Homeಸುದ್ದಿಗಳುಕಾಯಕದಿಂದ ಜೀವನ ಆನಂದ-ಗುರುಬಸವಲಿಂಗ ಸ್ವಾಮೀಜಿ

ಕಾಯಕದಿಂದ ಜೀವನ ಆನಂದ-ಗುರುಬಸವಲಿಂಗ ಸ್ವಾಮೀಜಿ

ಮೂಡಲಗಿ:- ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ ಎಂದು ಅರಭಾವಿ ಮಠದ ಪೀಠಾಧಿಪತಿ ಶ್ರೀಗುರುಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ 19ನೇ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಅನ್ಯ ಮಾರ್ಗದಿಂದ ಮಾಡುವ ಗಳಿಕೆ ಕ್ಷಣಿಕ ತೃಪ್ತಿಯಾಗಿದ್ದು, ಅದು ಆತ್ಮವಂಚನೆಗೆ ಕಾರಣವಾಗುತ್ತದೆ ಎಂದರು.

ಶಿವಾನುಭವ ಗೋಷ್ಠಿಯಲ್ಲಿ  ಚಿಂತನ ಮಾಡಿದ ಕಂಕಣವಾಡಿಯ ಮಾರುತಿ ಶರಣರು ಮಾತನಾಡಿ, ಮನಃಶುದ್ಧಿಗಾಗಿ ಮತ್ತು  ಸದ್ವಿಚಾರಕ್ಕಾಗಿ ಆಧ್ಯಾತ್ಮಿಕ ಸಾಧನೆಯು ಉತ್ತಮ ಮಾರ್ಗವಾಗಿದೆ. ಮನುಷ್ಯ ತಾನು ಕಾಲವಾಗುವ ಪೂರ್ವದಲ್ಲಿ ಸಮಾಜಮುಖಿಯಾಗಿ ಕಾರ್ಯ ಮಾಡುವ ಮೂಲಕ ಜೀವನ ಮುಕ್ತಿ ಪಡೆಯಬೇಕು ಎಂದರು.

ಶಿಕ್ಷಕ ಅಪ್ಪಾಸಾಹೇಬ ಕುರುಬರ ಅವರಿಂದ ಸಂಗೀತ ಜರುಗಿತು. ಬಳೋಬಾಳದ ಭಕ್ತರಿಂದ ದಾಸೋಹ ಸೇವೆ ಜರುಗಿತು. ವಿ.ಕೆ. ನಾಯ್ಕ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group