ಅಖಾಡವು ಪೈಲ್ವಾನರಿಂದ ತುಂಬಿಕೊಂಡಿತ್ತು. ಪೈಲ್ವಾನರಲ್ಲಿ ೧೫ ತಂಡಗಳಲ್ಲಿ ಹಣಾಹಣಿ ಕುಸ್ತಿ ನಡೆಯಿತು. ಪ್ರೇಕ್ಷಕರಿಂದ ಕೇಕೆ,ಸಿಳ್ಳೆ,ಚಪ್ಪಾಳೆ ಮಧ್ಯೆ ಕುಸ್ತಿ ಪಟುಗಳು ತಮ್ಮ ಪಟ್ಟುಗಳನ್ನು ಪ್ರದರ್ಶಿಸಿ ಜನರನ್ನು ರಂಜಿಸಿದರು.
ಯಾದವಾಡ ಗ್ರಾಮದ ಚೌಕೇಶ್ವರ ಹಾಗೂ ಘಟಗಿ ಶ್ರೀ ಬಸವೇಶ್ವರ ಜಾತ್ರಾ ನಿಮಿತ್ತ ಬಂಡಿ ಓಡಿಸುವ ಸ್ಪರ್ಧೆ ಜರುಗಿದವು.
ರೋಚಕವಾದ ಎತ್ತಿನ ಬಂಡಿ ಓಡಿಸುವ ಸ್ಪರ್ಧೆ ನೋಡಲು ಅಪಾರ ಜನರು ಸೇರಿದರು. ಈ ಸ್ಪರ್ದೆಯಲ್ಲಿ ೨೧ ಜೋಡಿ ಎತ್ತುಗಳು ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಗೋವಿನಕೊಪ್ಪ, ಬೆಂಡಿಗೇರಿ, ದೇವರಕೊಂಡ, ತಿರಲಾಪುರ, ದಾದನಟ್ಟಿ, ಕುದರಿಮನಿ, ಅಜರಾ,ಮರಿಕಟ್ಟಿ ಸೇರಿ ೧೩ ಬಂಡಿ ಓಡಿಸುವ ಸ್ಪರ್ಧೆಯ ಮಾಲೀಕರು ನಗದು ಬಹುಮಾನ ಪಡೆದುಕೊಂಡರು.