ಬಿಜೆಪಿಯವರು ಪ್ರಣಾಳಿಕೆಯಲ್ಲಿ ಹೇಳಿದ ತರ ನಡೆದುಕೊಂಡಿದ್ದಾರಾ ?- ಜಮೀರ ಪ್ರಶ್ನೆ

Must Read

ಬೀದರ: ಬಿಜೆಪಿಯೇನೋ ಪ್ರಣಾಳಿಕೆ ಬಿಡುಗಡೆ ಮಾಡಿದೆ ಆದರೆ ಅದರಂತೆ ಅವರು ನಡೆದಿದ್ದಾರಾ ಎಂದು ಕಾಂಗ್ರೆಸ್ ಮುಖಂಡ ಜಮೀರ ಅಹ್ಮದ ಕೇಳಿದರು.

ಬೀದರನಲ್ಲಿ ಪ್ರಚಾರ ಸಭೆಯ ಮತರ ಪತ್ರಕರ್ತರೊಡನೆ ಮಾತನಾಡಿದ ಅವರು, ದಸರಾ, ದೀಪಾವಳಿ ಹಬ್ಬಕೆ ‌ಮಾತ್ರ ಸಿಲಿಂಡರ್ ಕೊಡುತ್ತಾರಂತೆ. ನಾವು ಹಾಗಲ್ಲ ಪ್ರತಿ ಮಹಿಳೆಗೆ 2 ಸಾವಿರ ಕೊಡುತ್ತಿರುವುದು  ಎಂದು ಬಿಜೆಪಿ ಪ್ರಣಾಳಿಕೆಗೆ ಟಾಂಗ್ ಕೊಟ್ಟರು.

ಈಗ ರಾಜ್ಯಕ್ಕೆ ಮೋದಿ‌ ಹಾಗೂ ಅಮಿತ್ ಶಾರನ್ನು ಕರೆಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಬಿಜೆಪಿ ಅಭಿವೃದ್ಧಿ ಶೂನ್ಯವಾಗಿದೆ. ಚುನಾವಣೆಯಲ್ಲಿ ನಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೇಳಿ ಮತ‌ ಕೇಳುತ್ತೇವೆ. ಬಿಜೆಪಿ ತರ ಹಿಂದೂ – ಮುಸಲ್ಮಾನ ಡಿವೈಡ್ ಮಾಡಿ ಮತ ಕೇಳಲ್ಲ. 40% ಕಮಿಷನ್ ಹೊಡೆಯೋದೆ ಬಿಜೆಪಿಗರ ಸಾಧನೆ ಎಂದು ಜಮೀರ ಖಾನ್ ಲೇವಡಿ ಮಾಡಿದರು.

ಮೋದಿಯಿಂದ ದೇಶಕ್ಕೆ ಒಳ್ಳೆಯದು ಆಗುತ್ತದೆ ಎಂದು ನಿರೀಕ್ಷೆ ಇತ್ತು. ಏನಾದ್ರು ದೇಶಕ್ಕೆ ಒಳ್ಳೆಯದಾಗಿದೆಯಾ ಎಂದು ಕೇಳಿದ ಅವರು, ಮೋದಿ, ಅಮಿತ್ ಶಾ ರಾಜ್ಯಕ್ಕೆ ಪದೇ ಪದೇ ಯಾಕೆ ಬರುತ್ತಾ ಇದ್ದಾರೆ ಗೊತ್ತಾ

ಅವರ ಬಳಿ ಸಾಧನೆ ಏನೂ ಇಲ್ಲ. ಯಡಿಯೂರಪ್ಪನವರನ್ನು ಸೈಡಲೈನ್ ಮಾಡಿದ್ದಾರೆ. ಈಗ ಬಿಜೆಪಿಯಲ್ಲಿ ರಾಜ್ಯದಲ್ಲಿ ಮಾಸ್ ಲೀಡರ್ ಯಾರಿದ್ದಾರೆ. ತನ್ನ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗದ ಸಚಿವ ಸುಧಾಕರ ಕಾಮಿಡಿ ಪೀಸ್ ಅಲ್ವೆ ಎಂದು ನುಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಕಲ್ಲೋಳಿ ಜಾತ್ರೆಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿ

  ಮೂಡಲಗಿ: ಉತ್ತರ ಕರ್ನಾಟಕದ ಮತ್ತು ಜಿಲ್ಲೆಯ ಜಾಗೃತ ದೇವರಾದ  ಮೂಡಲಗಿ ತಾಲೂಕಿನ ಕಲ್ಲೋಳಿಯ ಶ್ರೀ ಹಣಮಂತ ದೇವರ ಜಾತ್ರಾ ಕಾರ್ತಿಕೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ...

More Articles Like This

error: Content is protected !!
Join WhatsApp Group