spot_img
spot_img

ಜಿಲ್ಲಾಧಿಕಾರಿ ಯಿಂದ ಮತಗಟ್ಟೆ ಪರಿಶೀಲನೆ

Must Read

- Advertisement -

ಸಿಂದಗಿ: 33-ಸಿಂದಗಿ ವಿಧಾನಸಭಾ ಸಾರ್ವತ್ರಿಕ ಚುನಾವಣಿ-2023 ರ ಏ. 13 ರಿಂದ 20 ರ ವರೆಗೆ ನಾಮ ಪತ್ರಗಳನ್ನು ಮಾನ್ಯ ಚುನಾವಣಾಧಿಕಾರಿಗಳ ಕೊಠಡಿ, ತಹಶೀಲ್ದಾರರ ಕಛೇರಿ ಸಿಂದಗಿಯಲ್ಲಿ ಸ್ವೀಕರಿಸಲಾಗುವುದು.

ಆದ್ದರಿಂದ ತಹಶೀಲ್ದಾರ ಕಛೇರಿಯ 100 ಮೀಟರ್ ಸುತ್ತ-ಮುತ್ತ ಪ್ರತಿಬಂಧಕಾಜ್ಞೆ ಇದ್ದು ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು 100 ಮೀಟರ್ ವ್ಯಾಪ್ತಿಯೊಳಗೆ ಅಭ್ಯರ್ಥಿಯನ್ನೊಳಗೊಂಡಂತೆ 5 ಜನ ಹಾಗೂ 3 ವಾಹನಗಳಿಗೆ ಮಾತ್ರ ಅನುಮತಿಸಿದೆ ಅದರ ಬಗ್ಗೆ ಎಲ್ಲ ರೀತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ದಾನಮ್ಮನವರ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಕಾರ್ಯಾಲಯದ ಸಿಬ್ಬಂದಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ನಾಮಪತ್ರ ಸಲ್ಲಿಸುವಾಗ ಮಾಡಿಕೊಳ್ಳಲಾದ ಭದ್ರತೆ ಬಗ್ಗೆ ಚರ್ಚಿಸಿದರು ಮತ್ತು ತಹಶೀಲದಾರ ಕಾರ್ಯಾಲಯದ ಸಿಬ್ಬಂದಿಗಳೊಂದಿಗೆ 80+ ಮತ್ತು ಪಿ ಡಬ್ಲೂಡಿ ಮತದಾರರ ಮತದಾನದ ವ್ಯವಸ್ಥೆ ಮಾಡಿಕೊಂಡಿರುವ ಬಗ್ಗೆ ಚರ್ಚಿಸಿದರು ಮತ್ತು ದಿನಾಂಕ 16-04-2023 ರಂದು ನಡೆಯುವ ಪಿ.ಆರ್.ಓ ಮತ್ತು ಎ.ಪಿ.ಆರ್.ಓ ಮತಗಟ್ಟೆ ಅಧಿಕಾರಿಗಳ ತರಬೇತಿಗೆ ಮಾಡಿಕೊಳ್ಳಲಾದ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು ಅಂತಾ ಮಾಹಿತಿ ಕುರಿತು ಸಲ್ಲಿಸಿದರು.

- Advertisement -

33-ಸಿಂದಗಿ ವಿಧಾನಸಭಾ ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರು, 33-ಸಿಂದಗಿ ವಿಧಾನಸಭಾ ಮತಕ್ಷೇತ್ರ ರವರು ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನು ಕರೆದು 13 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಛೇರಿಯಿಂದ 100 ಮೀ ವ್ಯಾಪ್ತಿಯೊಳಗೆ  ಅಭ್ಯರ್ಥಿಯನ್ನು ಒಳಗೊಂಡು 5 ಜನರಿಗೆ ಹಾಗೂ 3 ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ನಾಮಪತ್ರ ಸಲ್ಲಿಸಲು ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 3-00 ಗಂಟೆಯೊಳಗಡೆ ಮಾತ್ರ ಅವಕಾಶ ವಿರುತ್ತದೆ. ನಾಮಪತ್ರ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳು ರೂ 10000/- ಹಾಗೂ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳು ರೂ 5000/-ಗಳಂತೆ ಠೇವಣಿ ಮೊತ್ತವನ್ನು ತುಂಬಿ ರಶೀದಿಯನ್ನು ಪಡೆದು ನಾಮಪತ್ರದೊಂದಿಗೆ ಸಲ್ಲಿಸಲು ತಿಳಿಸಿದರು. ಹಾಗೂ ಮಾದರಿ ನೀತಿ ಸಂಹಿತೆಯನ್ನು ಪಾಲಿಸಲು ತಿಳಿವಳಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಆನಂದಕುಮಾರ, ಇಂಡಿ ಡಿವೈಎಸ್‍ಪಿ ಚಂದ್ರಕಾಂತ ನಂದರೆಡ್ಡಿ, ಸಹಾಯಕ ಚುನಾವಣಾಧಿಕಾರಿಗಳಾದ ಸಿಪಿಐ ಡಿ.ಹುಲಗೆಪ್ಪ, ತಹಶೀಲ್ದಾರ ನಿಂಗಪ್ಪ ಬಿರಾದಾರ, ಸುರೇಶ ಚವಲಾರ ಇದ್ದರು.

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group