ಬೆಳಗಾವಿ – ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.30.04.2025 ರಂದು ಬಸವೇಶ್ವರ ಜಯಂತಿ, ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಜರುಗಿತು.
ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು. ಜಗತ್ತಿಗೆ ಶಾಂತಿ ಅವಶ್ಯಕ,ಬಸವೇಶ್ವರರು ಹಾಕಿದ ಮಾಗ೯ದಲ್ಲಿ ನಾವೆಲ್ಲಾ ಸಾಗೋಣ. ನಾವೆಲ್ಲರು ಒಂದು ಎಂದು ಸಾಗೋಣ. ಬಿಳಿ ಅತ್ಯಂತ ತಿಳಿ ಬಣ್ಣವಾಗಿದೆ ಮತ್ತು ವಣ೯ರಹಿತವಾಗಿದೆ ಏಕೆಂದರೆ ಅದು ಬೆಳಕಿನ ಎಲ್ಲ ಗೋಚರವಿರುವ ತರಂಗಾಂತರಗಳನ್ನು ಸಂಪೂಣ೯ವಾಗಿ ಪ್ರತಿಫಲಿಸುತ್ತದೆ ಮತ್ತು ಚೆದುರಿಸುತ್ತದೆ. ಬಸವ ಜಯಂತಿಯಂದು ಬಿಳಿ ಬಟ್ಟೆ ಧರಿಸೋಣ ಎಂದು ನುಡಿದರು.
ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ, ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು, ಸುಜಾತಾ ಮತ್ತಿ ಕಟ್ಟಿ , ಅನಸೂಯಾ ಬಶೆಟ್ಟಿ, ಸುವರ್ಣ ಗುಡಸ,ಅನೀತಾ ಚೆಟ್ಟರ, ಶೋಭಾ ದೇಯನ್ನವರ,ಶ್ರೀದೇವಿ ನರಗುಂದ,ಶಾಂತಾ ಕ೦ಬಿ,ವಿದ್ಯಾ ಕಕಿ೯, ಶಿವಾನಂದ ಗ೦ಗಣ್ಣವರ, ವಿಜಯ ಹುದಲಿಮಠ, ಅಶೋಕ ಇಟಗಿ,ಶ೦ಕರ ಗುಡಸ, ಸುರೇಶ ನರಗುಂದ, ಆನಂದ ಕಕಿ೯, ಪ್ರಸಾದ ಹಿರೇಮಠ, ಜಾಬಗೌಡರ ಸರ್ ,ಪ್ರೇಮ ಚೌಗಲೆ, ಮಹಾತೇಂಶ ಮೆಣಸಿನಕಾಯಿ, ಶಿವಾನಂದ ನಾಯಕ, ಗುರುಸಿದ್ದಪ್ಪ ರೇವಣ್ಣವರ, ಸುನೀಲ ಸಾಣಿಕೊಪ್ಪ , ಸೋಮಶೇಖರ ಕಟ್ಟಿ ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿ ವಂದಿಸಿದರು.