ಹೈಕು

Must Read

ಹೈಕು

ಪತ್ರ ಹರಿತ್ತು
ಸೊಗಸಾದ ಸಂಪತ್ತು
ಹಚ್ಚ ಹಸಿರು

*

ಬೇವಿನ ಮರ
ಬಿಸಿಲಿನ ಪ್ರತಾಪ
ಬಿಡಾರ ತಂಪು

*

ಕವಿ ಸಮಯ
ಪದಗಳ ಲಾಲಿತ್ಶ
ಹೃದ್ಶಾನವನ

*

ಮರ ಹೆಮ್ಮರ
ಕೊಡಲಿಯಿಂದ ಪೆಟ್ಟು
ನಿರ್ಜೀವ ನೋಟ

*

ಬೆಳ್ಳಕ್ಕಿ ಸಾಲು
ಸಾರೋಟು ಅಂದ ಚಂದ
ಹೊಟ್ಟೆ ತುಂಬಲು

*

ನಮ್ಮದೇ ಬಿಂಬ
ಕನ್ನಡಿ ಪ್ರತಿಬಿಂಬ
ಸತ್ಶ ದರ್ಶನ

*

ಆಸೆ ನೂರೆಂಟು
ಮಟಮಟ ಮಧ್ಮಾನ್ಹ
ಬಿಸುಲ್ಗುದುರೆ

*

ಜೇನಿನ ಹನಿ
ಹೂವಿನ ಮಕರಂದ
ಭೃಂಗ ಜೇಂಕಾರ

*

ಶಿವಶಂಕರ
ಹಿಮಾಲಯˌ ಶಿಖರ
ಓಂಕಾರ ನಾದ

*

ಕೈಲಾಸನಾಥ
ಜಡೆ ಶಂಕರಲಿಂಗ
ಗಂಗೆ ಉದ್ಭವ

*

ತೋಂ ತೋಂ ತನನ
ನಾಕುತಂತಿಯ ಲೀಲೆ
ಜ್ಞಾನದೆತ್ತರ


ಅಮರ್ಜಾ
ಅಮರೇಗೌಡ ಪಾಟೀಲ
ಬುತಿ ಬಸವೇಶ್ವರ ನಗರ, ಕುಷ್ಟಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group