ಅಕ್ರಮ ಮದ್ಯ ವಶ

Must Read

ಸಿಂದಗಿ: ಬೆಳಗಾವಿ ವಿಭಾಗ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ವಿಜಯಪುರ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ಜು. 26ರಂದು ಸಿಂದಗಿ ವಲಯದ ತುರಕನಗೇರಿ ಗ್ರಾಮದಿಂದ ಕಲಕೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ ತುರಕನಗೇರಿಯಿಂದ ಅಂದಾಜು 2 ಕಿ.ಮೀ ಅಂತರದಲ್ಲಿ ದ್ವಿಚಕ್ರ ವಾಹನದ ಮೇಲೆ 3.780 ಲೀ. ಗೋವಾ ರಾಜ್ಯದ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದಾಗ ಪತ್ತೆ ಹಚ್ಚಿ ತುರಕನಗೇರಿ ಗ್ರಾಮದ ಶಮೀದ.ತಂ.ಕಾಶೀಮ ಪಟೇಲ.ಬಿರಾದಾರ ಮಹಬೂಬಪಟೇಲ, ತಂ.ಸಾಹೇಬಪಟೇಲ, ಬಿರಾದಾರ ಇವರನ್ನು ಬಂಧಿಸಿ ಅಬಕಾರಿ ಉಪ ನಿರೀಕ್ಷಕ ಡಿ.ವ್ಹಿ.ರಜಪೂತ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕಿ ಆರತಿ ಖೈನೂರ ಹಾಗೂ ಸಿಂದಗಿ ವಲಯದ ಅಬಕಾರಿ ಸಿಬ್ಬಂದಿಗಳಾದ ಎಮ್.ಜೆ.ಮೊಕಾಶಿ, ಆರ್.ಬಿ.ಮುಳಸಾವಳಗಿ, ರೇವಣ ಸಿದ್ದಪ್ಪ ಅತಾಪಿ, ಜೈರಾಮ ರಾಠೋಡ ಹಾಗೂ ಎನ್.ಎಸ್.ಸಾತಲಗಾಂವ ಮತ್ತು ವಾಹನ ಚಾಲಕ ಯಮನಪ್ಪ ಹರಿಜನರವರು ಭಾಗವಹಿಸಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group