ಸಿಂದಗಿ– ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಾಲೇಜ್, ಎಚ್.ಜಿ.ಪದವಿ ಪೂರ್ವ ಕಾಲೇಜ್ ಹಾಗೂ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಕಾಲೇಜಿನ ಆವರಣದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿ, ಸುಮಾರು ನಾಲ್ಕು ದಶಕಗಳ ನಂತರ ಭಾರತ ಹಾಕಿ ವೈಭವವನ್ನು ಎತ್ತಿ ಹಿಡಿದಿದೆ. ನಮ್ಮ ದೇಶದ ಕ್ರೀಡೆ ಹಾಕಿಗೆ ಮತ್ತೆ ಮರುಜನ್ಮ ಬಂದಂತಾಗಿದೆ. ಟೋಕಿಯೋ ಓಲಂಪಿಕ್ಸ್ ನಲ್ಲಿ ಜರ್ಮನ್ ತಂಡದ ವಿರುದ್ದ 4-5 ಅಂತರದಿಂದ ಭಾರತ ಮಣಿಸಿ ಕಂಚಿನ ಪದಕವನ್ನು ಪಡೆಯುವ ಮೂಲಕ ಭಾರತದ ಹಾಕಿ ಕ್ರೀಡಾ ಪಟುಗಳು ಭಾರತೀಯರಿಗೆ ಸಂತಸವನ್ನು ನೀಡಿ ಜೀವಮಾನದ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕ್ಷೇತ್ರಗಳಲ್ಲಿ ಭಾರತ ಸಾಧನೆ ಮಾಡುತ್ತಿರುವುದು ನಮ್ಮಯ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಸಿ.ಎಂ.ಮನಗೂಳಿ ಕಾಲೇಜಿನ ಪ್ರೋ. ಬಿ.ಜಿ.ಮಠ, ಪ್ರೋ ಎಸ್.ಕೆ.ಹೂಗಾರ, ದೈಹಿಕ ನಿರ್ದೇಶಕ ಡಾ.ಅಂಬರೀಶ ಬಿರಾದಾರ, ಎಚ್.ಜಿ.ಪ ಪೂ ಕಾಲೇಜಿನ ಪ್ರೋ ಭೀಮನಗೌಡ ಬಿರಾದಾರ, ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಪ್ರೋ ಎಸ್.ಸಿ.ಸುಣಗಾರ, ಪ್ರೋ ಎಸ್.ಡಿ.ಅಂಕಲಗಿ, ಪ್ರೋ ಪ್ರದೀಪ ಕತ್ತಿ, ಪ್ರೋ ಎಸ್.ಎಮ್.ಹಿರೇಮಠ, ಪ್ರೋ ಎಸ್.ಎ.ಜಾಗಿರದಾರ, ಪ್ರೋ ಎಸ್.ಎಮ್,ಕಲ್ಲನಗೌಡರ, ಸಿದ್ದು ಕಲಾಲ ಸೇರಿದಂತೆ ಅನೇಕರು ಇದ್ದರು.