ಕನಕರಾಜ್ ಗೊರೂರು ಇವರಿಗೆ ಒಲಿದ ಗುಬ್ಬಿ ವೀರಣ್ಣ ರಾಜ್ಯ ಪ್ರಶಸ್ತಿ

Must Read

ಹಾಸನ ತಾ. ಗೊರೂರು ಕನಕರಾಜ್ ಇವರು ಹುಟ್ಟು ರಂಗಭೂಮಿ ಕಲಾವಿದರಾಗಿದ್ದು ಚಿಕ್ಕಂದಿನಿಂದಲೂ ಪೌರಾಣಿಕ ನಾಟಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಮಹಾಭಾರತ ನಾಟಕಗಳಲ್ಲಿ ಶಕುನಿಯ ಪಾತ್ರಕ್ಕೆ ಜನಮನಸೊರೆಗೊಳ್ಳುವಂತೆ ಜೀವ ತುಂಬಿದವರು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಕಾಲೇಜು ಗೊರೂರುನಲ್ಲಿ ಮುಗಿಸಿ ಸ್ವಂತ ವ್ಯವಹಾರ ಪ್ರಾರಂಭಿಸಿ ಹಲವಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಡೆಸಿಕೊಂಡು ಬರುತ್ತಿದ್ದಾರೆ .

ಇವರ ಕಲಾಸೇವೆ ಯನ್ನು ಗುರುತಿಸಿ ಇವರಿಗೆ ಗುಬ್ಬಿ ವೀರಣ್ಣ ರಾಜ್ಯ ಪ್ರಶಸ್ತಿಯನ್ನು ಚುಟುಕು ಸಾಹಿತ್ಯ ಪರಿಷತ್ತು ಹಾಸನ ವತಿಯಿಂದ ನೀಡುತ್ತಿದ್ದೇವೆ ಎಂದು ಸುಂದರೇಶ್ ಡಿ ಉಡುವೇರೆ ಸಾಹಿತಿಗಳು ಹಾಗೂ ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ಅರಕಲಗೂಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group