spot_img
spot_img

ಪೋರವಾಲ ಮಹಾವಿದ್ಯಾಲಯಕ್ಕೆ ಗ್ರೀನ್ ಚಾಂಪಿಯನ್

Must Read

spot_img
- Advertisement -

ಸಿಂದಗಿ: ಸಂಸ್ಥೆಯ ಸಹಕಾರ, ಮಹಾವಿದ್ಯಾಲಯದ ಪ್ರಾಚಾರ್ಯರರು ಸೇರಿದಂತೆ ಸಿಬ್ಬಂದಿಗಳ ಶ್ರಮದಿಂದ ನಮ್ಮ ಮಹಾವಿದ್ಯಾಲಯಕ್ಕೆ ಭಾರತ ಸರ್ಕಾರದಿಂದ ಡಿಸ್ಟ್ರಿಕ್ಟ್ ಗ್ರೀನ್‍ಚಾಂಪಿಯನ್ ಪ್ರಶಸ್ತಿ ದೊರಕಿದ್ದು ಜಿ.ಪಿ.ಪೋರವಾಲ ಮಹಾವಿದ್ಯಾಲಯ ಪ್ರಶಸ್ತಿಯನ್ನು ಪಡೆದುಕೊಂಡು ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿದೆ. ಎಂದು ಸಾರಂಗಮಠದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಚೇರಮ್ನನ್‍ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಜಿ.ಪಿ.ಪೋರವಾಲ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿರುವ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸುಮಾರು 25 ಲಕ್ಷ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಪ್ರಾರಂಭ ಮಾಡಲಾಗಿತ್ತು ಅದರಲ್ಲಿ ಬರುತ್ತಿರುವ ಕಲುಷಿತ ನೀರು ಹಾಳಾಗಾಬಾರದೆಂದು ಅದನ್ನು (ಕಲುಷಿತ ನೀರನ್ನು)ಮತ್ತೇ ಶುದ್ದಿಕರಿಸಿ ಆ ನೀರಿನ ಸದ್ಬಳಕೆ ಮಾಡಿ ಪರಿಸರದ ಬೆಳವಣಿಗೆ ಮತ್ತು ರಕ್ಷಣೆಯನ್ನು ಮಾಡಲಾಗಿದೆ. ಪರಿಸರ ಉಳಿದರೆ ಮಾತ್ರ ನಾವು ಬದುಕನ್ನು ಮಾಡುತ್ತೇವೆ. ಇಂದಿನ ವಿದ್ಯಾರ್ಥಿಗಳಲ್ಲಿ ಪರಿಸರದ ಜಾಗೃತಿ ಮೂಡಿಸಲಾಗಿದೆ ಮುಂಬರುವ ದಿನಗಳಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ ಸೋಲಾರ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ಹೊಂದಿದ್ದೇವೆ. ಪರಿಸರದ ಕಾರ್ಯಕ್ಕೆ ಸಂಸ್ಥೆ ಸದಾ ಅನೇಕ ಚಟುವಟಿಕೆಗಳನ್ನು ಮಾಡಲು ಮುಂದಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಡಿ.ಎಮ್.ಪಾಟೀಲ ಮಾತನಾಡಿ, ಮಹಾವಿದ್ಯಾಲಯ ಸುಮಾರು 30 ವರ್ಷಗಳಿಂದಲು ಪರಿಸರದ ಬಗ್ಗೆ ಅನೇಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಶುದ್ದಿಕರಣ ಘಟಕದಿಂದ ಬಂದಿರುವ ನೀರನ್ನು ಉಪಯೋಗಿಸಿ ಪರಿಸರದ ಬೆಳವಣಿಗೆ ಮಾಡಿರುವಲ್ಲಿ ಜಿಲ್ಲೆಯಲ್ಲಿಯೆ ನಮ್ಮ ಮಹಾವಿದ್ಯಾಲಯ ಪ್ರಥಮ. ನೈಸರ್ಗಿಕ ಸಂಪನ್ಮೂಲವನ್ನು ಬಳಕೆ ಮಾಡಿ ಪರಿಸರ ರಕ್ಷಣೆಯನ್ನು ಮಾಡುವುದು ನಮ್ಮ ಸದಾಶಯವಾಗಿದೆ. ಮುಂಬರುವ ದಿನಗಳಲ್ಲಿ ಕಾಲೇಜಿನ ಅನೇಕ ಆಡಳಿತ ವಿಭಾಗಗಳಲ್ಲಿ ಪರಿಸರ ಪ್ರೇಮಿ ಚಟುವಟಿಕೆಗಳನ್ನು ಮಾಡುವ ಉದ್ದೇಶವನ್ನು ಒಳಗೊಂಡಿದೆ ಎಂದರು.

- Advertisement -

ಈ ಸಂದರ್ಭದಲ್ಲಿ ಪ್ರಶಸ್ತಿಗೆ ಶ್ರಮಿಸಿದ ನಿವೃತ್ತ ಪ್ರಾಚಾರ್ಯ ಪ್ರೋ ಆರ್.ಎಸ್.ಬುಶೆಟ್ಟಿ, ಮತ್ತು ಪ್ರಸ್ತುತ ಪ್ರಾಚಾರ್ಯ ಪ್ರೋ ಡಿ.ಎಮ್.ಪಾಟೀಲ ಅವರನ್ನು ಶ್ರೀಗಳು ಸನ್ಮಾನಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ನೆಹರು ಪೋರವಾಲ, ಅಶೋಕ ವಾರದ, ಗಂಗಾಧರ ಜೋಗೂರ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ಸಾಹಿತಿ ಡಾ.ಸಿ.ಕೆ.ಕಟ್ಟಿ ಸೇರಿದಂತೆ ಮಹಾವಿದ್ಯಾಲಯದ ಪ್ರಾಧ್ಯಾಪಕರು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರೊ. ಡಿ.ಎಮ್.ಶರಶೆಟ್ಟಿ ಸ್ವಾಗತಿಸಿದರು, ಡಾ.ಶರಣಬಸವ ಜೋಗೂರ ವಂದಿಸಿದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group