ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಡಲಗಿ ತಾಲ್ಲೂಕಾ ಮಟ್ಟದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ನೂತನ ರೋವರ್ ಮತ್ತು ರೇಂಜರ್ ಘಟಕ ಮತ್ತು ಬಜಾಜ್ ಫಿನ್‌ಸರ್ವ ಸರ್ಟಿಫಿಕೇಟ್ ಕೋರ್ಸಿನ ಉದ್ಘಾಟನಾ ಸಮಾರಂಭ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಜರುಗಲಿದೆ.
ಸಮಾರಂಭವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಉಪಾಧ್ಯಕರಾದ ಜಿ. ಬಿ. ಮನ್ನಿಕೇರಿ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಎಸ್.ಆರ್.ಇ. ಸಂಸ್ಥೆಯ ಚೇರಮನ್ನರಾದ ಬಸಗೌಡ ಶಿ. ಪಾಟೀಲ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಮಹಾಂತೇಶ ಕುರಿ, ಸಂಯೋಜರು ಬಜಾಜ್ ಫಿನ್‌ಸರ್ವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಪ್ರೊ. ಬಸಪ್ಪ ಹೆಬ್ಬಾಳ, ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಲಗಿ, ಡಿ. ಬಿ. ಅತ್ತಾರ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಸಂಯೋಜರು ಸಚೀನ ನಾಡಗೌಡರ, ಸಂಯೋಜರು, ಬಜಾಜ್ ಫಿನ್‌ಸರ್ವ ಲಿಮಿಟೆಡ್, ಬೆಳಗಾವಿ ಹಾಗೂ ಸಂಸ್ಥೆಯ ಸರ್ವ ಆಡಳಿತ ಮಂಡಳಿ ಉಪಸ್ಥಿತಿ ಇರುವರು ಎಂದು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.