ಆಪ್ತ ಕಾರ್ಯದರ್ಶಿ ಹುದ್ದೆಗೆ ಹಡಪದ ಅಪ್ಪಣ್ಣ ಮಾದರಿ-ಡಾ. ಗಜಾನನ ಸೊಗಲನ್ನವರ 

Must Read

ಲಿಂಗಾಯತ ಸಂಘಟನೆ ವತಿಯಿಂದ ಹಡಪದ ಅಪ್ಪಣ್ಣ ಜಯಂತಿ

ಸಮಾಜ ತುಳಿತಕ್ಕೆ ಒಳಗಾದ ಕಾಲದಲ್ಲಿ ಹಡಪದ ಸಮಾಜದ ಅಪ್ಪಣ್ಣನವರನ್ನೇ ಕಾರ್ಯದರ್ಶಿಯಾಗಿ ನೇಮಿಸಿಕೊಂಡು ತುಳಿತದ ಸಮಾಜವನ್ನು ಎತ್ತಲು ಪ್ರಯತ್ನಿಸುವುದರ ಜೊತೆಗೆ ಅಪ್ಪಣ್ಣ ನವರ ಮೂಲಕ ಕ್ರಾಂತಿಯನ್ನೇ ಮಾಡಿದ್ದು ನಿಜಕ್ಕೂ ಇತಿಹಾಸ. ಅಂತಹ ಅಪ್ಪಣ್ಣನವರು ಕಾಯಕ ನಿಷ್ಠೆಯ ಮೂಲಕ ಅಚ್ಚುಕಟ್ಟಾಗಿ ಕಾರ್ಯದರ್ಶಿ ಸ್ಥಾನವನ್ನು ನಿರ್ವಹಿಸಿ ಜಗತ್ತಿಗೆ ಬಸವಣ್ಣನವರ ವಚನ ಸಾಹಿತ್ಯ ಪಸರಲು ಅಪ್ಪಣ್ಣನವರ ಸೇವೆಯು ಅನನ್ಯವಾಗಿದೆ ಎಂದು ಸಾಹಿತಿ ಮತ್ತು ಶಿಕ್ಷಕರಾದ ಡಾ ಗಜಾನನ ಸೊಗಲನ್ನವರ ಹೇಳಿದರು.

ರವಿವಾರ ದಿ. 13 ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಹಮ್ಮಿಕೊಂಡ ‘ಹಡಪದ ಅಪ್ಪಣ್ಣನವರ ಜಯಂತಿ’ಯಲ್ಲಿ ಅವರು ಮಾತನಾಡಿದರು.

ಜಾಡ್ಯ ಮೌಡ್ಯ ಬಿಟ್ಟು ಮುಂದೆ ಸಾಗೋಣ. ನಡೆ,ನುಡಿ, ಕ್ರಿಯೆ ಆಚಾರ ವಿಚಾರವನ್ನು ಶುದ್ಧವಾಗಿ ಇರಿಸೋಣ ಎಂದು ಮಾದರಿಯಾದ ಜೀವನ ಸಾಗಿಸಿದ ಅಪ್ಪಣ್ಣನವರ ಕ್ರಿಯಾಶೀಲ ಮನೋಭಾವ ನಿಜಕ್ಕೂ ಅವರ ವಚನಗಳಲ್ಲಿ ನಾವು ಕಾಣಬಹುದು ಎಂದು ಅಪ್ಪಣ್ಣನವರ ಹಲವಾರು ವಚನಗಳನ್ನು ವಿಶ್ಲೇಷಿಸಿದರು.

ಕಾರ್ಯದರ್ಶಿ ಸ್ಥಾನ ಒಬ್ಬರನ್ನು ಎಷ್ಟು ಮೇಲಕ್ಕೆ ಎತ್ತುತ್ತದೆ ಎನ್ನುವುದಕ್ಕೆ ಅಪ್ಪಣ್ಣ ನವರ ಕಾರ್ಯನಿಷ್ಠೆಯೇ ಸಾಕ್ಷಿ ಎಂದು ಅವರ ಕಾರ್ಯವೈಖರಿ ಕುರಿತಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ತೆಗ್ಗಿ ಸದಾಶಿವ ದೇವರಮನಿ ಮುಂತಾದವರು ಅಪ್ಪಣ್ಣ ನವರ ವಚನಗಳನ್ನು ವಿಶ್ಲೇಷಣೆ ಮಾಡಿದರು.ಕಾರ್ಯಕ್ರಮದಲ್ಲಿ ಆನಂದ ಕರ್ಕಿ,ವಿ ಕೆ ಪಾಟೀಲ,ಸುವಣಾ೯ ಚವಲಗಿ, ಸುರೇಶ ನರಗುಂದ, ಸುವರ್ಣ ತಿಗಡಿ, ಬಾಬು ತಿಗಡಿ, ಸೋಮಶೇಖರ ವಾಲಿ ಇಟಗಿ,ಮಹಾಂತೇಶ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ,ಜಾನವಿ ಘೂಪ೯ಡೆ,ಬಸವರಾಜ ಬಿಜ್ಜರಗಿ,ಗುರುಸಿದ್ದಪ್ಪ ರೆವಣ್ಣವರ, ಶಿವಾನಂದ ನಾಯಕ,ಶಿವಾನಂದ ತಲ್ಲೂರ, ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು

ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು ಸಂಗಮೇಶ ಅರಳಿ ಸ್ವಾಗತಿಸಿ ನಿರೂಪಿಸಿದರು ಸುರೇಶ ನರಗುಂದ ವಂದಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group