ಮೋರಟಗಿ : ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ, ಎಷ್ಟು ಅರೋಗ್ಯವಂತನಾಗಿ ಬದುಕಿದ್ದಾನೆ ಎನ್ನುವುದು ಮುಖ್ಯ, ಅರೋಗ್ಯ ಭಾಗ್ಯಕಿಂತ ಇನ್ನೊಂದು ಭಾಗ್ಯವಿಲ್ಲ, ಸುಖಕರ ಜೀವನಕ್ಕೆ ಅರೋಗ್ಯವೇ ಭಾಗ್ಯ ಎಂದು ವೈದ್ಯಾಧಿಕಾರಿ ಡಾ. ಮಂಜುನಾಥ್ ಟಿ. ಡಿ.ಹೇಳಿದರು.
ಸೋಮವಾರ ಗ್ರಾಮದ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಜುವಾರಿ ಫರ್ಮ್ ಹಬ್ ಲಿಮಿಟೆಡ್ ಜೈಕಿಸಾನ್ ಜಂಕ್ಷನ್ ಮೋರಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯದಿಂದ ಜೀವನ ಕಳೆಯುವ ಒಬ್ಬ ಸಾಮಾನ್ಯ ವ್ಯಕ್ತಿ ಜೀವನದಲ್ಲಿ ಏನನ್ನಾದರೂ ಸಾದಿಸಬಹುದು ಅನಾರೋಗ್ಯಕ್ಕೆ ತುತ್ತಾದರೆ ನೆಮ್ಮದಿಯ ಜೀವನ ಕಳೆಯಲು ಸಾಧ್ಯವಿಲ್ಲ ಸಾರ್ವಜನಿಕರು ಆದಷ್ಟು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮಕ್ಕಳನ್ನು ದುಶ್ಚಟಗಳಿಂದ ದೂರವಿಡಬೇಕು ತಮ್ಮೆಲ್ಲರ ಅರೋಗ್ಯ ಕಾಪಾಡಿಕೋಳ್ಳುವ ನಿಟ್ಟಿನಲ್ಲಿ ಸರಕಾರ ಹತ್ತು ಹಲವಾರು ಯೋಜನೆಗಳು ಉಚಿತವಾಗಿ ನೀಡುತ್ತಿದೆ ಅದರ ಜೊತೆಗೆ ಬಡ ರೈತರಿಗಾಗಿ ನಿರ್ಗತಿಕರಿಗಾಗಿ ಜುವಾರಿ ಫರ್ಮ್ ಹಬ್ ಲಿಮಿಟೆಡ್ ಜೈ ಕಿಸಾನ್ ಜಂಕ್ಷನ್ ಮೋರಟಗಿ ಇವರು ಅರೋಗ್ಯ ಶಿಬಿರ ಹಮ್ಮಿಕೊಂಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದ್ದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ನುರಿತ ವೈದ್ಯರಿಂದ ದಿನವಿಡೀ ರಕ್ತ ಬಿಪಿ ಶುಗರ್ ಹಾಗೂ ಕಣ್ಣಿನ ತಪಾಸಣೆ ಕಾರ್ಯಕ್ರಮ ಜರುಗಿತು.
ವಿವಿಧ ಗ್ರಾಮಗಳಿಂದ ಬಂದ ಊಟದ ವ್ಯವಸ್ಥೆ ಕಲ್ಪಿಸಿದರು.
ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಧ್ಯಕ್ಷರ ಪ್ರತಿನಿಧಿ ರವಿಕಾಂತ ನಡುವಿನಕೇರಿ, ಉಪಾಧ್ಯಕ್ಷ ಇಸುಫ್ ಮುಲ್ಲಾ, ಡಾ. ಗಿರೀಶ ಪಾಟೀಲ, ಕೆಡಿಪಿ ಸದಸ್ಯ ಎನ್ ಎನ್ ಪಾಟೀಲ, ರೇವಣಸಿದ್ಧ ಮಸಳಿ, ಎಂ ಟಿ ಸಿಂಗೆ, ಜಿ ಕೆ ನೆಲ್ಲಗಿ, ಬಿ ಟಿ ಬೋನಾಳ, ಡಾ. ಶ್ವೇತಾ ಕೋರಿ, ನಸೀಮಾ ಬೇಗಂ, ಮೈನುದ್ದಿನ್ ಮಣಿಯಾರ, ಶರಣು ಮಳಗಿ,
ಮಹಾದೇವ ನಾಟೀಕಾರ ಏರಿಯಾ ಮ್ಯಾನೇಜರ್ ವಿಜಯಪುರ, ಮಲ್ಲಿಕಾರ್ಜುನ ಕೊಟ್ಟರಗಿ ಏರಿಯಾ ಮ್ಯಾನೇಜರ್ ಯಾದಗಿರಿ, ಭೀಮರೆಡ್ಡಿ ಮಲ್ಲೇದ ಹಿರಿಯ ಮ್ಯಾನೇಜರ್ ಜೇವರ್ಗಿ, ಶಿವುಕುಮಾರ ಪಾಟೀಲ್, ಮ್ಯಾನೇಜರ್ ಮೋರಟಗಿ, ಜೈಕಿಸಾನ್ ಸಹಾಯಕ ಶೇಖರ ಪೂಜಾರಿ ಜುವಾರಿ ಜಂಕ್ಷನ್ ಮತ್ತು ಅರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.