Homeಸುದ್ದಿಗಳುಎಚ್ ಜಿ ಪಿ ಯು ಕಾಲೇಜಿನ ಫಲಿತಾಂಶ ಶೇ.100

ಎಚ್ ಜಿ ಪಿ ಯು ಕಾಲೇಜಿನ ಫಲಿತಾಂಶ ಶೇ.100

spot_img

ಸಿಂದಗಿ: ಪಟ್ಟಣದ ತಾಲೂಕಾ ಶಿಕ್ಷಣ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ 100 ರಷ್ಟಾಗಿದೆ ಎಂದು ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ವಾಣಿಜ್ಯ ವಿಭಾಗದಲ್ಲಿ ಮಂಜುಳಾ ಸೊನ್ನದ 600 ಅಂಕಗಳಿಗೆ 576 (96%) ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಕಲಾ ವಿಭಾಗದಲ್ಲಿ ಈರಣ್ಣ ಖಾಡಗೀಕರ 565 ( 94.16%), ಹಣಮಂತ್ರಾಯ ಮುರಡಿ 558 ( 93%) ಬಂದೇನಮಾಜ ಜಮಾದಾರ 555 ( 92.5%) ಅಂಕಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ಅತ್ಯುನ್ನತ ಶ್ರೇಣಿಯಲ್ಲಿ 21, ಪ್ರಥಮ 438, ದ್ವಿತೀಯ ಸ್ಥಾನ 76 ಸೇರಿದಂತೆ 535 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಒಟ್ಟು ಕಾಲೇಜಿನ ಫಲಿತಾಂಶ ಶೇ 100 ರಷ್ಟಾಗಿದ್ದು. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮ್ನರಾದ ಅಶೋಕ ಮನಗೂಳಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂಧನೆ ಸಲ್ಲಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group