ಫೆ. 19 ರಂದು ಹೈಕೋರ್ಟ್ ಚಲೋ

Must Read

ಸಿಂದಗಿ: ಕಳೆದ ಜ.26 ರಂದು ರಾಯಚೂರು ಜಿಲ್ಲೆ ನ್ಯಾಯಾಲಯದಲ್ಲಿ ನಡೆದ ಅಸಾಂವಿಧಾನಿಕ ಕೃತ್ಯದ ಕುರಿತು ಹಾಗೂ ಆ ಕೃತ್ಯವನ್ನು ಎಸಗಿದ ಸಮಾನತೆ ವಿರೋಧಿ ವಿಕೃತ ಮನಸ್ಸಿನ ಮಲ್ಲಿಕಾರ್ಜುನ ಗೌಡರನ್ನು ಆ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕು ಹಾಗೂ ಇನ್ನು ಹತ್ತು ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಫೇ.19 ರಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಹೈಕೋರ್ಟ ಚಲೋ ಎಂಬ ಬೃಹತ್ ಪ್ರಮಾಣದ ಕಾರ್ಯಕ್ರಮಕ್ಕೆ ನಾಡಿನ ಯುವ ಹೋರಾಟಗಾರರು ಸಮಾನ ಮನಸ್ಕರು ಪ್ರಗತಿಪರ ಚಿಂತಕರು ಸಂವಿಧಾನದ ಹಿತೈಷಿಗಳು ಹಾಗೂ ಬುದ್ದಿಜೀವಿಗಳು ಪಾಲ್ಗೊಳ್ಳಬೇಕು ಅದಲ್ಲದೆ ವಿಜಯಪುರ ಜಿಲ್ಲೆ ಹಾಗೂ ಸಿಂದಗಿ ತಾಲೂಕಿನಿಂದ ಲಕ್ಷೋಪಲಕ್ಷ ಸಮಾನ ಮನಸುಗಳು ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿ ಕೊಡಬೇಕೆಂದು ಹರ್ಷವರ್ಧನ ಪೂಜಾರಿಯವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group