ಹುನಗುಂದ ಕ್ಲಸ್ಟ‌ರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನಾ ಸಮಾರಂಭ

Must Read

ಹುನಗುಂದ – ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ಸರ್ಕಾರ ವೇದಿಕೆಯನ್ನು ಒದಗಿಸಿಕೊಟ್ಟು ಮಕ್ಕಳಿರುವ ವಿವಿಧ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಪೂರಕವಾಗಿದೆ ಎಂದು ಶ್ರೀ ಮಾಳಿಂಗರಾಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಉಂಡೋಡಿ ಹೇಳಿದರು.

ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಎಸ್. ಕೆ. ಉಂಡೋಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಎಸ್.ಜಿ.ಉಂಡೋಡಿ ಪ್ರಾಥಮಿಕ  ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುನಗುಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು, ಪಾಥಮಿಕ ಮತ್ತು ಪ್ರೌಢ ಹಂತದಲ್ಲಿ ಮಕ್ಕಳ ಪ್ರತಿಭೆಯನ್ನು ಹೊರ ಹಾಕುವುದರಿಂದ ಭವಿಷ್ಯದಲ್ಲಿ ಬಹುದೊಡ್ಡ ಸಾಧಕರಾಗಲು ಸಾಧ್ಯ ಯಾರು ಬಾಲ್ಯದಲ್ಲಿ ಸೃಜನಾತ್ಮಕತೆಯ

ಅಂತಹ ಮಕ್ಕಳು ಮುಂದೆ ಬಹುದೊಡ್ಡ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಂದಾನಯ್ಯ ಹಿರೇಮಠ ಮಾತನಾಡಿ, ಬೋಧನೆ ಮಾಡಿದರೆ ಸಾಲದು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಹವಹಿಸುವಂತೆ ಮಾಡುವುದು ಮುಖ್ಯ, ಮಕ್ಕಳ ಕಲಿಕೆಯ ಜೊತೆಗೆ ಅವರಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತು ಮಾಡಬೇಕು. ಬಾಲ್ಯದಲ್ಲಿ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ನೀರೆರೆಯದಿದ್ದರೆ ಅಂತಹ ಪ್ರತಿಭೆ ಕಮರಿ ಹೋಗುತ್ತದೆ. ಪ್ರತಿಯೊಬ್ಬ ಮಕ್ಕಳಲ್ಲಿ ಒಂದಿಲ್ಲದ ಒಂದು ಪ್ರತಿಭೆ ಇದ್ದೇ ಇರುತ್ತದೆ ಕೆಲವು ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ತೋರಿದರೆ ಇನ್ನು ಕೆಲವು ಮಕ್ಕಳು ಕರೆ. ಚಿತಕಲೆ, ಸಂಗೀತ ಸಾಹಿತ್ಯ, ನಾಟಕ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಅಂತವರನ್ನು ಗುರುತಿಸಿ ಪೋತ್ಸಾಹಿಸುವ ಕಾರ್ಯವಾಗಲಿ ಎಂದರು.

ಚಿನ್ನದಾಸರ ಮಾತನಾಡಿ ಪ್ರತಿ ಮಕ್ಕಳಲ್ಲೂ ಒಂದು ಪ್ರತಿಭೆ ಇರುತ್ತೆ ಅಂತಹ ಮಕ್ಕಳನ್ನು ಗುರುತಿಸಿ ಭಾಗವಹಿಸುವಂತೆ ಮಾಡಬೇಕು. ಸೋಲು ಗೆಲುವು ಮುಖ್ಯವಲ್ಲ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆಯನ್ನು ತೋರುವುದು ಮುಖ್ಯ ಎಂದರು.

ವೇದಿಕೆಯಲ್ಲಿ ಕಲಾ ಅಕಾಡೆಮಿ ಸದಸ್ಯ ಚಂದ್ರಕಾಂತ ಸರೋದೆ. ಗ್ರಾ. ಪಂ. ಸದಸ್ಯ ಚೆನ್ನಪ್ಪ ಮುಖ್ಯೋಪಾಧ್ಯಾಯ ಎಂ.ಜಿ.ಚಿತ್ತಾಪೂರ, ಡಿಎಂಸಿ ಅಧ್ಯಕ್ಷೆ ಮಲ್ಲಪ್ಪ ಕುರಿಪಿಡಿಸಿ ಶಿವಲಿಂಗಪ್ಪ ಅತಾಲಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ.ವಾಯ್. ಮುಂಡೇವಾಡಿ, ಎಲ್. ಬಿ. ಲಮಾಣಿ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಭಟ್ಟುರ್ಕಿ ಸೇರಿದಂತೆ ಅನೇಕರು ಇದ್ದರು. ಶಿಕ್ಷಕ ಬೇರಪ್ಪ ಬಂಡಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯನಿ ಶರಣಮ್ಮ ಎಂ. ನಿರೂಪಿಸಿದರು. ಮುಖ್ಯೋಪಾಧ್ಯಾಯ ಶರಣು ವರಿ ವಂದಿಸಿದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group