ರಸ್ತೆಯಲ್ಲಿ ಹೊಂಡವೋ, ಹೊಂಡದಲ್ಲಿ ರಸ್ತೆಯೋ- ಇಟ್ಟಮಡುವಿನ  ರಸ್ತೆ  ಅವ್ಯವಸ್ಥೆಯ ಆಗರ

Must Read

ಬೆಂಗಳೂರು : ಬೆಂಗಳೂರು ಮಹಾನಗರಿಯ ಹದಗೆಟ್ಟ ರಸ್ತೆಗಳ ಕಥೆ ಮುಗಿಯುವಂತೆಯೇ ಇಲ್ಲವೇನೋ. ರಸ್ತೆಗಳಲ್ಲಿ ಗುಂಡಿಗಳಲ್ಲಿ ವಾಹನ ಸವಾರರು ಬಿದ್ದು ಪ್ರಾಣತ್ಯಾಗ ಮಾಡಿದಂಥ ಘಟನೆಗಳು ನಡೆಯುತ್ತಿದ್ದರೂ ಬಿಬಿಎಂಪಿಯವರು ಇನ್ನೂ ಕಣ್ಮುಚ್ಚಿಕೊಂಡೇ ಕುಳಿತಿದ್ದಾರೆ.

ನಗರದ ಬನಶಂಕರಿ 3 ನೇ ಹಂತದ ಇಟ್ಟಮಡುವಿನಲ್ಲಿ  ಒಂದು ವಿಶೇಷವಾದ ರಸ್ತೆ ಇದೆ.ಆ ರಸ್ತೆಯು  ಹೊಂಡ ಗಳಿಂದ ನಿರ್ಮಾಣವಾಗಿದ್ದೋ ಅಥವಾ  ರಸ್ತೆಯೇ ಹೊಂಡವಾಗಿ  ಮಾರ್ಪಾಡು ಆಗಿದೆಯೇ ಎಂಬುದು   ಅಲ್ಲಿನ  ಸ್ಥಳೀಯ ನಿವಾಸಿಗಳ  ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅಲ್ಲದೆ ಬೆಂಗಳೂರಿನ ದುರವಸ್ಥೆಯನ್ನೂ ಎತ್ತಿ ತೋರಿಸುವಂತಿದೆ.

ಇಟ್ಟಮಡು , ಟಿ.ಜಿ. ಲೇಔಟ್ ನ ರಸ್ತೆಯಲ್ಲಿ ಬೆಸ್ಕಾಂ  ರವರು 11 ಕೆ.ವಿ ವೈರ್ ಗಳನ್ನು ಭೂಮಿಯ ಆಳದಲ್ಲಿ ಹಾಕಲು  ರಸ್ತೆಯಲ್ಲಿ ಗುಂಡಿ ತೋಡಿ  ಅದನ್ನು ಸರಿಯಾಗಿ ಮುಚ್ಚದೆ ಇರುವ ಪರಿಣಾಮ   ಜೋರಾಗಿ ಮಳೆ  ಬಂದಾಗ ರಸ್ತೆಯಲ್ಲಿ  ನೀರು ನಿಂತು ಕೆಮ್ಮಣ್ಣು ಗುಂಡಿ  ನಿರ್ಮಾಣ ವಾಗುತ್ತಿದೆ.  ಟಿ.ಜಿ ಲೇಔಟ್ ಹಾಗೂ  ಇಟ್ಟಮಡು ಭಾಗದಲ್ಲಿ ಬೆಸ್ಕಾಂ ಅವರು ಮ್ಯಾನ್  ಹೋಲ್ ಸರಿಯಾಗಿ ಮುಚ್ಚದೆ ಇರುವ ಪರಿಣಾಮ  ರಸ್ತೆಯಲ್ಲಿ ದೊಡ್ಡ ಹೊಂಡ ಬಿದಿದೆ.

ಒಟ್ಟಿನಲ್ಲಿ ಒಂದು ಬದಿ ಬೆಸ್ಕಾಂ ಅವರು ಹೊಂಡ ತೋಡಿದರೆ ಮತ್ತೊಂದು ಬದಿ ಜಲ ಮಂಡಳಿ  ಯವರು ಹೊಂಡ ತೊಡಿಸಿ ಬನಶಂಕರಿ 3 ನೇ ಹಂತದ  ಟಿ.ಜಿ.ಲೇಔಟ್ ಹಾಗೂ ಇಟ್ಟಮಡು ರಸ್ತೆಗಳು ಹೊಂಡದಿಂದಲೇ ತುಂಬಿ ರಸ್ತೆಗಳು ಮಾಯವಾಗಿ  ಅವ್ಯವಸ್ಥೆಯ ಅಗರವಾಗಿದೆ.

ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು  ರಸ್ತೆಯಲ್ಲಿ ದೊಡ್ಡ ಪ್ರಮಾಣದ ಅಪಘಾತ ಸಂಭವಿಸುವ ಮುನ್ನ ಗಮನಿಸಿ ಸಮಸ್ಯೆ  ಬಗೆಹರಿಸ ಬೇಕಾಗಿ ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.


ಚಿತ್ರ: ವರದಿ :-  ತೀರ್ಥಹಳ್ಳಿ ಅನಂತ ಕಲ್ಲಾಪುರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group