ತಿಮ್ಮಾಪುರ ಗ್ರಾಮದಲ್ಲಿ ಸಡಗರದಿಂದ ಕಾರಹುಣ್ಣಿಮೆ ಆಚರಣೆ

Must Read

ಹುನಗುಂದ- ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ರೈತರ ಪ್ರೀತಿಯ ಹಬ್ಬವಾದ ಕಾರ ಹುಣ್ಣಿಮೆಯನ್ನು ದಿನಾಂಕ:11 ರಂದು ಬುಧವಾರ ಸಾಯಂಕಾಲ ಸಡಗರದಿಂದ ಆಚರಿಸಲಾಯಿತು.

ನಗರೀಕರಣದಿಂದ ನಮ್ಮ ಈ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ತಿಮ್ಮಾಪುರ ಹುನಗುಂದ ತಾಲೂಕ ಗ್ರಾಮದಲ್ಲಿ ಕಾರ ಹುಣ್ಣಿಮೆಯ ದಿನ ಹೋರಿ ಒಡಿಸುವುದು ಕರಿ ಹರಿಯುವದು ಸಂಪ್ರದಾಯ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದರೂ ಇಂದಿನ ನಮ್ಮ ಗ್ರಾಮೀಣ ಸಂಸ್ಕೃತಿಗಳು ಯಾವುದೇ ಆಚರಣೆಯಿಂದ ಹಿಂದೆ ಸರಿದಿಲ್ಲ ಕಾರು ಹುಣ್ಣಿಮೆಯ ದಿನ ಗ್ರಾಮದ ಹಿರಿಯರು ಸೇರಿ ಬಾಬದ ಮನೆಗಳಾದ ರಾಟಿಯವರ ಮನೆ ಗೌಡರ ಹಳಮನೆಯವರ ಮನೆ ಹಾದಿಮನಿಯವರ ಮನೆ ಕೆಂಚನಗೌಡರ ಮನೆ ಹಾಗೂ ಪಿಂಜಾರರ ಮನೆಗಳಿಗೆ ಬಾಜಾ ಭಜಂತ್ರಿಗಳೊoದಿಗೆ ತೆರಳಿ ಸಂಜೆ ಕರಿ ಹರಿಯುವದಕ್ಕೆ ಕರೆ ತರಲಾಯಿತು.

ಊರ ಮುಂದಿನ ಅಗಸಿಯಲ್ಲಿ ಎಲ್ಲ ಎತ್ತುಗಳನ್ನು ಒಂದೇ ಸಾರಿ ಐದು ಸುತ್ತು ಬಿಡಲಾಯಿತು ಅಗಸಿಗೆ ಅಡ್ಡಲಾಗಿ ಹಾಕಿರುವ ಬೇವಿನ ಸೊಪ್ಪಿನ ಮಧ್ಯೆ ಇರುವ ಕೊಬ್ಬರಿ ಬಟ್ಟಲನ್ನು ಯುವಕರು ಸಾಹಸ ಮಾಡಿ ಹರಿದರು ಯಾವ ಬಣ್ಣದ ಎತ್ತು ಕರೆ ಹರಿಯುತ್ತದೆಯೋ ಅದರ ಮೇಲೆ ರೈತರು ಬೆಳೆಯ ಸೂಚನೆ ನೀಡುತ್ತಾರೆ. ಐದು ಎತ್ತುಗಳಲ್ಲಿ ಬಿಳಿ ಎತ್ತು ಮೊದಲು ಬಂದ ಕಾರಣ ಬಿಳಿ ಜೋಳ ಸಂಭ್ರಮದಿoದ ಬೆಳೆಯಲಿದೆ ಎಂದು ರೈತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಗುಂಡು ಎತ್ತುವ ಸ್ಪರ್ಧೆ : ಕರಿ ಹರಿದ ನಂತರ ಇಲ್ಲಿಯ ಯುವಕರಿಂದ ಗುಂಡು ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಹಸ ಮೆರೆದರು.

ಕಾರ ಹುಣ್ಣಿಮೆಯ ಬಗ್ಗೆ ಪತ್ರಕರ್ತ ಜಗದೀಶ್ ಹದ್ಲಿ ಮಾತನಾಡಿ ಆಧುನಿಕತೆಯ ಭರಾಟೆಯ ಮಧ್ಯೆಯ ವಿಲಕ್ಷಣವೆನಿಸಿದರು ಗ್ರಾಮೀಣದ ಸೊಡುಗು ಜಾನಪದ ಸಂಸ್ಕೃತಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಳಿವಿನಂಚಿನಲ್ಲಿರುವ ಈ ಸಂಸ್ಕೃತಿಗಳನ್ನು ಸರ್ಕಾರ ಪ್ರೋತ್ಸಾಹಿಸುವುದರ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group