ಸಿಂದಗಿ; ನಗರ ಮಹಾಜನತೆಯ ಬಹುದಿನಗಳ ಬೇಡಿಕೆಯಂತೆ ತಾಲೂಕನ್ನು ಮಾದರಿ ಮಾಡಬೇಕು ಎಂದು ನಗರದ ಅಭಿವೃದ್ಧಿಗೆ ಮಂಜೂರಾದ ಒಟ್ಟು ರೂ ೮೦ ಕೋಟಿ ಅನುದಾನ ತರಲಾಗಿದೆ. ನಗರ ದೀಪಾಲಂಕಾರಕ್ಕೆ ರೂ ೫ ಕೋಟಿ ವೆಚ್ಚದಲ್ಲಿ ಒಟ್ಟು ೨೭೪ ವಿದ್ಯುತ್ ಕಂಬಗಳನ್ನು ನಿಲ್ಲಿಸುವ ಮೂಲಕ ನಮ್ಮ ಸರಕಾರ ಉತ್ತಮ ಕೊಡುಗೆ ನೀಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ೨೦೨೩-೨೪ ನೇ ಸಾಲಿನ ಲೆಕ್ಕ ಶೀರ್ಷಿಕೆ ೫೦೫೪-ಅಪೆಂಡಿಕ್ಸ-ಇ ಯೋಜನೆಯಡಿಲ್ಲಿ ರೂ ೫ ಕೋಟಿ ವೆಚ್ಚದಲ್ಲಿ ದೀಪ ಅಲಂಕಾರ ಕಂಬಗಳ ಅಳವಡಿಕೆ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿಂದಗಿ ಪಟ್ಟಣದ ಪರಿಮಿತಿಯ ಜೇವರ್ಗಿ-ಚಿಕ್ಕೋಡಿ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ ೦.೦೦ ರಿಂದ ೬.೪೫ ವರೆಗೆ ರಾಜ್ಯ ಹೆದ್ದಾರಿ-೫೦ ವರ್ತುಲ್ ರಸ್ತೆಯಿಂದ ಡೋಹರ ಕಕ್ಕಯ್ಯ ವೃತ್ತ ಟಿಪ್ಪು ವರ್ತುಲ್ ರಸ್ತೆಯವರೆಗೆ ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸುವದು ಅಂದಾಜು ಮೊತ್ತ ರೂ: ೩೫೦.೦೦ ಲಕ್ಷಗಳು ಅಲಂಕಾರಿಕ ವಿದ್ಯುತ್ ದೀಪಗಳು ಅಳವಡಿಸಲಾಗುವ ರಸ್ತೆಯ ಉದ್ದ ೬.೪೫ ಕಿ.ಮೀ ಉದ್ದ, ಒಟ್ಟು ವಿದ್ಯುತ್ ದೀಪಗಳು-೧೯೪, ಬಸವೇಶ್ವರ ವೃತ್ತಕ್ಕೆ ಅಲಂಕಾರಿಕ ದೀಪಗಳು-೧೦, ಅಂಬೇಡ್ಕರ ವೃತ್ತಕ್ಕೆ ಅಲಂಕಾರಿಕ ದೀಪಗಳು-೧೦ ಅಲ್ಲದೆ ಪಟ್ಟಣದ ಪರಿಮಿತಿಯ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ-೧೬ರ ಕಿ.ಮೀ ೦.೦೦ ರಿಂದ ೩.೦೦ ವರೆಗೆ ಬಸವೇಶ್ವರ ವೃತ್ತದಿಂದ ಸ್ವಾಮಿ ವಿವೇಕಾನಂದ ವೃತ್ತ, ಕನಕದಾಸ ವೃತ್ತದ ಮೂಲಕ ರಾಜ್ಯ ಹೆದ್ದಾರಿ-೫೦ ವರ್ತುಲ್ ರಸ್ತೆಯವರೆಗೆ ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸುವದು ಅಂದಾಜು ಮೊತ್ತ ರೂ: ೧೫೦.೦೦ ಲಕ್ಷಗಳು ಅಲಂಕಾರಿಕ ವಿದ್ಯುತ್ ದೀಪಗಳು ಅಳವಡಿಸಲಾಗುವ ರಸ್ತೆಯ ಉದ್ದ – ೩.೦೦ ಕಿ.ಮೀ ಉದ್ದ. ಒಟ್ಟು ವಿದ್ಯುತ್ ದೀಪಗಳು-೮೪ ರಸ್ತೆಗಳ ಮೇಲೆ ಸದರಿ ಅಂಶಗಳನ್ನು ಪರಗಣಿಸಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವದು ಎಂದು ತಿಳಿಸಿದರು.
ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಮೀಸಲಿಟ್ಟು ಕ್ಷೇತ್ರದ ಅಭಿವೃದ್ಧಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ೧೯೯೪ರಲ್ಲಿ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಸಂದರ್ಭದಲ್ಲಿ ಶಾಶ್ವತ ಯೋಜನೆ ಕಲ್ಪಿಸಿದ ದಿ. ಎಂ.ಸಿ.ಮನಗೂಳಿಯವರು ರೂ ೭ ಕೋಟಿ ವೆಚ್ಚದಲ್ಲಿ ಯರಗಲ್ ಕೆನಾಲ್ದಿಂದ ಸಿಂದಗಿ ಕೆರೆಗೆ ನೀರು ತಂದರು ನಂತರ ೨೦೧೮ರಲ್ಲಿ ಸಚಿವರಾದ ಸಂದರ್ಭದಲ್ಲಿ ರೂ ೧೭ ಕೋಟಿ ವೆಚ್ಚದಲ್ಲಿ ಬಳಗಾನೂರ ಕೆರೆಯಿಂದ ನೀರು ತಂದು ಜನಾನುರಾಗಿಯಾಗಿದ್ದಾರೆ ಅವರ ಹಾದಿಯಲ್ಲಿ ಕ್ಷೇತ್ರದ ಅಭಿವೃದ್ಧಿಯತ್ತ ಕೊಂಡೊಯಲು ರೂ ೩೪ ಕೋಟಿ ಅಮೃತ ಯೋಜನೆಯಡಿ ಪಟ್ಟಣದಲ್ಲಿ ದಿನದ ೨೪ ಗಂಟೆ ನೀರು ಪೂರೈಕೆಯ ಯೋಜನೆ, ಕೆರೆ ಅಭಿವೃದ್ಧಿಗೆ ರೂ ೩.೫ ಕೋಟಿ ಶಾಂತೇಶ್ವರ ೨ನೇ ಕ್ರಾಸ್ ಬಂದಾಳ ರಸ್ತೆ ಸಂಗೋಳ್ಳಿ ವೃತ್ತ ಹಗೂ ಸ್ವಾಮಿ ವಿವೇಕಾನಂದ ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ ರೂ ೨ ಕೋಟಿ, ಹೀಗೆ ೩೯ ಕಾಮಗಾರಿಗಳನ್ನು ಕೈಕೊಂಡು ನಗರವನ್ನು ಮಾದರಿ ಪಟ್ಟಣವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು.
ಡಾ ಪ್ರಭು ಸಾರಂಗದೇವ ಶಿವಾಚಾರ್ಯರು, ಆಸಂಗಿಹಾಳ ಅರೂಢಮಠದ ಶಂಕರಾನಂದ ಮಹಾರಾಜರು, ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭುದೇವರು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಲೋಕೋಪಯೋಗಿ ಎಇಇ ಅರುಣಕುಮಾರ ವಡವಡಗಿ, ಸಾವಂತಕರ, ವಿಜಯಪುರ ಪ್ರಥಮ ದರ್ಜೆ ಗುತ್ತಿಗೆದಾರ ಆರ್.ಎಸ್. ಹಳ್ಳದ, ಪುರಸಭೆ ಮಾಜಿ ಅಧ್ಯಕ್ಷರಾದ ಡಾ. ಶಾಂತವೀರ ಮನಗೂಳಿ, ಭಾಷಾಸಾಭ ತಾಂಬೋಳಿ, ಹಣಮಂತ ಸುಣಗಾರ, ಸದಸ್ಯರಾದ ಸಂದೀಪ ಚೌರ, ಬಸವರಾಜ ಯರನಾಳ, ಸಿದ್ದು ಮಲ್ಲೇದ, ಚೆನ್ನಪ್ಪ ಗೋಣಿ, ರಹಿಮ ದುದನಿ, ಮುಖ್ಯಾಧಿಕಾರಿ ಸುರೇಶ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ, ಅಂಬ್ರೀಶ ಚೌಗಲೆ, ಮಹಾನಂದಾ ಬಮ್ಮಣ್ಣಿ, ಜಯಶ್ರೀ ಹದನೂರ ಸೇರಿದಂತೆ ಹಲವರು ಇದ್ದರು.