ಸವದತ್ತಿ: ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ ಹೆಬಳಿಯವರಿಗೆ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ರಾದ ಎಚ್ ಆರ್ ಪೆಟ್ಲೂರ ಹಾಗೂ ನಿಕಟಪೂರ್ವ ಅಧ್ಯಕ್ಷ ಸುರೇಶ ಬೆಳವಡಿ. ಪ್ರಧಾನ ಕಾರ್ಯದರ್ಶಿ ಎಪ್.ಜಿ.ನವಲಗುಂದ ಎಮ್.ಐ.ನರುಗೋಳ ಸವದತ್ತಿಯ ಇಂಜಿನೀಯರ್ ಜಿಲ್ಲಾ ಪಂಚಾಯತ ಹಾಗೂ ಸವದತ್ತಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ರಾದ ಆನಂದ ಮೂಗಬಸವ ಸಮ್ಮುಖದಲ್ಲಿ ಹೆಬಳಿಯವರ ಹಿರೇಬಾಗೇವಾಡಿಯ ಮನೆಯಲ್ಲಿ ಹೆಬಳಿ ದಂಪತಿಗಳನ್ನು ಗೌರವಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಕುಮಾರ ಹೆಬಳಿಯವರು “ಸವದತ್ತಿ ತಾಲೂಕಿನ ಎಲ್ಲಾ ಶಿಕ್ಷಕ ಬಾಂಧವರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಸಂಘಟಿಸಿ ತನ್ಮೂಲಕ ಸಂಘದ ಕಾರ್ಯಗಳನ್ನು ಸಕ್ರಿಯವಾಗಿ ಹಾಗೂ ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ನಿಮಗೆ ನೀಡಿದ ಗುರುತರವಾದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವಿರಿ. ತಮ್ಮ ಈ ಗೌರವ ಸನ್ಮಾನ ಮರೆಯಲಾಗದು”ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಎಫ್. ಜಿ. ನವಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿ “ಶಿಕ್ಷಕರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ತಮ್ಮಂತಹ ಜಿಲ್ಲಾ ಅಧ್ಯಕ್ಷ ರು ನಮಗೆ ದೊರಕಿದ್ದು ನಮ್ಮ ಭಾಗ್ಯ. ದೇವರು ನಿಮ್ಮ ಕುಟುಂಬ ದ ಎಲ್ಲ ಸದಸ್ಯರಿಗೆ ಆಯುರಾರೋಗ್ಯ ನೀಡಲಿ” ಎಂದು ಶುಭ ಕೋರಿದರು.
ಎಚ್. ಆರ್. ಪೆಟ್ಲೂರ ಮಾತನಾಡಿ, “ಮುಂದಿನ ದಿನಗಳಲ್ಲಿ ಸವದತ್ತಿ ಯಲ್ಲಿ ಗುರುಸ್ಪಂದನ ನಡೆಸುವ ಯೋಜನೆ ಇದ್ದು ಸದ್ಯದಲ್ಲೇ ದಿನಾಂಕ ತಿಳಿಸಲಾಗುವುದು. ತಮ್ಮ ಗೌರವ ಉಪಸ್ಥಿತಿ ಈ ಸಂದರ್ಭದಲ್ಲಿ ಇರಲಿ” ಎಂದು ಆಶಿಸಿದರು.