ಬೆಳಗಾವಿ: ನಗರದ ಫುಲಭಾಗ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನo,7 ರಲ್ಲಿಂದು ಕರ್ನಾಟಕ ರಾಜ್ಯ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಖಾನಾಪುರ, ಬೆಳಗಾವಿ ನಗರ, ಬೆಳಗಾವಿ ತಾಲೂಕು ಸಂಘಗಳ ಪದಾಧಿಕಾರಿಗಳ ಸಭೆಯು ಬೆಳಗಾವಿ ನಗರ ಸಂಘದ ಗೌರವ ಅಧ್ಯಕ್ಷರಾದ ಡಿ ಎಸ್ ಪೂಜಾರ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಅವರು ಸಂಘಟನೆ ಬಲಗೊಳಿಸುವ ಅಗತ್ಯತೆ ವಿವರಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ಅವರು ಮಾತನಾಡಿ, ಸಂಘದ ಕಾರ್ಯಚಟುವಟಿಕೆ ವಿವರಿಸಿ ಮುಂದಿನ ಕಾರ್ಯಕ್ರಮಗಳಿಗೆ ಸರ್ವರ ಸಹಕಾರ ಬಯಸಿದರು.ಜಿಲ್ಲೆಯಲ್ಲಿ ಶಿಸ್ತು ಬದ್ಧ ರೀತಿಯಲ್ಲಿ ಸಂಘದ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ,ಗಿರೀಶ ಜಗಜಂಪಿ, ರಸೂಲ್ ಖಾನ್, ಖಾನಾಪುರದ ಎಸ್ ಬಿ ಜಕಾತಿ,ಕಿತ್ತೂರಿನ ಬಾಬು ವಿ ಹಿರೇಮಠ,ಶ್ರೀಮತಿ ಎನ್ ಆರ್ ಮೆಳವಂಕಿ, ಶ್ರೀಮತಿ ಎನ್ ಬಿ ತಳವಾರ, ಶ್ರೀಮತಿ ಎ ಎಮ್ ಹುಲಗಬಾಳಿ, ಶ್ರೀಮತಿ ಶೇಖಮ್ಮನವರ, ಶಿವಾನಂದ ಹಿತ್ತಲಮನಿ, ಆಯ್ ಜಿ ಕಂಚಿಮಠ, ಬಿ ವಾಯ್ ಮಡಿವಾಳರ,ಎಸ್ ಟಿ ಕೋಲಕಾರ, ಜೆ ಬಿ ಪರಮಾಜ,ಪಿ ಜಿ ಕಾಂಬಳೆ, ಎಮ್,ವಾಯ್,ಕೊರ್ಡೇ ಸೇರಿದಂತೆ ಹಲವರು ಮಾತನಾಡಿದರು.
ಸಭೆಯಲ್ಲಿ ವಾರ್ಷಿಕ ಸದಸ್ಯತ್ವ ಸಂಗ್ರಹಣೆ ಅಭಿಯಾನ ಆರಂಭಿಸಲಾಯಿತು, ಮುಖ್ಯೋಪಾಧ್ಯಾಯರ ಸಮಸ್ಯೆ ಕುರಿತು ಸುದೀರ್ಘ ಚರ್ಚಿಸಿ ಅವುಗಳ ಪರಿಹಾರಕ್ಕಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಲಾಯಿತು,ವಿಷಯ ಸನ್ 2022-23 ನೆಯ ಸಾಲಿನ ಕ್ರಿಯಾಯೋಜನೆ ತಯಾರಿಸಲಾಯಿತು, ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ, ವಾರ್ಷಿಕ ಗಳಿಕೆ ರಜೆ ಮುಂಜೂರ ಮಾಡುವಂತೆ ಅಗ್ರಹಿಸಿ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳ ಗಮನ ಸೆಳೆಯಲು ಬೆಂಗಳೂರಿಗೆ ನಿಯೋಗ ತೆಗೆದುಕೊಂಡು ಹೋಗಲು ಸಮ್ಮತಿಸಲಾಯಿತು.
ಪ್ರಾರಂಭದಲ್ಲಿ ಮುಖ್ಯ ಶಿಕ್ಷಕರಾದ ಎಸ್ ಎ ನದಾಫ ಪ್ರಾರ್ಥಿಸಿದರು, ನಗರ ಘಟಕದ ಅಧ್ಯಕ್ಷರಾದ ಅರ್ಜುನ ಡಿ ಸಾಗರ ಸ್ವಾಗತಿಸಿದರು, ಪ್ರಧಾನಕಾರ್ಯದರ್ಶಿ ಬಸವರಾಜ ಹಟ್ಟಿಹೋಳಿ ಕಾರ್ಯಕ್ರಮ ನಿರ್ವಹಿಸಿದರು, ಮುಖ್ಯ ಶಿಕ್ಷಕರಾದ ಎಸ್ ಜಿ ಚವಲಗಿ ವಂದಿಸಿದರು.