🇮🇳ಸ್ವಾತಂತ್ರ್ಯ🇮🇳
ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು
ಆಂಗ್ಲರ ದಾಸ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು
ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮೋಸಕ್ಕೆ ಸಿಗಲಿಲ್ಲ
ಮಾತಿಗೆ ಸಿಕ್ಕ ಸ್ವಾತಂತ್ರ್ಯ ಮೌನಕ್ಕೆ ಸಿಗಲಿಲ್ಲ
ಹಣಕ್ಕೆ ಸಿಕ್ಕ ಸ್ವಾತಂತ್ರ್ಯ ಗುಣಕ್ಕೆ ಸಿಗಲಿಲ್ಲ
ಭಾಷೆಗೆ ಸಿಕ್ಕ ಸ್ವಾತಂತ್ರ್ಯ ಭಾಷೆಯ ಬಳಕೆಗೆ ಸಿಗಲಿಲ್ಲ
||ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು||
ಧನಿಕರಿಗೆ ಸಿಕ್ಕ ಸ್ವಾತಂತ್ರ್ಯ ದಲಿತರಿಗೆ ಸಿಗಲಿಲ್ಲ
ಅರಸರಿಗೆ ಸಿಕ್ಕ ಸ್ವಾತಂತ್ರ್ಯ ಪ್ರಜೆಗಳಿಗೆ ಸಿಗಲಿಲ್ಲ
ಕನಸಿಗೆ ಸಿಕ್ಕ ಸ್ವಾತಂತ್ರ್ಯ ನನಸಿಗೆ ಸಿಗಲಿಲ್ಲ
ಮಿಥ್ಯಕ್ಕೆ ಸಿಕ್ಕ ಸ್ವಾತಂತ್ರ್ಯ ಸತ್ಯಕ್ಕೆ ಸಿಗಲಿಲ್ಲ
||ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು||
ಸ್ವಾರ್ಥಕ್ಕೆ ಸಿಕ್ಕ ಸ್ವಾತಂತ್ರ್ಯ ನಿಸ್ವಾರ್ಥಕ್ಕೆ ಸಿಗಲಿಲ್ಲ
ಅನ್ಯಾಯಕ್ಕೆ ಸಿಕ್ಕ ಸ್ವಾತಂತ್ರ್ಯ ನ್ಯಾಯಕ್ಕೆ ಸಿಗಲಿಲ್ಲ
ಹಿಂಸೆಗೆ ಸಿಕ್ಕ ಸ್ವಾತಂತ್ರ್ಯ ಅಹಿಂಸೆಗೆ ಸಿಗಲಿಲ್ಲ
ಅಧರ್ಮಕ್ಕೆ ಸಿಕ್ಕ ಸ್ವಾತಂತ್ರ್ಯ ಧರ್ಮಕ್ಕೆ ಸಿಗಲಿಲ್ಲ
||ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು||
ತುಂಬೇನಹಳ್ಳಿ ಕಿರಣ್ ರಾಜು ಎನ್
ಮನವಿ

ಅಂದಿದ್ದರು ಕೆಚ್ಚೆದೆಯ_ ಸ್ವಾತಂತ್ರ ಹೋರಾಟ ಗಾರರು.
ಜೀವವನ್ನೇ ಬಲಿ ಕೊಟ್ಟರು_ ಆ ಹುತಾತ್ಮರು.
ಸಂಕೋಲೆಯಿಂದ ಬಿಡುಗಡೆಗೊಂಡಳು ತಾಯಿ, ಭಾರತಾಂಬೆ.
ಬಂಧನವ ಬಿಡಿಸಿದ ಕಲಿಗಳಿಗೆ ಶರಣು , ಶರಣೆಂಬೆ.
ಅಂದಿದ್ದ ದೇಶಾಭಿಮಾನಿಗಳು, ದೇಶೋದ್ದಾರಕರು,ದೇಶದ ಹಿತ ಚಿಂತಕರು, ಇಂದಿಗೂ ಇದ್ದಾರೆಯೇ ತಾಯಿ.? ಎಲ್ಲಿದ್ದಾರೆ ತಾಯಿ?
ಸ್ವಾರ್ಥಿಗಳೇ ತುಂಬಿಕೊಂಡಿರುವ, ಅಪಾರ ಜನಸಂಖ್ಯೆಯಲ್ಲಿ, ಅವರ ಹುಡುಕುವುದೆಂತಮ್ಮ?ಎನಗೆ ಬರೀ, ಸ್ವಾರ್ಥಿಗಳೇ, ವಂಚಕರೇ ಕಾಣಿಸುತ್ತಿದ್ದಾರೆ ತಾಯಿ.
ಅಂಧನಾಗಿದ್ದೇನೆ ನಾನು,ಕಾಣಿಸುತ್ತಿಲ್ಲ ಎನಗೆ, ಎನ್ನ ಕಣ್ತೆರಸಿ_ ಬೆರಳ ತೋರಿ, ತೋರಿಸು ಬಾ ತಾಯಿ.
ಬಾನಂಗಳದಲಿ ಮಿಣ, ಮಿಣ , ಮಿನುಗುವ ಆ ತಾರೆಗಳಂತೆ, ಹೆಚ್ಚೆಚ್ಚು ದೇಶ ಪ್ರೇಮಿಗಳ_ ಸೃಷ್ಟಿಸೇ ತಾಯೇ, ಭವ್ಯ ಭಾರತವ ಕಾಪಾಡು ತಾಯೇ, ಕಾಪಾಡು ತಾಯೇ.
ಕವಿ ಮಿತ್ರ ಕುಣಿಗಲ್ ದಿವಾಕರ್
ಭಾರತೀಯರು

ಭಾರತೀಯರು ನಾವು ಭಾರತೀಯರು
ವೀರಯೋಧರು ನಾವು ತ್ಯಾಗರೂಪರು
ಪರಧರ್ಮ ಸಹಿಷ್ಣತೆಯೆ ನಮ್ಮ ಮಂತ್ರವು
ಪರಭಾಷೆ ಜನರೊಡನೆ ಸೋದರತ್ವವು
ಕರುನಾಡ ಕನ್ನಡಿಗರ ಔದಾರ್ಯವು
ಭರತಭೂಮಿ ನಮ್ಮದೆಂಬ ಅಭಿಮಾನವು
ಶಾಂತಿಮಂತ್ರ ಸಾರಿದಂಥ ಗಾಂಧಿ ವಂದ್ಯರು.
ಕ್ರಾಂತಿ ಕಹಳೆ ಮೊಳಗಿಸಿದ ಸುಭಾಷ್ ಚಂದ್ರರು
ಭ್ರಾಂತಿಯಿಂದ ಬಸವಳಿದ ಬ್ರಿಟಿಷ್ ರಾಜರು
ದಾಸ್ಯದಿಂದ ಮುಕ್ತಗೊಳಿಸಿ ದೇಶ ಒಡೆದರು
ಸ್ವಾತಂತ್ರ್ಯಕಾಗಿ ಪ್ರಾಣತೆತ್ತ ವೀರಯೋಧರು
ದೇಶಕಾಗಿ ತ್ಯಾಗಗೈದ ಪುಣ್ಯಪುರುಷರು
ಎಲ್ಲವನ್ನು ಸಹಿಸಿಕೊಂಡ ಶಾಂತಿದೂತರು
ರಾಷ್ಟ್ರವನ್ನು ಪ್ರಜಾರಾಜ್ಯ ಮಾಡಿ ಹೋದರು
ಸ್ವತಂತ್ರ ಪಡೆದು ಭಾರತಾಂಬೆ ಮಕ್ಕಳಾದರು
ಈ ದೇಶದಲ್ಲಿ ಜನಿಸಿದಂಥ ನಾವೇ ಧನ್ಯರು
ಡಾ.ಎಸ್ ಪುಟ್ಟಪ್ಪ ಮುಡಿಗುಂಡ, ಮೈಸೂರು
ನನ್ನ ದೇಶ….
ನನ್ನ ದನಿ ಇನಿ ಪ್ರೀತಿ ತುಂಬಿದ ಬದುಕು ಸಂಭ್ರಮ ಜೀವನ ಸಂಭ್ರಮ ಸಡಗರ ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆ …
ನನ್ನ ದನಿ ನ್ಯಾಯ ಸತ್ಯ ಸಂಗತಿ ನೆಮ್ಮದಿ ಶಾಂತಿ ನೆಮ್ಮದಿ ತಂದಿದೆ…. ಮಮತೆ ಪ್ರೀತಿ ಮಣ್ಣಿನ ಋಣ ತೀರಿಸಲು ಸಾಧ್ಯ ಆಗಲಿಲ್ಲ…
ನನ್ನ ದೇಶ ನನ್ನ ಜನ ಚೆಂದ ಸಾಹಿತ್ಯ ಸಂಗೀತ ಕಲೆ ಸ್ವಾತಂತ್ರ್ಯ ದ ಹಣತೆ ಹಚ್ಚುತ್ತೇನೆ…
ನಾಡು ಕಂಡ ಶ್ರೇಷ್ಠ ಸಾಹಿತ್ಯ ಹುಟ್ಟಲು ಸಾಧ್ಯ ನನ್ನ ದೇಶ ನನ್ನ ಮಾತು ಸತ್ಯ ನಂಬಿ ಜೀವನ ಸಂಭ್ರಮ ಸಡಗರ ಸದಾ ಹರುಷ ತಂದಿದೆ…
ಸದಾ ಉಸಿರು ಇರಲಿ ಸದಾ ಉರಿಯುವ ಸ್ವಾತಂತ್ರ್ಯ ದ ಹಣತೆ. ಮೂಡಿ ಬರಲಿ.
ಸಿ. ರಶ್ಮಿ ಸತ್ಯ, ಹಿಂದುಪುರ, ಆಂಧ್ರಪ್ರದೇಶ
ವರದಿ ಗಾರರು 9502683580

