spot_img
spot_img

ಅಪ್ಪನ ಸ್ಮರಣೆ ಪ್ರತಿಷ್ಠಾನ ಉದ್ಘಾಟನೆ ಹಾಗೂ ಸದ್ಗುರು ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

Must Read

spot_img
- Advertisement -

ಬೆಳಗಾವಿ– ನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಸದಾಶಿವ ನಗರದ ರಡ್ಡಿ ಭವನದ ಸಭಾಂಗಣದಲ್ಲಿ ಶನಿವಾರ ದಿ 30ರಂದು ಮುಂಜಾನೆ 10 ಗಂಟೆಗೆ ವಿಶ್ವ ಶೈಕ್ಷಣಿಕ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಕಾಯ೯ಮಾಡಿರುವ ಸಾಧಕರಿಗೆ ಸದ್ಗುರು ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರಕೂಟ ಸಾಹಿತ್ಯ ಪ್ರತಿಷ್ಠಾನ ಹಾಗೂ ಅರಸು ಆಕಾಡೆಮಿ ಯ ಉದ್ಘಾಟನಾ ಸಮಾರಂಭ, ನಾಡಿನ ಸಮಾಚಾರ ದಿನಪತ್ರಿಕೆಯ ಸಂಚಿಕೆ ಲೋಕಾಪ೯ಣೆ, ಅಪ್ಪನ ಸ್ಮರಣೆ (ಹಿರಿಯ ಜೀವಿ ಕೈ, ಫಕೀರಪ್ಪ ಮಾರುತೆಪ್ಪ ಸುಣಗಾರ ರವರ) ಕಾಯ೯ಕ್ರಮ ನಡೆಯಲಿದೆ.

ಭೂತರಾಮನಹಟ್ಟಿಯ ಮುಕ್ತಿಮಠದ ಪೀಠಾಧಿಪತಿಗಳಾದ ತಪೋರತ್ನ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಕಾಯ೯ಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಪ್ರಾ,ಬಿ ಎಸ್ ಗವಿಮಠ, ರಾಷ್ಟ್ರಕೂಟ ಸಾಹಿತ್ಯ ಪ್ರತಿಷ್ಠಾನ ಹಾಗೂ ಅರಸು ಆಕಾಡೆಮಿ ಯ ಅಧ್ಯಕ್ಷರಾದ ಬಸವರಾಜ ಗಾಗಿ೯, ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ದಿಲೀಪ್ ಕುರಂದವಾಡೆ ಯವರು ಆಗಮಿಸುವರು ನಾಡಿನ ಸಮಾಚಾರ ದಿನಪತ್ರಿಕೆ ಸಂಪಾದಕರಾದ ಬಸವರಾಜ ಉಪ್ಪಾರಟ್ಟಿ ರವರು ಉಪಸ್ಥಿತರಿರುವರು

- Advertisement -

ಶರಣ ಚೇತನ ಮಾಸಪತ್ರಿಕೆ ಸಂಪಾದಕರಾದ ಮಹಾದೇವ ಬಿರಾದಾರ ಅಪ್ಪನ ಸ್ಮರಣೆ ಕುರಿತು ಮಾತನಾಡುವರು.

ಕಾಯ೯ಕ್ರಮದಲ್ಲಿ ಹಿರಿಯ ರಂಗಕರ್ಮಿ, ನ್ಯಾಯವಾದಿಗಳಾದ ಕೆ ಎಲ್ ಕುಂದರಗಿ (ಅಥಣಿ), ಧಮಾ೯ಧಿಕಾರಿಗಳಾದ ಡಾ, ಮಾರುತಿ ಭಂಡಾರಿ(ಮಲಾಬಾದ), ಜಾನಪದ ಕಲಾವಿದರಾದ ಗೋಪಾಲ ತಪಣಿ (ಹುಕ್ಕೇರಿ)ಅರಣ್ಯ ಇಲಾಖೆಯ ಗುರುನಾಥ ಬಾಯಣ್ಣವರ(ಹೆಬ್ಬಾಳ) ಸಮಾಜಕಲ್ಯಾಣ ಇಲಾಖೆಯ ಎಮ್ ಎ ತಹಶೀಲ್ದಾರ್(ಸವದತ್ತಿ) ಶ್ರೀಕಾಂತ್ ದೇವಲತ್ತಿ(ಕಾರವಾರ), ಮಹಾಂತೇಶ ಕಳ್ಳಿ( ಸುಳೇಭಾವಿ) , ಹಾಗೂಶಿಕ್ಷಣ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಾದ ಶಶಿಧರ್ ರೊಟ್ಟಿ(ಹಿರೇಬಾಗೇವಾಡಿ) ,ವಿಷ್ಣು ನಾರಾಯಣ ಜೋಶಿ(ಕಲಕಾಂಬ), ಸುರೇಶ್ ಕಕಿ೯(ಗೋಜಗಾ),ಸಂಜಯ ತುಕಾರಾಮ ಇಚಲಕರಂಜಿ (ಕೃಷ್ಣಾಕಿತ್ತೂರ), ಶ್ರೀ ಮತಿ ಲೀಲಾ ರಜಪೂತ (ಹುಕ್ಕೇರಿ)ಎಮ್ ಸಿ ಹಡಪದ(ಮುಗಳಿಹಾಳ) , ಬಿ ವಾಯ್ ಮಡಿವಾಳರ(ಬಡಸ್ ಗೆಜಪತಿ), ಎಸ್ ವಾಯ್, ಕಾಶಪ್ಪನವರ(ತಿಗಡೋಳ್ಳಿ) , ಶಿವಯೋಗಿ ಸಣ್ಣಮನಿ(ಮುಂಬಯಿ), ಚಂದ್ರಕಾಂತ ಹೈಬತ್ತಿ (ಇಂಚಲ), ಶ್ರೀ ಮತಿ ವನಿತಾ ಸಾಯನೇಕರ (ಯಳ್ಳೂರು ವಾಡಿ) ,ಗುರಪ್ಪ ಮಾಳಗಿ(ಹುಕ್ಕೇರಿ )ಎಮ್ ದಿವಾಕರ(ಭದ್ರಾವತಿ), ಸಾಹಿತಿ ಶ್ರೀ ಮತಿ ಜಯಶ್ರೀ ಅಬ್ಬಿಗೇರಿ(ಬೆಳಗಾವಿ) ಇವರನ್ನು ಸನ್ಮಾನಿಸಲಾಗುವುದು ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ ಹೇಳಿಕೆ ಯಲ್ಲಿ ತಿಳಿಸಿ ಕಾಯ೯ಕ್ರಮ ಕ್ಕೆ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಆಗಮಿಸಲು ವಿನಂತಿಸಿರುವರು.

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group