spot_img
spot_img

ಬೆಣ್ಣೆ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು

Must Read

- Advertisement -

‌              ‌                                                                                           ಬೆಣ್ಣೆಯಲ್ಲಿ ಅಂತದ್ದೇನಿದೆ ವಿಶೇಷತೆ…?

ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಬೆಣ್ಣೆ ಎಂದರೆ ಬಲು ಪ್ರೀತಿ. ಪುಟ್ಟ ಮಕ್ಕಳಿಗೆ ದಿನವೂ ಬೆಣ್ಣೆ ಕೊಡುವುದರಿಂದ ಮೂಳೆ ಗಟ್ಟಿಯಾಗುತ್ತಲ್ಲದೆ, ಅವರ ಬೆಳವಣಿಗೆಗೂ ಸಹಕಾರಿಯಾಗಿದೆ. ಬೆಣ್ಣೆಯಿಂದ ಮಾಡಿದ ತಿಂಡಿಗಳೂ ಸಹ ಅಷ್ಟು ರುಚಿಯಾಗಿರುತ್ತದೆ. ಒಂದು ಸ್ಪೂನ್ ಬೆಣ್ಣೆ ತಿಂದರೆ ಮತ್ತೆ ಬೇಕು ಎನಿಸುತ್ತದೆ. ಆರೋಗ್ಯ ವೃದ್ಧಿಗೆ ಸಹಕಾರಿಯಾಗಿರುವ ಈ ಬೆಣ್ಣೆ, ಅತಿಯಾಗಿ ಸೇವಿಸಿದರೂ ಒಳ್ಳೆಯದಲ್ಲ. ಪ್ರತೀ ದಿನ ಬೆಣ್ಣೆ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನವಿದೆ ಇಲ್ಲಿದೆ ಮಾಹಿತಿ. 

ಬೆಣ್ಣೆ ಯಲ್ಲಿರುವ ಕೊಬ್ಬಿನ ಅಂಶವು ಅದನ್ನು ಸೇರಿಸಲಾಗುವ ಆಹಾರಗಳಲ್ಲಿ ಇರುವ ಅಗತ್ಯ ಜೀವಸತ್ವಗಳ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಆದರೆ ಅದನ್ನು ಮಿತಿಯಲ್ಲಿ ತಿನ್ನಬೇಕು ಎನ್ನುತ್ತಾರೆ ತಜ್ಞರು. ಬೆಣ್ಣೆಯ ರುಚಿಯನ್ನು ಇಷ್ಟಪಡದವರು ಬಹಳ ಕಡಿಮೆ. ಅದು ಬೇಕ್ ಮಾಡಿದ ಖಾದ್ಯಗಳ ರುಚಿಯನ್ನು ಹೆಚ್ಚಿಸುವಲ್ಲಿ ಬೆಣ್ಣೆಯ ಪಾತ್ರ ಮಹತ್ವದ್ದು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಬೆಣ್ಣೆಯನ್ನು ಸೇವಿಸುವುದನ್ನು ಆರೋಗ್ಯ ಮತ್ತು ಪೌಷ್ಟಿಕಾಂಶ ತಜ್ಞರು  ಶಿಫಾರಸ್ಸು ಮಾಡುವುದಿಲ್ಲ. ಆದರೆ ಆರೊಗ್ಯಕರ , ಸಮತೋಲಿನ ಆಹಾರ ಕ್ರಮದಲ್ಲಿ ಬೆಣ್ಣೆ ಒಂದು ಸ್ಥಾನವಂತು ಇದ್ದೇ ಇದೆ. ಬೆಣ್ಣೆ ಖಾದ್ಯಕ್ಕೆ ಒಂದು ಒಳ್ಳೆಯ ಫ್ಲೇವರ್ ನೀಡುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಬೆಣ್ಣೆಯಲ್ಲಿ ವಿಟಮಿನ್, ಖನಿಜಾಂಶ, ಆಂಟಿ ಆಕ್ಸಿಡೆಂಟ್, ಉತ್ತಮ ಕೊಬ್ಬಿನಾಂಶವಿದ್ದು, ಹೃದಯ ಸಂಬಂಧಿ ಕಾಯಿಲೆ, ಕಣ್ಣಿನ ದೃಷ್ಟಿ, ಹಾರ್ಮೋನ್‌ಗಳ ಸಮತೋಲನ, ಮೂಳೆ ಬಲಿಷ್ಠಗೊಳಿಸುವ ಗುಣವಿದೆ. ಮಾರುಕಟ್ಟೆ ಕಳಪೆ ಬೆಣ್ಣೆ ಸಿಗುತ್ತವೆ. ಇದರಲ್ಲಿ ಟ್ರಾನ್ಸ್ ಕೊಬ್ಬುಗಳು ಮತ್ತು ಬಣ್ಣಗಳಿಂದ ತುಂಬಿರುತ್ತವೆ. ಮಾರ್ಕೆಟಿಂಗ್ ಹಕ್ಕುಗಳ ಹೊರತಾಗಿಯೂ ಆರೋಗ್ಯಕ್ಕೆ ಪ್ರಯೋಜನ ನೀಡುವುದಿಲ್ಲ. ಏಕೆಂದರೆ ಇದರಲ್ಲಿ ಬೇಡದ ಅನೇಕ ಅಂಶಗಳನ್ನು ಹಾಕಿರುತ್ತಾರೆ. ಇವು ಆರೋಗ್ಯಕ್ಕೆ ಕುತ್ತು ತರುತ್ತವೆ. ಬಹುತೇಕ ಜನರು ತುಪ್ಪ, ಬಿಳಿ ಬೆಣ್ಣೆ ಮತ್ತು ಹಾಲಿನಿಂದ ತಯಾರಿಸುವ ಕೆಲವು ಆಹಾರ ಪದಾರ್ಥಗಳು ಅಧಿಕ ಕೊಬ್ಬಿನಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಅಧಿಕ ಆರೋಗ್ಯ ಕಾಳಜಿ ಹಾಗೂ ದೇಹದ ತೂಕ ನಿಯಂತ್ರಣದಲ್ಲಿ ಇಡಲು ಬಯಸುವವರು ಸಾಮಾನ್ಯವಾಗಿ ತುಪ್ಪ ಮತ್ತು ಬೆಣ್ಣೆಯಿಂದ ಆದಷ್ಟು ದೂರ ಉಳಿಯಲು ಬಯಸುತ್ತಾರೆ. ಇವುಗಳಿಂದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟವು ಅಧಿಕವಾಗುತ್ತದೆ ಎನ್ನುವ ಪೂರ್ವಭಾವಿ ತಪ್ಪು ಕಲ್ಪನೆಗಳಿವೆ.

- Advertisement -

ಹಳದಿ ಮತ್ತು ಬಿಳಿ ಬೆಣ್ಣೆಯ ನಡುವಿನ ವ್ಯತ್ಯಾಸವೇನು?

ಬಿಳಿ ಬೆಣ್ಣೆಯನ್ನು ಸೇವಿಸುವುದರಿಂದ ದೇಹವು ತ್ವರಿತ ಶಕ್ತಿಯನ್ನು ಪಡೆಯುತ್ತದೆ. ಬಿಳಿ ಬೆಣ್ಣೆಯಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಿರುವುದರಿಂದ ಇದನ್ನು ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ ದೊರೆಯುತ್ತದೆ.

ಆರೋಗ್ಯದ ದೃಷ್ಟಿಯಿಂದ, ಬಿಳಿ ಮತ್ತು ಹಳದಿ ಬೆಣ್ಣೆಯ ನಡುವಿನ ಪೌಷ್ಟಿಕಾಂಶದ ಮೌಲ್ಯದಲ್ಲಿ ದೊಡ್ಡ ವ್ಯತ್ಯಾಸವಿದೆ. ಹಳದಿ ಬೆಣ್ಣೆಯು ಕೃತಕ ಬಣ್ಣಗಳು, ಹೆಚ್ಚುವರಿ ಉಪ್ಪು, ಕೊಬ್ಬು ಮತ್ತು ಸಕ್ಕರೆಯಿಂದ ಮಾಡಲ್ಪಟ್ಟಿದೆ, ಆದರೆ ಬಿಳಿ ಬೆಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದು ಮತ್ತು ಈ ಪದಾರ್ಥಗಳನ್ನು ಹೊಂದಿರುವುದಿಲ್ಲ. ವಿಟಮಿನ್ ಎ ಮತ್ತು ಡಿ ಬಿಳಿ ಬೆಣ್ಣೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಪ್ರತಿಯೊಬ್ಬರೂ ಬಿಳಿ ಬೆಣ್ಣೆಯನ್ನು ತಿನ್ನಬಹುದು ಮತ್ತು ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಬಯಸುವವರು ಮತ್ತು ತೂಕ ಇಳಿಸಲು ಬಯಸುವವರು ತಮ್ಮ ಆಹಾರದಲ್ಲಿ ಬೆಣ್ಣೆಯನ್ನು ಬಳಸಬಹುದು. ಬೆಣ್ಣೆಯಲ್ಲಿ ಇರುವ ಲೆಸಿಥಿನ್ ಎಂಬ ಅಂಶವು ಕೊಬ್ಬನ್ನು ಸುಡಲು ಸಹಾಯ ಮಾಡುವುದು. ಅಲ್ಲದೆ ಮಿದುಳಿನ ಆರೋಗ್ಯವು ಉತ್ತಮವಾಗಿಡಲು ಸಹಾಯ ಮಾಡುವುದು. ದಿನಕ್ಕೆ ಎರಡು ಟೀ ಚಮಚವನ್ನು ಮಿತಗೊಳಿಸಿ, ಗಣನೀಯವಾಗಿ ಸೇವಿಸುತ್ತಾ ಬಂದರೆ ಆರೋಗ್ಯವು ಉತ್ತಮವಾಗಿ ಇರುವುದು. ವ್ಯಕ್ತಿಯಲ್ಲಿ ಶಕ್ತಿ ಮತ್ತು ಕ್ರಿಯಾಶೀಲತೆಯು ದ್ವಿಗುಣವಾಗುವುದು. ಮೂಳೆಗಳನ್ನು ಬಲಪಡಿಸುತ್ತದೆ

- Advertisement -

ಬಿಳಿ ಬೆಣ್ಣೆಯನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗಲು ತುಂಬಾ ಪ್ರಯೋಜನಕಾರಿ. ಬಿಳಿ ಬೆಣ್ಣೆಯಲ್ಲಿ ಕ್ಯಾಲ್ಸಿಯಂ ಕಂಡುಬರುತ್ತದೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಕೀಲು ನೋವಿನಿಂದಲೂ ಪರಿಹಾರ ನೀಡುತ್ತದೆ. ಬೆಣ್ಣೆ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು ಏಕೆಂದರೆ ಇದರಲ್ಲಿ ಉತ್ತಮವಾದ ವಿಟಮಿನ್ ಕೆ, ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಅಪಧಮನಿಯ ಕ್ಯಾಲ್ಸಿಫಿಕೇಶನ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಗಟ್ಟಿಯಾದ ಅಪಧಮನಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಲೌರಿಕ್ ಆಸಿಡ್ ಎಂಬುದು ಉತ್ತಮವಾದ ಆಂಟಿ ಫಂಗಲ್ ಕಾಂಪೌಡ್. ಇದು ಬೆಣ್ಣೆಯಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಇದು ಫಂಗಲ್ ಇನ್ಫೆಕ್ಷನ್ ಆಗುವುದನ್ನು ತಡೆಯುತ್ತದಲ್ಲದೆ, ಕ್ಯಾಂಡಿಡಾ ಬೆಳವಣಿಗೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಥೈರಾಯ್ಡ್‌ ರೋಗಕ್ಕೂ ರಾಮಬಾಣ:

ಥೈರಾಯ್ಡ್ ರೋಗಿಗಳು ಬಿಳಿ ಬೆಣ್ಣೆಯನ್ನು ಸೇವಿಸಬೇಕು. ಏಕೆಂದರೆ ಬಿಳಿ ಬೆಣ್ಣೆಯು ಅಯೋಡಿನ್‌ನ್ನು ಹೊಂದಿರುತ್ತದೆ, ಇದು ಥೈರಾಯ್ಡ್ ಗ್ರಂಥಿಗಳನ್ನು ಬಲಪಡಿಸುತ್ತದೆ. ಇದರೊಂದಿಗೆ ಇದನ್ನು ಸೇವಿಸುವುದರಿಂದ ಥೈರಾಯ್ಡ್ ನಿಂದ ಉಂಟಾಗುವ ಗಂಟಲಿನ ಊತದಿಂದ ಪರಿಹಾರ ದೊರೆಯುತ್ತವೆ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group