ಮೂಡಲಗಿ- ಮೂಡಲಗಿ ಶಿಕ್ಷಣ ಸಂಸ್ಥೆಯ, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಯಿಂದ 7 ನೇ ತರಗತಿಯವರೆಗೆ ಮೂಡಲಗಿಯ ಸರಕಾರಿ ಆಸ್ಪತ್ರೆಯಿಂದ ಇಬ್ಬರು HIO ಗಳಾದ ಸಭಾ ಹಾಗೂ ಕೀರ್ತಿ, ಇಬ್ಬರು ಆಶಾ ಕಾರ್ಯಕರ್ತೆಯರಾದ ಸಂಗೀತಾ ಸಣ್ಣಕ್ಕಿ ಮತ್ತು ನಿರ್ಮಲಾ ದರೂರ ಶಾಲಾ ಮುಖ್ಯ ಗುರುಗಳು ಹಾಗೂ ಸಿಬ್ಬಂದಿಯವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿದರು
ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಕಾರಿಯಾದ ಕೆಲವೊಂದು ಸಲಹೆ ಮತ್ತು ಮಾಹಿತಿಯನ್ನು ನೀಡಿ, ಈ ತಪಾಸಣೆಗಳಲ್ಲಿ ಎತ್ತರ, ತೂಕ, ದೃಷ್ಟಿ, ದಂತ ಮತ್ತು ಮಾನಸಿಕ ಆರೋಗ್ಯ ಪರೀಕ್ಷೆಗಳು ಸೇರಿದಂತೆ ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಸ್ವಚ್ಛತೆಗಳ ಬಗ್ಗೆ ಅರಿವು ನೀಡಿದರು.
ಈ ಮೂಲಕ, ಶಾಲೆಗಳು ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗೆ ಕೊಡುಗೆ ನೀಡುತ್ತವೆ. ಕೆಲವು ಶಾಲೆಗಳು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಸಹ ಆಯೋಜಿಸುತ್ತವೆ. ಇದು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ಶಾಲೆಯ ಪ್ರಧಾನ ಗುರುಗಳಾದ ಸುಭಾ.ಎಸ್. ಕುರಣೆ ಸ್ವಾಗತಿಸಿದರು. ಶಿಕ್ಷಕಿ, ಅಮೃತಾ ಪಾಟೀಲ ನಿರೂಪಿಸಿದರು. ಶಿವಾಜಿ ರಾವನ ವಂದಿಸಿದರು. ಅನೀಲ ಹುಚರಡ್ಡಿ ವದಿಶಾರಾಣಿ, ನಂದಗಾಂವ, ಅಕ್ಷತಾ.ಪಾಟೀಲ, ಅರ್ಚನಾ ಮಹೇಂದ್ರಕರ ಹಾಜರಿದ್ದರು.
ಕೊನೆಗೆ ಸಿಹಿ ಹಂಚಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ವರದಿ: ಮುರಿಗೆಪ್ಪ ಮಾಲಗಾರ

