ಸಿಂದಗಿ– ಪಟ್ಟಣದ ಸೌಂದರ್ಯಿಕರಣಕ್ಕೆ ಅನೇಕ ಯೋಜನೆಗಳು ಈಗಾಗಲೇ ಸಿದ್ದಗೊಂಡಿವೆ. ಹಂತ ಹಂತವಾಗಿ ಕಾರ್ಯರೂಪಕ್ಕೆ ಬರುತ್ತವೇ ಈ ಕ್ಷೇತ್ರವನ್ನು ಮಾದರಿ ಮಾಡುವ ಕನಸನ್ನು ಹೊತ್ತುಕೊಂಡಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ವಾರ್ಡ 7 ರಲ್ಲಿ ರವಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಜಯಪುರ ಹಾಗೂ ಅನುಷ್ಠಾನ ಕೆ.ಆರ್.ಐ.ಡಿ.ಎಲ್ ಸಿಂದಗಿ ಇವುಗಳ ಸಹಯೋಗದಲ್ಲಿ ನಡೆದ 2023-24 ನೇ ಸಾಲಿನ ಮುಖ್ಯ ಮಂತ್ರಿ ವಿಶೇಷ ಅನುದಾನದಲ್ಲಿ ಸಿಂದಗಿ ನಗರದ ಮೋರಟಗಿ ನಾಕಾ ಹತ್ತಿರ ವಿರುವ ಪ್ರಾಚೀನ ಕಾಲದ ಹರಿಬಾವಿಯನ್ನು ಸುಮಾರು ರೂ 30 ಲಕ್ಷ ಅನುದಾನದಲ್ಲಿ ಅಭಿವೃದ್ದಿ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಸಿಂದಗಿ ನಗರದಲ್ಲಿ ಅನೇಕ ಭಾವಿಗಳು ಅಸ್ಥಿತ್ವವನ್ನು ಕಳೆದುಕೊಂಡಿವೆ. ಒಂದು ಕಾಲದಲ್ಲಿ ನಗರದ ಜನತೆ ಈ ಭಾವಿಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಸದ್ಯ ಅವುಗಳ ಸ್ಥಿತಿ ಸಂಪೂರ್ಣ ಹಾಳಾಗಿವೆ ಅಂತಹ ಭಾವಿಗಳನ್ನು ಪುನಶ್ಚೇತನಗೊಳಿಸಿ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಮೋರಟಗಿ ನಾಕಾದ ಅಗಸಿ ಹತ್ತಿರವಿರುವ ಹರಿಭಾವಿಗೆ ರೂ 30 ಲಕ್ಷ ಮತ್ತು ಶ್ರೀ ಬೊಮ್ಮಲಿಂಗೇಶ್ವರ ದೇವಸ್ಥಾನದ ಸಮೀಪದ ಭಾವಿಯ ಪುನಶ್ಚೇತನಕ್ಕೆ ರೂ. 25 ಲಕ್ಷ ಅನುದಾನವನ್ನು ನೀಡುವ ಮೂಲಕ ಆ ಭಾವಿಗಳ ಅಭಿವೃದ್ದಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಪಟ್ಟಣದ ಅಗಸಿ ನಿರ್ಮಾಣಕ್ಕೆ ರೂ 25 ಲಕ್ಷ, ನಗರದ ಬಸವಣ್ಣ ದೇವಣ್ಣ ದೇವರ ದೇವಸ್ಥಾನದ ಜೀರ್ಣೋದ್ದಾರಕ್ಕೆ ರೂ 10 ಲಕ್ಷ, ಗಾಲಿಬಸಾಬ ದರ್ಗಾ ಅಭಿವೃದ್ದಿಗೆ ರೂ 15 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ. ನಗರದಲ್ಲಿ ಸ್ಥಗಿತಗೊಂಡಿರುವ ಅನೇಕ ಭಾವಿಗಳನ್ನು ಕೂಡಲೇ ಅಭಿವೃದ್ದಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ವಾರದ ಮಾತನಾಡಿ, ಸಿಂದಗಿ ಅಭಿವೃದ್ದಿಯಾಗುತ್ತಿದೆ. ದಿ.ಎಮ್.ಸಿ.ಮನಗೂಳಿ ಅವರ ಮಗನಾದ ಶಾಸಕ ಅಶೋಕ ಮನಗೂಳಿ ಅವರು ಅಭಿವೃದ್ದಿಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಾರ್ವಜನಿಕರು ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನಿಡಬೇಕು ಎಂದರು.
ಈ ಸಂಧರ್ಭದಲ್ಲಿ ವಾರ್ಡ 7 ರ ಪುರಸಭೆಯ ಸದಸ್ಯ ಬಾಷಾಸಾಬ ತಾಂಬೋಳಿ, ಪುರಸಭೆ ಸದಸ್ಯ ಶಾಂತವೀರ ಬಿರಾದಾರ, ಸುನೀಲ ಹಳ್ಲೂರ, ಚನ್ನು ವಾರದ, ಬಸೀರ ಮರ್ತೂರ, ಪುರಸಭೆಯ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಸೈಫನ ನಾಟೀಕಾರ, ಇಬ್ರಾಹಿಮ ನಾಟೀಕಾರ, ಶರಣು ಶ್ರೀಗೀರಿ, ರಮೇಶ ಹೂಗಾರ, ಗೌಸ ನಾಟೀಕಾರ, ಇರಫಾನ ಬಾಗವಾನ, ಮಲ್ಲು ಅಚಲೇರಿ, ಅಬುಬಕರ ಡೋಣಿ ಸೇರಿದಂತೆ ಅನೇಕರು ಇದ್ದರು.