ಕಾಗವಾಡ: ಸಮರ್ಪಣಾ ಭಾವದಿಂದ, ಮೇಲಾಧಿಕಾರಿಗಳ,ಸಹೋದ್ಯೋಗಿಗಳ, ಸಾರ್ವಜನಿಕರ ಮತ್ತು ಮುದ್ದು ವಿದ್ಯಾರ್ಥಿಗಳ ಸಹಾಯ ಸಹಕಾರದಿಂದ, ಸಾರ್ಥಕ ಸರಕಾರಿ ಸೇವೆ ಸಲ್ಲಿಸಿದ ಖುಷಿಯಿದೆ ಎಂದು ಸರಕಾರಿ ಮರಾಠಿ ಪ್ರಾಥಮಿಕ ಶಾಲೆ ಕೃಷ್ಣಾ ಕಿತ್ತೂರಿನ ಕನ್ನಡ ಶಿಕ್ಷಕರಾದ ಸಂಜಯ ಇಚಲಕರಂಜಿ ಅವರು ಅಭಿಪ್ರಾಯ ಪಟ್ಟರು.
ಅವರು 31 ನೇ ಜುಲೈ ರಂದು ಸೇವಾ ನಿವೃತ್ತರಾದ ನಿಮಿತ್ತ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಜೊತೆಗೆ ಕುಟುಂಬದ ಸಹಾಯ ಸಹಕಾರವನ್ನು ನೆನೆದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕಾಗವಾಡ ವಲಯದ ಮಾನ್ಯ ಬಿಇಒ ಅವರಾದ ಪಿ ಬಿ ಮದಭಾವಿ ಅವರು, ಸಂಜಯ ಇಚಲಕರಂಜಿ ಅವರನ್ನು ಸತ್ಕರಿಸಿ, ನಿವೃತ್ತಿ ಪ್ರತಿ ಸರಕಾರಿ ನೌಕರರ ಜೀವನದ ಒಂದು ಹಂತ,, ಅದರೆ ನೀವು ಎಲ್ಲರ ಮೆಚ್ಚುಗೆ ಗಳಿಸಿ ಉತ್ತಮ ಸೇವೆ ಸಲ್ಲಿಸಿದ ಆನಂದವಿರಬೇಕು ಎಂದು ಹೇಳಿದರು.
ಬಿ ಆರ್ ಪಿ ಗಳಾದ ದರೂರ ಅವರು ಉಪಸ್ಥಿತರಿದ್ದು, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶಾಂತಲಾ ಇಚಲಕರಂಜಿ, ಮರಾಠಿ ಶಾಲೆಯ ಶಿಕ್ಷಕ ವೃಂದ, ಎಸ್ ಡಿ ಎಂ ಸಿ ಸದಸ್ಯರು, ಮಂಜರಿ ಇಚಲಕರಂಜಿ, ಪ್ರಣವ್ ಇಚಲಕರಂಜಿ, ಮುದ್ದು ಮಕ್ಕಳು ಮತ್ತು ಸಾರ್ವಜನಿಕರು ಹಾಜರಿದ್ದು ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿದರು. ಇವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ, ವಕೀಲರಾದ ರವಿ ಶಾಸ್ತ್ರಿ, ಗ್ರಂಥಾಲಯ ಇಲಾಖೆಯ ಪ್ರಕಾಶ ಇಚಲಕರಂಜಿ, ಸಂಜಯ ಅಂಗಡಿ, ವಿಕ್ರಾಂತ್ ನೇಸರಿ, ಸರ್ವ ಶಿಕ್ಷಣ ಅಭಿಯಾನದ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಹೊಸಮನಿ, ಗಿರೀಶ್ ಹೊಂಗಲ, ದಾಸರ್, ಆನಂದ ಮುತ್ತಗಿ, ಎಚ್ ಆರ್ ಬಿಲಕೇರಿ ಮುಂತಾದವರು,ಹಿತೈಷಿಗಳು ಶುಭ ಕೋರಿದರು.