ದಿ: ೦೩-೦೩-೨೦೨೪ ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಮಹಾಂತೇಶ ನಗರದ ಡಾ.ಫ.ಗು ಹಳಕಟ್ಟಿ ಭವನದಲ್ಲಿ “ವಾರದ ಪ್ರಾರ್ಥನೆ ಮತ್ತು ಉಪನ್ಯಾಸ “ಕಾರ್ಯಕ್ರಮ ಜರುಗಿತು.
ಸುನೀಲ ಸಾಣಿಕೊಪ್ಪ , ನ್ಯಾಯವಾದಿಗಳು ಉಪನ್ಯಾಸಕರಾಗಿ ಆಗಮಿಸಿ, “ಬಸವಣ್ಣನವರು ಮತ್ತು ವೈಚಾರಿಕತೆ” ವಿಷಯ ಕುರಿತು ಉಪನ್ಯಾಸ ನೀಡಿದರು.
ಬಸವೇಶ್ವರರು ಕಾಯಕಕ್ಕೆ ಹೆಚ್ಚು ಒತ್ತು ನೀಡಿದ್ದರು. ವೃತ್ತಿಯಿಂದ ಜಾತಿಗಳು ಬಂದವು. ಕಂಬಾರ, ಕುಂಬಾರ, ಗಾಣಿಗ ಇತ್ಯಾದಿ, ಎಲ್ಲಾ ಕಾಯಕಗಳು ಸಮನಾಗಿವೆ. ಕಾಯಕ ಕರ್ತವ್ಯ ಮುಖ್ಯ. ಹಕ್ಕುಗಳಿಗಾಗಿ ಹೋರಾಡುತ್ತೇವೆ, ಹೊಣೆಗಾರಿಕೆ ಇಲ್ಲದಂತಾಗಿದೆ, ಸಂಕುಚಿತ ಮನೋಭಾವದಿಂದ ಹೊರಬರಬೇಕು. ಇವನಾರವ, ಇವನಾರವ ಎನ್ನದೆ, ಇವ ನಮ್ಮವ ,ಇವನಮ್ಮವ ಎಂದು ಅಪ್ಪಿಕೊಂಡು ಸಾಗಬೇಕು ಎಂದು ಹೇಳಿದರು.
ಶಂಕರ ಗುಡಸ ಅವರು ಮಾತನಾಡುತ್ತಾ, ಎಲ್ಲರೂ ವಚನ ಸಾಹಿತ್ಯ ಓದಬೇಕು, ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,ಸಂಸ್ಕಾರ ಅತೀ ಮುಖ್ಯವಾಗಿದೆ ಎಂದು ಹೇಳಿದರು.
ರಾಜ್ಯ ಮಟ್ಟದ ಅಂಚೆ ಚೀಟಿ ಸಂಗ್ರಹದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಸಾದ ಹಿರೇಮಠ, ಜಿಲ್ಲಾ ಮಟ್ಟದಲ್ಲಿ ಉದ್ಯಮ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಪಡೆದ ಸದಾಶಿವ ದೇವರಮನಿ ಅವರಿಗೂ ಹಾಗೂ ೬೦ನೇ ವರ್ಷದ ಜನ್ಮದಿನದ ನಿಮಿತ್ತ ಶ್ರೀಮತಿ ವಿದ್ಯಾ ಕರ್ಕಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಸುರೇಶ ನರಗುಂದ ಅವರು ಪ್ರಾರ್ಥನೆ ನಡೆಸಿಕೊಟ್ಟರು , ಬಿ.ಪಿ ಜೇವಣಿ, ಬಾಳಗೌಡ ದೊಡ್ಡಬಂಗಿ, ದೀಪಾ ಪಾಟೀಲ ವಚನಗಳನ್ನು ಹೇಳಿದರು.
ಅಧ್ಯಕ್ಷರಾದ ಈರಣ್ಣ ದೇಯನ್ನವರ ಶಶಿಭೂಷಣ ಪಾಟೀಲ ಲಕ್ಷ್ಮೀಕಾಂತ ಗುರವ,ಬಸವರಾಜ ಕರಡಿಮಠ, ವಿ.ಕೆ. ಪಾಟೀಲ,ಭಾಗವಹಿಸಿದ್ದರು ಸಂಗಮೇಶ ಅರಳಿ ಸ್ವಾಗತ ಮತ್ತು ನಿರೂಪಣೆ ಮಾಡಿದರು. ಈ ದಿನದ ಪ್ರಸಾದ ದಾಸೋಹ ಸೇವೆಯನ್ನು ಡಾ. ಬಸಮ್ಮ ಗಂಗನಳ್ಳಿ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೆಳಗಾವಿ ಗಂಗನಳ್ಳಿ ಇವರು ಮಾಡಿದರು.