ಮಕ್ಕಳಿಗಾಗಿ ಸಾಯಿ ವಸಂತ ಶಿಬಿರ ಕಾರ್ಯಕ್ರಮ

0
42

ಮೂಡಲಗಿ:ಪಟ್ಟಣದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸತ್ಯಸಾಯಿ ಸಮಿತಿಯಿಂದ ಏ.೧೧ರಿಂದ ಏ.೩೦ರ ವರೆಗೆ ಮಕ್ಕಳಿಗಾಗಿ ಸಾಯಿ ವಸಂತ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಮಕ್ಕಳಿಗೆ ಪ್ರತಿ ದಿನ ಹಾಡು, ಭಜನೆ, ಸ್ತೋತ್ರ ಪಠಣೆ, ಕಥೆ, ಮಾನವೀಯ ಗುಣಗಳನ್ನು ಉಚಿತವಾಗಿ ಹೇಳಿಕೊಡಲಾಗುವದು ಎಂದು ಶಿಕ್ಷಕ ಬಸವರಾಜ ನಂದಿ ಹೇಳಿದರು.

ಸಾಯಿ ಭಕ್ತರಾದ ರಂಗಮ್ಮ ಬೂದಿಹಾಳ ನೋಟಬುಕ್ಕ ,ಪೆನ್ನುಗಳನ್ನು ಮತ್ತು ಕೃಷ್ಣಾ ನಾವಳ್ಳಿ ಭಜನೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಶಿಬಿರವನ್ನು ಉಧ್ಘಾಟಿಸಿದರು.

ಈ ಸಂದರ್ಭದಲ್ಲಿ ಭಾರತಿ ಮಿಲಾನಟ್ಟಿ, ರೇಣುಕಾ ದೊಡಮನಿ, ರವಿ ಕಾಂಬಳೆ, ಗೋಪಾಲ ಕಂಕಣವಾಡಿ, ಭೀಮಶಿ ನಾಯ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here