ವೀರಶೈವ ಲಿಂಗಾಯತ ಮಹಿಳಾ ಸಂಘ ಉದ್ಘಾಟನೆ

Must Read

ಮೂಡಲಗಿ: ಮಹಿಳೆಯರು ಸ್ವ ಉದ್ಯೋಗಕ್ಕೆ ಸಿಗುವ ನೆರವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ವೀರಶೈವ ಲಿಂಗಾಯತ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶಿಲ್ಪಾ ಗೋಡಿಗೌಡರ ಹೇಳಿದರು.

ಅವರು ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಸೊಸೈಟಿಯ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಮೂಡಲಗಿ ಮಹಿಳಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸಂಘಟನೆಗಳಿಂದ ನಮ್ಮ ಭಾರತೀಯ ಸಂಸ್ಕರತತಿಯ ಮೆರುಗು ಹೆಚ್ಚುತ್ತದೆ ಎಂದರು.

ಇದೆ ಸಮಯದಲ್ಲಿ ಮೂಡಲಗಿ ಸಂಘಟನೆಯ ಪದಾಧಿಕಾರಿಗಳ ನೇಮಕ ಮಾಡಲಾಯಿತು.ಅಧ್ಯಕ್ಷರಾಗಿ

ಮಹಾದೇವಿ ಶಂಕ್ರಯ್ಯ ಹಿರೇಮಠ, ಉಪಾಧ್ಯಕ್ಷರಾಗಿ  ಸುರೇಖಾ ಅಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ  ಸೌಮ್ಯಾ ಸೋಮಶೇಖರ ಹಿರೇಮಠ ಆಯ್ಕೆಗೊಂಡರು ಮತ್ತು  13 ಜನ  ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಗೌರಮ್ಮ ಷಡಕ್ಷರಿ ವಹಿಸಿದ್ದರು.

ಸಮಾರಂಭ ವೇದಿಕೆಯಲ್ಲಿ ಶೀತಲ ಮಠಪತಿ ಮತ್ತು ಡಾ|| ಭಾರತಿ ಕೋಣಿ, ಆಶಾ ಉಮನಾಬಾದಿಮಠ, ಸುಜಾತಾ ಹಿರೇಮಠ, ಕುಸುಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು . ಸೌಮ್ಯಾ ಹಿರೇಮಠ ನಿರೂಪಿಸಿದರು, ಸೌಜನ್ಯ ಹಿರೇಮಠ ಸ್ವಾಗತಿಸಿದರು, ವಿಜಯಲಕ್ಷ್ಮೀ ಹಿರೇಮಠ ವಂದಿಸಿದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group