ಗುಲಗುಂಜಿ

Must Read

ಗುಲಗುಂಜಿ ಐದು ಬಣ್ಣದಲ್ಲಿ ಲಭ್ಯ. ಬಿಳಿ, ಹಸಿರು, ಕೆಂಪು, ಕಪ್ಪು ಮತ್ತು ಹಳದಿ. ಕೆಂಪು ಬಣ್ಣದ ಗುಲಗುಂಜಿ ನೋಡಲು ಆಕರ್ಷಕ. ಕಪ್ಪು ಗುಲಗುಂಜಿ ಮಾಟ ಮಂತ್ರಗಳಿಗೆ ಹೆಚ್ಚು ಉಪಯೋಗ.

ಬಂಗಾರ ತೂಗುವ ಕಾಯಿ. ಆಯುರ್ವೇದದಲ್ಲಿ ಗುಲಗುಂಜಿ ಗಾತ್ರ ಎಂದು ಅಳತೆ ಇದೆ ಕಾಲು ಗ್ರಾಂ ಸಾಧಾರಣವಾಗಿ ತೂಗುತ್ತದೆ. ಇದರ ಸೊಪ್ಪು ಬೇರು ಕಾಂಡ ಎಲೆ ಗಳು ಔಷಧೀಯ ಪರಿಕರಗಳು. ಸಿದ್ದ ಔಷಧಿಗಳಲ್ಲಿ ಇದರ ಬಳಕೆ ಹೆಚ್ಚು.

  1. ಗುಲಗುಂಜಿಯ ಕಾಂಡವನ್ನು ಅತಿ ಮಧುರದ ಬೇರು ಎಂದು ಮೋಸ ಮಾಡಿ ಮಾರಾಟ ಮಾಡಲಾಗುತ್ತದೆ.
  2. ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಕೆಮ್ಮು ಕಫ ನಿವಾರಣೆ ಆಗುತ್ತದೆ.
  3. ಬೇರನ್ನು ಹಾಲು ತುಪ್ಪ ಮೊಸರು ಮುಂತಾದವುಗಳಿಂದ ಶುದ್ಧೀಕರಣ ಮಾಡಿ ಔಷಧಿ ತಯಾರಿಸಿ ಉಪಯೋಗಿಸುವುದರಿಂದ ಕಾಮೋತೇಜಕವಾಗಿ ಕೆಲಸ ಮಾಡುತ್ತದೆ.
  4. ಎಲೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ಸ್ವರ ಶುದ್ಧಿಯಾಗುತ್ತದೆ.
  5. ಇದರ ಎಲೆ ಕೂದಲಿನ ಬೆಳವಣಿಗೆಯಲ್ಲಿ ಉತ್ತೇಜಕವಾಗಿ ಕೆಲಸ ಮಾಡುತ್ತದೆ ನಾನು ತಯಾರಿಸುವ ಕೂದಲಿನ ಎಣ್ಣೆಯಲ್ಲಿ ಇದು ಒಳಗೊಂಡಿದೆ.
  6. ಬೇರು ಕಾಂಡ ಎಲೆಗಿಂತ ಬೀಜದಲ್ಲಿ ವಿಷ ಹೆಚ್ಚು. ನನ್ನ ಅಜ್ಜ ಹೇಳಿದಂತೆ ಹಾವಿನ ವಿಷಕಿಂತ ಹೆಚ್ಚು ಮಿಗಿಲು.
  7. ಸರಿಯಾದ ಅನುಭವ ಇಲ್ಲದೆ ಗುಲಗುಂಜಿಯನ್ನು ಹೊಟ್ಟೆಗೆ ತೆಗೆದುಕೊಳ್ಳುವುದು ಅಷ್ಟು ಸೂಕ್ತ ಅಲ್ಲ.

ಸುಮನಾ ಮಳಲಗದ್ದೆ 9980182883.

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group