spot_img
spot_img

ಬುಡಕಟ್ಟು ಸಂಸ್ಕೃತಿ ರಕ್ಷಿಸುವ ಕಾರ್ಯವಾಗಬೇಕು – ಡಾ. ಶಾಂತಿಲಾಲ

Must Read

- Advertisement -

ಸಿಂದಗಿ– ಬುಡಕಟ್ಟು  ಜನಾಂಗದ ಕಲೆ, ಆಚಾರ ವಿಚಾರ ವೇಷ ಭೂಷಣಗಳು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತವೆ. ಆ ಜನಾಂಗದ ಕಲೆಗಳು ಇಂದು ಅಳಿವಿನ ಅಂಚಿನಲ್ಲಿದೆ ಅವುಗಳನ್ನು ರಕ್ಷಿಸುವ ಮತ್ತು ಬೆಳೆಸುವ ಕಾರ್ಯವಾಗಬೇಕು ಎಂದು ಸ್ಥಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಶಾಂತಿಲಾಲ ಚವ್ಹಾಣ ಅಭಿಪ್ರಾಯ ಪಟ್ಟರು.

ಪಟ್ಟಣದ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಕನ್ನಡ ಜಾನಪದ ಪರಿಷತ್ತು ತಾಲೂಕಾ ಘಟಕ ಸಿಂದಗಿ ಅವರು ಆಯೋಜಿಸಿರುವ ವಿಶ್ವ ಬುಡಕಟ್ಟು ದಿನಾಚರಣೆಯಲ್ಲಿ ಉಪನ್ಯಾಸ ನೀಡಿ, ಬುಡಕಟ್ಟು ಜನಾಂಗ ಇಂದು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಲೇವಾದೇವಿಗಾರರ ಶೋಷಣೆ ಸೇರಿದಂತೆ ಅನೇಕ  ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಆಡಳಿತದ ಅಭಿವೃದ್ದಿಗೆ ಸಂಬಂಧಿಸಿದಂತೆ ಯೋಗ್ಯ ತರಬೇತಿ ನೀಡಿ ಅವರದೆ ಆದ ತಂಡವನ್ನು ಸರ್ಕಾರ ರಚಿಸಬೇಕು ಮತ್ತು ಆ ಜನಾಂಗಕ್ಕಾಗಿ ಯೋಗ್ಯ ಸೌಲಭ್ಯಗಳನ್ನು ನೀಡಿದರೆ ಆ ಜನಾಂಗ ಮುಖ್ಯವಾಹಿನಿಗೆ ಬರಲು ಕಾರಣವಾಗುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ವಿಶ್ವ ಬುಡಕಟ್ಟು ದಿನಾಚಾರಣೆಯನ್ನು ವಸ್ತುನಿಷ್ಠವಾಗಿ ಆಚರಿಸಿ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಆಯಾ ರಾಜ್ಯ ಸರ್ಕಾರ ಈಡೇರಿಸುತ್ತದೆ ನಮ್ಮ ರಾಜ್ಯದಲ್ಲಿಯೂ ಅಂತ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಕೆ.ಎಚ್.ಸೋಮಾಪೂರ ಅವರು ಮಾತನಾಡಿ, ಬುಡಕಟ್ಟು ಜನಾಂಗದ ಕಲೆಗಳು ಅತ್ಯಂತ ವಿಶಿಷ್ಟತೆಯಿಂದ ಕೂಡಿರುತ್ತವೆ. ಆ ಕಲೆಗಳು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.

- Advertisement -

ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಗುಳಪ್ಪ ಯರನಾಳ ಹಾಗೂ ಸಾನಿಧ್ಯ ವಹಿಸಿದ ಆಲಮೇಲದ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿದರು.

ವೇದಿಕೆ ಮೇಲೆ ನಿವೃತ್ತ ಪ್ರಾಚಾರ್ಯ ಆಯ್.ಬಿ.ಬಿರಾದಾರ, ಪಿ.ಎಮ್.ಮಡಿವಾಳರ, ತಾಲೂಕಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಪಿ.ಬಿ.ಅವಜಿ, ಸುನಂದಾ ಯಂಪೂರೆ, ಎಮ್.ಎಸ್.ಮಸಳಿ, ನಾಗಾರಾಜ ಭೋವಿ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮವನ್ನು ಪ್ರಾಚಾರ್ಯ ಗುರು ಕಡಣಿ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group