ಮೂಡಲಗಿ: ಟ್ಯಾನ್ ಗ್ರಾಮ್ ಗಣಿತ ಎಂಬುದು ಇಂದಿನ ವಿದ್ಯಾರ್ಥಿಗಳಿಗೆ ಮೆದುಳಿಗೆ ಮೇವು ಹಾಕಿದಂತೆ ಎಂದು ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕ ಡಾ. ವೀರಣ್ಣ ಬೋಳಶೆಟ್ಟಿ ಅಭಿಪ್ರಾಯಪಟ್ಟರು.
ತಾಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಟ್ಯಾನ್ ಗ್ರಾಮ್ ಕಾರ್ಯಗಾರ ಹಾಗೂ ಸ್ಪರ್ಧೆಯನ್ನು ಏರ್ಪಡಿಸಿ ಸಮಾರಂಭದಲ್ಲಿ ಮಾತನಾಡಿದ್ದರು.
ಈ ಸಂದರ್ಭದಲ್ಲಿ ಡಾ. ಭೋಜರಾಜ್ ಬೆಳಕೂಡ ಮಾತನಾಡಿ, ಇಂದಿನ ದಿನಮಾನದಲ್ಲಿ ಗಣಿತವು ಕ್ಲಿಷ್ಟಕರವಲ್ಲ ಅತ್ಯಂತ ಸರಳ ಮಯವಾದ ಸಾಧನೆಗಳನ್ನು ಕಂಡುಹಿಡಿದಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳಲು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಚೇರ್ಮನ್ ರಮೇಶ ಬೆಳಕೂಡ ಮಾತನಾಡಿ, ಪ್ರತಿ ತಿಂಗಳು ವಿವಿಧ ಪ್ರೌಢ ಶಾಲೆಯಲ್ಲಿ ಚಟುವಟಿಕೆಗಳ ಮೂಲಕ ವಿಜ್ಞಾನ ಗಣಿತ ಮತ್ತು ಸಮಾಜ ವಿಷಯಗಳನ್ನ ಆಧಾರಿತ ಕಾರ್ಯಾಗಾರಗಳನ್ನು ನಡೆಸಲಾಗುವುದು ಹಾಗೂ ಪರಮನೆಂಟ್ ಸೈನ್ಸ್ ಮತ್ತು ಗಣಿತ ಮ್ಯೂಸಿಯಮ್ಮನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದೆಂದು ವಾಗ್ದಾನ ಮಾಡಿದರು.
ಸಮಾರಂಭ ಉದ್ಘಾಟಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈರಣ್ಣ ಬೆಳಕೂಡ ಮತ್ತು ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ್ ಗರಗಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಸ್ಪೆಕ್ಟಸ್ಸನ್ನು ಬಿಡುಗಡೆ ಮಾಡಿದರು, ಗೋಕಾಕ್ ಹಾಗೂ ಮೂಡಲಗಿ ತಾಲೂಕಿನ 60 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು, ಈ ಸ್ಪರ್ಧೆಯಲ್ಲಿ ಪ್ರಥಮ ಜಿಎಚ್.ಎಸ್ ಬೆಟಿಗೇರಿ, ಪಿಜನ್ ಪ್ರೌಢ ಶಾಲೆ ಕಲ್ಲೋಳಿ ದ್ವಿತೀಯ ಸ್ಥಾನ, ಬಸವೇಶ್ವರ ಪ್ರೌಢಶಾಲೆ ಕಲ್ಲೋಳಿ ತೃತೀಯ ಸ್ಥಾನ ಪಡೆದುಕೊಂಡರು.