Homeಸುದ್ದಿಗಳುಗುರು ಸ್ಪಂದನ ಕಾರ್ಯಕ್ರಮ

ಗುರು ಸ್ಪಂದನ ಕಾರ್ಯಕ್ರಮ

ಸವದತ್ತಿಃ ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಸವದತ್ತಿ ಉತ್ತರ,ಗುರ್ಲಹೊಸೂರ,ಸವದತ್ತಿ ದಕ್ಷಿಣ,ಇನಾಂಹೊಂಗಲ, ಕರೀಕಟ್ಟಿ ,ಉಗರಗೋಳ, ಹಿರೇಕುಂಬಿ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ಮತ್ತು ಸರ್ವ ಶಿಕ್ಷಣ ಅಭಿಯಾನಕ್ಕೆ ಸಂಬಂಧಿಸಿದ ಎಸ್.ಎಸ್.ಎ ಶಿಕ್ಷಕ ಶಿಕ್ಷಕಿಯರಿಗೆ ಗುರುಸ್ಪಂದನ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸವದತ್ತಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಸಂಘಟಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ವಹಿಸಿದ್ದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ, ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ, ದೈಹಿಕ ಶಿಕ್ಷಣಾಧಿಕಾರಿಗಳಾದ ವೈ. ಎಂ. ಶಿಂಧೆ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಎಂ.ಎಫ್.ಸಿದ್ಧನಗೌಡರ, ಪದಾಧಿಕಾರಿಗಳಾದ ಕಿರಣ ಕುರಿ,ಐ.ಪಿ.ಕಿತ್ತೂರ, ನಿರಂಜನ ಮೆಳವಂಕಿ,ನಾಗರತ್ನಾ ಕುಸುಗಲ್, ಡಿ.ಎ.ಮೇಟಿ,ಮಂಜುನಾಥ ನರೇಂದ್ರ, ಪರಸಗಡ ತಾಲೂಕ ಪ್ರಾಥಮಿ ಶಾಲಾ ಶಿಕ್ಷಕರ ಪತ್ತಿನ ಸಂಘದ ನಿರ್ದೇಶಕರಾದ ಶ್ರೀಮತಿ ಜೆ.ವ್ಹಿ.ಕಾತ್ರಾಳ, ಶಿಕ್ಷಕ ಸಂಯೋಜಕರಾದ ಎಂ.ಡಿ.ಹುದ್ದಾರ,ಜಿ.ಎಂ.ಕರಾಳೆ,ಎಂ.ಜಿ.ಕಡೇಮನಿ. ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಕಮ್ಮಾರ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕರಾದ ವಗೆನ್ನವರ,ಬಾಬಾಜಾನ್ ಮಾಳಗಿ, ಪ್ರಶಾಂತ ಮೋಟೆಕರ, ಹಿರೇಮಠ, ಕಾಶಪ್ಪಗೋಳ, ಮುಜಾವರ, ಮಾವುತ ಸೇರಿದಂತೆ ತಾಲೂಕಿನ ಸಂಬಂಧಿಸಿದ ವಲಯಗಳ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ, “ಸೇವಾ ಪುಸ್ತಕದಲ್ಲಿರುವ ಎಲ್ಲ ರೀತಿಯ ಸಮಸ್ಯೆಗಳನ್ನು ಇಂದು ಪರಿಶೀಲಿಸಿ ಏನಾದರೂ ಸೇವಾ ಪುಸ್ತಕದಲ್ಲಿ ಶಿಕ್ಷಕರ ಅವಶ್ಯಕ ಮಾಹಿತಿಗಳು ನಮೂದಾಗದೇ ಉಳಿದಿದ್ದರೆ ಇಂದು ಸ್ಥಳದಲ್ಲಿಯೇ ತಿಳಿಸುವ ಮೂಲಕ ತಮ್ಮ ಪರಿಹಾರವನ್ನು ಕಂಡುಕೊಳ್ಳಲು ಗುರುಸ್ಪಂದನ ಸಹಕಾರಿ ಈ ದಿಸೆಯಲ್ಲಿ ಸಂಘದ ಪದಾಧಿಕಾರಿಗಳ ಸಹಕಾರ ಕೂಡ ಅಮೂಲ್ಯವಾಗಿದ್ದು. ಕೋವಿಡ್ ಸಂದರ್ಭದಲ್ಲಿ ಶಿಕ್ಷಕರು ಕಾಳಜಿಪೂರ್ವಕವಾಗಿ ಇಲಾಖೆಯ ನಿಯಮಾನುಸಾರ ಕರ್ತವ್ಯ ನಿರ್ವಹಿಸಿರುವಿರಿ. ತಮಗೆ ಧನ್ಯವಾದಗಳು. ಮುಂದೆಯೂ ಕೂಡ ಇಲಾಖೆಯು ನೀಡುವ ನಿರ್ದೇಶನಗಳಿಗನುಸಾರ ತರಗತಿ ನಿರ್ವಹಣೆ ಮಾಡುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಶ್ರಮಿಸಿರಿ”ಎಂದು ಕರೆ ನೀಡಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ಮಾತನಾಡಿ, “ಇಲಾಖೆಯ ಗುರುತರ ಜವಾಬ್ದಾರಿಯನ್ನು ಕೋವಿಡ್ ಸಂದರ್ಭದಲ್ಲಿ ತಾಲೂಕಿನ ಎಲ್ಲ ಶಿಕ್ಷಕ ಶಿಕ್ಷಕಿಯರು ನಿರ್ವಹಿಸಿದ್ದು. ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಮ್ಮ ತಾಲೂಕಿನ ಎಲ್ಲರ ಪರಿಶ್ರಮ ಶ್ಲಾಘನೀಯ. ಇಲಾಖೆಯ ಎಲ್ಲ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಜೊತೆಗೆ ಇತರೆ ಇಲಾಖೆಗಳು ನೀಡುವ ಕಾರ್ಯವನ್ನು ನಮ್ಮ ಶಿಕ್ಷಕ ಶಿಕ್ಷಕಿಯರು ನಿರ್ವಹಿಸುತ್ತಿದ್ದು ಗುರುಸ್ಪಂದನ ಕಾರ್ಯಕ್ರಮದಲ್ಲಿ ಸ್ಥಳದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಘದ ಪದಾಧಿಕಾರಿಗಳು ಕೂಡ ಸಹಕಾರ ನೀಡುತ್ತೇವೆ.ಈ ದಿಸೆಯಲ್ಲಿ ತಮ್ಮ ತಮ್ಮ ಸೇವಾ ಪುಸ್ತಕಗಳನ್ನು ನೋಡಿಕೊಳ್ಳುವಂತೆ ನೀಡಿದರು. ಜೊತೆಗೆ ಗುರುಭವನ ನಿರ್ಮಾಣ. ಗುರು ಮಿತ್ರ ತಂತ್ರಾಂಶ ದ ಬಗ್ಗೆ ಸವಿವರವಾಗಿ ತಿಳಿಸಿ ಸಂಘಟನೆ ಸಂಪೂರ್ಣ ಶಿಕ್ಷಕ ಸ್ನೇಹಿಯಾಗಿದ್ದು. ಡಿ. ಎಸ್. ಇ. ಆರ್. ಟಿ ನೀಡಿರುವ ಕನಿಷ್ಠ ಕಲಿಕಾ ಮಟ್ಟದ ಸಾಮರ್ಥ್ಯವನ್ನು ಮಕ್ಕಳಿಗೆ ತಲುಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.ಈ ದಿಸೆಯಲ್ಲಿ ಶ್ರಮಿಸುವ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಜಿಲ್ಲೆಯ ಲ್ಲಿ ಮಾದರಿ ತಾಲೂಕು ಮಾಡೋಣ ” ಎಂದು ಕರೆ ನೀಡಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಎಂ.ಎಫ್.ಸಿದ್ದನಗೌಡರ ಮಾತನಾಡಿ ” ಕೆ. ಸಿ. ಎಸ್. ಆರ್. ನಿಯಮಾವಳಿ ಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಎಫ್.ಜಿ.ನವಲಗುಂದ ಪ್ರಾಸ್ತಾವಿಕವಾಗಿ ಸಂಘದ ಧ್ಯೇಯೋದ್ದೇಶಗಳನ್ನು ಕುರಿತು ತಿಳಿಸಿದರು.ಶಿಕ್ಷಕ ಎಂ.ಪಿ.ಪಾಟೀಲ ನಿರೂಪಿಸಿದರು. ಎಪ್.ಜಿ.ನವಲಗುಂದ ಸ್ವಾಗತಿಸಿದರು.ನಿರಂಜನ ಮೆಳವಂಕಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group