ಮೈಕ್ ಸ್ಟ್ಯಾಂಡ್ ಗೆ ರಾಷ್ಟ್ರ ಧ್ವಜ ಸುತ್ತಿದ ಕಾಂಗ್ರೆಸ್!
ಬೀದರ: ಮಾತೆತ್ತಿದರೆ ತಮ್ಮದು ಸ್ವಾತಂತ್ರ್ಯ ಕ್ಕೆ ಹೋರಾಡಿದ ಪಕ್ಷ, ದೇಶಪ್ರೇಮಿ ಕಾಂಗ್ರೆಸ್ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರದ ಭರಾಟೆಯಲ್ಲಿ ರಾಷ್ಟ್ರಧ್ವಜವನ್ನು ತಾವು ಭಾಷಣ ಬಿಗಿಯುವ ಮೈಕ್ ಸ್ಟ್ಯಾಂಡಿಗೆ ಸುತ್ತಿ ಅವಮಾನಿಸಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಪ್ರಚಾರ ಸಮಾವೇಶ ಸಭೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದ್ದು ಕಾಂಗ್ರೆಸ್ ಮುಖಂಡ ಜಮೀರ ಅಹಮದ ಖಾನ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಎಲ್ಲರ ಎದುರೇ ಇದು ಜಾಹೀರಾಗಿದೆ ಆದರೂ ಯಾರೊಬ್ಬರೂ ಈ ಬಗ್ಗೆ ದನಿಯೆತ್ತದೇ ಇರುವುದು ವಿಪರ್ಯಾಸವಾಗಿದೆ.
ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್ ಪರ ಪ್ರಚಾರ ಸಭೆಯು ಬೀದರ್ ಜಿಲ್ಲೆಯ ಚಿಟ್ಟಗುಪ್ಪ ಪಟ್ಟಣದಲ್ಲಿ ನಡೆದಿತ್ತು ಕಾಂಗ್ರೆಸ್ ನಾಯಕ ಜಮೀರ ಅಹಮದ್ ಖಾನ್, ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ ಈ ಸಭೆಯಲ್ಲಿ ಭಾಗಿಯಾಗಿದ್ದರು. ಜಮೀರ ಅಹ್ಮದ ಅವರು ಮಾತನಾಡುತ್ತ ಕೋಮುವಾದಿ ಬಿಜೆಪಿಯನ್ನು ದೂರ ಇಡಬೇಕು ಎಂದು ಹೇಳುವ ಆವೇಶದಲ್ಲಿ ತಮ್ಮ ನೆರಳಲ್ಲಿಯೇ ರಾಷ್ಟ್ರಧ್ವಜಕ್ಕೆ ಅವಮಾನವಾದದ್ದನ್ನು ನೋಡಲೇ ಇಲ್ಲ.
ರಾಷ್ಟ್ರಧ್ವಜವನ್ನು ಮೈಕ್ ಸ್ಟ್ಯಾಂಡಿಗೆ ಸುತ್ತಿದ ಫೋಟೋ ಹಾಗೂ ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದ್ದು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ವರದಿ: ನಂದಕುಮಾರ ಕರಂಜೆ, ಬೀದರ