ತೆಂಗಿನ ಮರಕ್ಕೆ ಸಿಡಿಲು ಬಿದ್ದು ಮರಕ್ಕೆ ಬೆಂಕಿ..
ಬೀದರ: ಅಚಾನಕ್ಕಾಗಿ ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆ ಹಾಗೂ ತೆಂಗಿನ ಮರಕ್ಕೆ ಬಡಿದ ಸಿಡಿಲಿಗೆ ಸುಟ್ಟು ಹೋದ ತೆಂಗಿನ ಮರ. ಈ ಘಟನೆಯಿಂದಾಗಿ ಬೀದರ ಜಿಲ್ಲೆಯಲ್ಲಿ ತಂಪು ವಾತಾವರಣದ ಜೊತೆ ಆತಂಕದ ವಾತಾವರಣವೂ ಸೃಷ್ಟಿಯಾಯಿತು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಸಮ್ ಗ್ರಾಮದಲ್ಲಿ ಘಟನೆ ಸಿಡಿಲು ಬಿದ್ದು ತೆಂಗಿನ ಮರವೊಂದು ಧಗ ಧಗನೆ ಹೊತ್ತಿ ಉರಿಯಿತು.
ಗಡಿ ಜಿಲ್ಲೆ ಬೀದರ್ ನ ಚಿಕ್ಲಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆ ಬಿದ್ದಿದ್ದರಿಂದ ಜನತೆ ಖುಷಿಗೊಂಡರು ಆದರೂ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅವಾಂತರ ಸೃಷ್ಟಿಯಾಗಿದ್ದರಿಂದ ಆತಂಕಗೊಂಡರು. ಧಾರಾಕಾರ ಮಳೆಗೆ ವಿದ್ಯುತ್ ಕಂಬ ಧರೆಗೆ ಉರುಳಿತು. ಯಾರು ಇಲ್ಲದೆ ವೇಳೆ ನೆಲಕ್ಕುರುಳಿದ್ದರಿಂದ ತಪ್ಪಿದ ಬಾರಿ ಅನಾಹುತ.
ಬೀದರ್, ಔರಾದ್, ಕಮಲನಗರ, ಭಾಲ್ಕಿ ಸೇರಿದಂತೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯಿತು.
ರಣ ಬಿಸಿಲಿಗೆ ಹೈರಾಣಾಗಿದ್ದ ಗಡಿ ಜಿಲ್ಲೆಯ ಜನರಿಗೆ ತಂಪೆರೆದ ಮಳೆರಾಯ. ರೈತರ ಮುಖದಲ್ಲಿ ಮೂಡಿದ ಮಂದಹಾಸ.
ಇದಲ್ಲದೆ ಲೋಕಸಭಾ ಚುನಾವಣೆ ಹಿನ್ನೆಲೆ ಹಾಕಿದ ಚೆಕ್ ಪೋಸ್ಟ್ ಟಿನ್ ಶೆಡ್ ಹಾರಿ ಹೋಗಿದ್ದ ಘಟನೆ ಬೀದರ ಜಿಲ್ಲೆಯ ಚಿಲ್ಲರಗಿ ಗ್ರಾಮದಲ್ಲಿ ನಡೆದಿದೆ.
ಚಿಲ್ಲರಗಿ ಗ್ರಾಮದಿಂದ ಆಂಧ್ರಪ್ರದೇಶಕ್ಕೆ ಹೋಗುವ ಕಾರು ಹಾಗು ಗಾಡಿ ಮೇಲೆ ನಿಗಾ ವಹಿಸಲು ತೆಗೆದ ಚೆಕ್ ಪೋಸ್ಟ್ ಹಾರಿಹೋಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ