ಸಿಂದಗಿ– ದೇಶದ ಅಭಿವೃದ್ದಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅನನ್ಯ. ಸಹಕಾರಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ತಾಂತ್ರಿಕತೆ ಬರಬೇಕಾಗಿದೆ ಎಂದು ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ಹೇಳಿದರು.
ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ 1992 ಬ್ಯಾಚಿನ ವಿದ್ಯಾರ್ಥಿ ಕೆ.ಎಚ್.ವಡ್ಡರ ಅವರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಹಿನ್ನೆಲೆಯಲ್ಲಿ ಸನ್ಮಾನವನ್ನು ನೆರವೇರಿಸಿ ಮಾತನಾಡಿ, ಒಂದು ಕಾಲದಲ್ಲಿ ಪಡಿತರ ಧಾನ್ಯ ವಿತರಿಸಲು ಸೀಮಿತವಾಗಿದ್ದ ಸಹಕಾರಿ ಸಂಘಗಳು ಇಂದು ಬಹು ದೊಡ್ಡ ಬ್ಯಾಂಕುಗಳಾಗಿ ನಿರ್ಮಾಣಗೊಂಡು ಸಾಮಾಜಿಕ ಕಾರ್ಯ ಮಾಡುತ್ತಿವೆ. ಗ್ರಾಮೀಣ ಪ್ರದೇಶಗಳ ಅಭಿವೃದ್ದಿಯಲ್ಲಿ ಈ ಕ್ಷೇತ್ರದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಸನ್ಮಾನವನ್ನು ಸ್ವೀಕರಿಸಿದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಕೆ.ಎಚ್.ವಡ್ಡರ ಮಾತನಾಡಿ, ನಾನು ಈ ಕಾಲೇಜಿನ ಹಳೆಯ ವಿದ್ಯಾರ್ಥಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ನೀಡಿರುವ ಪರಿಣಾಮದಿಂದ ನಾನು ಈ ಹುದ್ದೆಯಲ್ಲಿ ಬರಲು ಕಾರಣವಾಯಿತು. ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಇಂದು ಸಹಕಾರಿ ಕ್ಷೇತ್ರಕ್ಕೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ನಾನು ಸೇವೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಅಭಿಮತ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಶಂಕರಗೌಡ ಪಾಟೀಲ, ಉಪನ್ಯಾಸಕರಾದ ಸತೀಶ ಪಾಟೀಲ, ಆರ್.ಬಿ.ಹೊಸಮನಿ, ಎಮ್.ಎಸ್.ಕಿರಣಗಿ, ಆರ್.ಸಿ.ಕಕ್ಕಳಮೇಲಿ, ಬಿ.ಎಸ್.ಬಿರಾದಾರ, ಎಫ್.ಎ.ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಎ.ಆರ್.ಸಿಂದಗಿಕರ, ಸಿದ್ದಲಿಂಗ ಕಿಣಗಿ, ಡಾ ಶಾಂತಿಲಾಲ ಚವ್ಹಾಣ, ಎ.ಬಿ.ಪಾಟೀಲ, ಸತೀಶ ಬಸರಕೋಡ ಬಿ.ಸಿ.ಪಾಟೀಲ, ವ್ಹಿ.ಎಮ್.ಪಾಟೀಲ, ಸಿ.ಡಿ.ಗಚ್ಚಿನಮಠ, ಪಿ.ಎಸ್.ಪಾಟೀಲ, ಎಮ್.ಎಸ್. ಡುಮಕನಾಳ, ರವಿ ಉಪ್ಪಾರ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.