ಹನಿಮೂನ್ ಗೆ ಹೋಗೊದು ಬೇಡ ಅಂತ ಹೆಂಡತಿಗೆ ಓದಲು ಕಳಿಸಿದ 2 ವರ್ಷದಲ್ಲೇ ಹೆಂಡತಿ PSI

Must Read

ಈಗಿನ ಕಾಲದಲ್ಲಿ ಮದುವೆಯಾದರೆ ಸಾಕು ಮಡದಿಯೊಂದಿಗೆ ದೇಶವನ್ನು ಸುತ್ತಬೇಕು ಅವರ ಜೊತೆ ಕೆಲವೊಂದಷ್ಟು ಸಮಯ ಕಳೆಯಬೇಕು ಅಂತ ಅಂದುಕೊಳ್ಳುವ ಪುರುಷರೇ ಹೆಚ್ಚು. ಆದರೆ ಇಲ್ಲೊಬ್ಬ ಪುರುಷ ಮಾತ್ರ ತನ್ನ ಹೆಂಡತಿಯನ್ನು ಪಿಎಸ್ಐ ಯಾಗಿ ನೋಡುವ ಹಂಬಲ ಹೊಂದಿ ಮದುವೆಯಾದ ನಂತರ ಆಕೆಯೊಂದಿಗೆ ಎಲ್ಲೂ ಕೂಡ ಸುತ್ತಡದೆ ನಿರಂತರವಾಗಿ ಶಿಕ್ಷಣವನ್ನು ಕೊಡಿಸಿ ಪಿ.ಎಸ್.ಐ ಮಾಡಿಸಿದ್ದಾನೆ. ಇಂತಹದೊಂದು ಘಟನೆ ಮಹಾರಾಷ್ಟ್ರ ಜಿಲ್ಲೆಯಲ್ಲಿ ನಡೆದಿದೆ ಜಯದೀಪ ಎಂಬ ವ್ಯಕ್ತಿ ಸಣ್ಣ ವಯಸ್ಸಿನಿಂದಲೂ ಕೂಡ ತುಂಬಾ ಕಷ್ಟಪಟ್ಟು ಜೀವನ ಮಾಡುತ್ತಿದ್ದ ಕಬ್ಬಿನ ಹಾಲು ಮಾರಿಕೊಂಡು ಆತನು ಜೀವನವನ್ನು ಸಾಗಿಸುತ್ತಿದ್ದ‌. ಆತ ಬುದ್ದಿವಂತ ವಿಧ್ಯಾವಂತ ಎರಡು ಬಾರಿ ನೌಕರಿ ಬಂದಿದ್ದರು ಕೂಡ ಬೇರೆ ಎಲ್ಲು ತೆರಳದೆ ತನ್ನ ಹಳ್ಳಿಯಲ್ಲಿ ಗ್ರಾಮೀಣ ಅಭಿವೃದ್ಧಿ ಮಾಡಬೇಕು ಎಂಬ ಹಂಬಲ ಹೊಂದಿದ್ದ. ಈ ಕಾರಣದಿಂದಾಗಿ ಆತ ಸ್ವಗ್ರಾಮದಲ್ಲಿ ಉಳಿದುಕೊಂಡ.

ನಂತರ ಅದೇ ಊರಿನ ಕಲ್ಯಾಣಿ ಎಂಬ ಯುವತಿಯನ್ನು ಇಷ್ಟಪಟ್ಟು ಆಕೆಯನ್ನು ಮದುವೆಯಾದ. ನಂತರ ಮದುವೆಯಾದ ಹುಡುಗಿಯನ್ನು ಕೂಡ ಪಿಎಸ್ಐ ಮಾಡಿಸುವ ಹಂಬಲ ಹೊಂದಿದ್ದ. ಆದರೆ ಇದನ್ನು ಎಲ್ಲರು ಹಾಸ್ಯವನ್ನಾಗಿ ತೆಗೆದುಕೊಂಡರು ಹಾಗಾಗಿ ಊರಿನ ಜನರಿಗೆ ಮತ್ತು ಆಕೆಯ ತಂದೆಗೆ ಚಾಲೆಂಜ್ ಮಾಡಿ ನನ್ನ ಹೆಂಡತಿಯನ್ನು ಎರಡು ವರ್ಷದಲ್ಲಿ ನಾನು ಪಿಎಸ್ಐ ಮಾಡಿಸುತ್ತೆನೆ ಎಂದು ಹೇಳಿದ. ಅದೇ ಮಾದರಿಯಲ್ಲಿ ಹೆಂಡತಿಗೆ ಉತ್ತಮವಾದ ಶಿಕ್ಷಣ ಕೊಡಿಸಿ ಈಗ ಆಕೆಗೆ ಪಿ.ಎಸ್.ಐ ಕೆಲಸ ದೊರತಿದೆ. ಶಿಕ್ಷಣ ಹಾಗೂ ಉದ್ಯೋಗ ಪಡೆದು ಬಂದ ಹೆಂಡತಿಗೆ ಸಲ್ಯೂಟ್ ಹೊಡೆಯುವುದರ ಮೂಲಕ ಮನೆಗೆ ಸ್ವಾಗತವನ್ನು ಕೋರಿದ್ದೇನೆ. ಕಲ್ಯಾಣಿ ಹಾಗೂ ಜಯ ದೀಪನ ಈ ಸಾಧನೆಯನ್ನು ಕುರಿತು ಈಗ ಊರಿನ ಜನ ಹಾಗೂ ಆತನ ಮಾವ ಎಲ್ಲರೂ ಕೂಡ ಸಂತಸವನ್ನು ವ್ಯಕ್ತಪಡಿಸಿದ್ದಾರೆ ನಿಜಕ್ಕೂ ಇಂತಹ ಗಂಡ ಸಿಗುವುದು ತುಂಬಾ ವಿರಳ.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group