spot_img
spot_img

ಭೀಮೋತ್ಸವ ಕಾರ್ಯಕ್ರಮ: ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಫಲಕ ವಿತರಣೆ

Must Read

- Advertisement -

ಸಿಂದಗಿ: ಮಕ್ಕಳು ದೈಹಿಕವಾಗಿ ಸದೃಢ ಹೊಂದಿದರೆ ಮಾತ್ರ ಮಾನಸಿಕವಾಗಿಯೂ ಬಲಿಷ್ಟಗೊಳ್ಳವರು ಅದಕ್ಕೆ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಾದ ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ, ಸಿದ್ಧು ಪಿ. ಅಲಗೂರ ಹೇಳಿದರು.

ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಭೀಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಕ್ಕಳು ಕ್ರೀಡೆಗೆ ಹೆಚ್ಚು ಅವಕಾಶವನ್ನು ನೀಡಬೇಕು ಕೇವಲ ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಕನಸು ಕಾಣುವವರು ಸಚಿನ್ ತೆಂಡ್ಕೂಲ್ಕರ್ , ಸೆಹ್ವಾಗ್ ನಂತಹವರು ಭಾರತ ದೇಶಕ್ಕೆ ಕ್ರಿಕೆಟ್ ಆಡಿ ದೇಶಕ್ಕೆ ಹೆಸರು ತಂದ ಉದಾಹರಣೆಯನ್ನು ನಾವು ಇತಿಹಾಸದ ಪುಟದಲ್ಲಿ ಕಾಣಬಹುದು ಎಂದರು.

ನಾಯಕತ್ವ ತರಬೇತಿದಾರ ಕನ್ಸಲ್ಟೆಂಟ್ ಎಂ.ಡಿ ರೂಟ್ ಎಜುಕೇಶನ್ ಸೊಸೈಟಿ ವಿನಯ ಪಾಟೀಲ್ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಪಾಲಕರು ಕೆಲವೊಂದು ತ್ಯಾಗಮಾಡಬೇಕಾಗಿದೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಫೋನ್ ಬಳಕೆ ಹೆಚ್ಚಾಗುತ್ತಿರುವುದು ಮೊದಲು ತಂದೆ- ತಾಯಿಯರು ಬಿಡಬೇಕು ಮಕ್ಕಳ ಓದಿನ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು, ಮಕ್ಕಳ ಓದಿಗೆ ಶಿಕ್ಷಣ ಸಂಸ್ಥೆ ಮಾತ್ರ ಹೊಣಿಗಾರರಲ್ಲ ತಂದೆ- ತಾಯಿಯರು ಮಕ್ಕಳ ಓದಿನ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು.

- Advertisement -

ಸಂಸ್ಥೆಯ ಆಧ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿ, ಕೋರೊನ ಅಂತಹ ಮಹಾಮಾರಿಯಲ್ಲಿ ಮಕ್ಕಳ ಶಿಕ್ಷಣದಿಂದ ವಂಚಿತರಾಗದೆ ಅವರಿಗೆ ಆನ್ ಲೈನ್ ಮುಖಾಂತರ ಶಿಕ್ಷಣವನ್ನು ನೀಡಲು ನಮ್ಮ ಸಂಸ್ಥೆಯ ಪ್ರಾಧ್ಯಾಪಕ ಮಿತ್ರರು ಶ್ರಮವಹಿಸಿದ್ದಾರೆ, ಪ್ರಥಮ ಬಾರಿಗೆ ಸಿಂದಗಿಯಲ್ಲಿ ಆನ್ ಲೈನ್ ಮುಖಾಂತರ ಶಿಕ್ಷಣವನ್ನು ನೀಡಿದ್ದು ನಮ್ಮ ಶಾಲೆಯಾಗಿದೆ. ಭೀಮಾ ಶಾಲೆಯನ್ನು ತುಂಬಾ ಶ್ರಮ ಪಟ್ಟು ಕಟ್ಟಲಾಗಿದೆ, ಎಲ್ಲಾ ರೀತಿಯ ಶಿಕ್ಷಣವನ್ನು ನೀಡಲಾಗಿದೆ.ಮತ್ತು ಪಾಲಕರು ಪ್ರೋತ್ಸಾಹಿಸಿದರಿ. ಯಾವ ಮಗು ಯಾವ ವಿಷಯದಲ್ಲಿ ಆಸಕ್ತಿಯಿದೆಯೊ ಅದನ್ನು ಗಮನದಲ್ಲಿ ಇಟ್ಟುಕೊಂಡು ಅವರನ್ನು ಇನ್ನಷ್ಟು ರೀತಿಯಲ್ಲಿ ಮಾರ್ಗದರ್ಶನ ನಿಡುವೆವು, ನಮ್ಮ ಶಾಲೆಯಲ್ಲಿ ಕಲಿತ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವುದು ಸ್ವಾಗತಾರ್ಹ ಎಂದರು.

ಸಂಸ್ಥೆಯ ನಿರ್ದೇಶಕರಾದ ಜಿ.ಕೆ.ಪಡಗಾನೂರ, ಡಾ. ಎಂ.ಎಂ. ಪಡಶೇಟ್ಟಿ, ದತ್ತು ಮವೂರ, ಪ್ರಶಾಂತ ಕಮತಗಿ, ಶ್ರೀಮಂತ ಮಲ್ಲೇದ, ಶಾಂತವೀರ ಕುಂಬಾರ, ಶರಣು ಮಾವೂರ ಪ್ರಾಂಶುಪಾಲೆ ಎಸ್ .ಪಿ. ಶಾಹಿಮೊಲ್ ಕೋ- ಆರ್ಡಿನೇಟರ್ ಟಿನ್ನಿ ರಾಬಿನ್ ಇದ್ದರು, ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ವಿತರಿಸಲಾಯಿತು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group