spot_img
spot_img

ಭ್ರಷ್ಟಾಚಾರ ವಿರುದ್ಧ ದನಿಯೆತ್ತಲು ಆಪ್ ಗೆ ಮತ ನೀಡಿ

Must Read

- Advertisement -

ಸಿಂದಗಿ: ಕರ್ನಾಟಕದಲ್ಲಿ 2014ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು ಆವಾಗ್ಗೆ ಮೋದಿಯವರು 20% ಸರಕಾರವಿದೆ ಭ್ರಷ್ಟಾಚಾರ ರಹಿತ ಅಧಿಕಾರ ಕೊಡುತ್ತೇವೆ ಎಂದು ಅಲ್ಲಿಂದ  2018ರವರೆಗೆ 40% ಸರಕಾರವಾಗಿ ಆಡಳಿತ ಮಾಡಿದ ಬಿಜೆಪಿ ಸರಕಾರವಾಗಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ರೋಹನ ಅನಪುರ ಗುಡುಗಿದರು.

ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಎ ಎ ಪಿ ಪಕ್ಷವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಅಧಿಕಾರ ಹಿಡಿದ ಡಬಲ್ ಇಂಜನ್ ಸರಕಾರದಲ್ಲಿ ಡಬಲ್ ಕಮಿಷನ್ ತೆಗೆದುಕೊಂಡು ಇವರು ಯಾವ ರೀತಿಯಲ್ಲಿ ನಿರ್ಮೂಲನೆ ಮಾಡುತ್ತಾರೆ ಎನ್ನುವುದಕ್ಕೆ ನೈಜ ಸಾಕ್ಷಿ ಇಟ್ಟಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಅವರು ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಎಂಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆ ಗುತ್ತಿಗೆದಾರ ಸಾವಿಗೆ ಸಾಸಿವೆ ಕಾಳಿನ ಕಿಮ್ಮತ್ತಿಲ್ಲದಂತೆ ಕೇಸು ಕ್ಲೀನ್ ಚಿಟ್ವಾಯಿತು ಹೀಗಿರುವಾಗ ಜನಸಾಮಾನ್ಯರ ಪಾಡೇನು ಕಾರಣ ಇಂತಹ ಸರಕಾರಗಳಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ರಾಷ್ಟ್ರೀಯ ಮಾನ್ಯತೆ ಪಡೆದ ಆಮ್ ಆದ್ಮಿ ಪಕ್ಷಕ್ಕೆ ಒಮ್ಮೆ ಅವಕಾಶ ಕಲ್ಪಿಸಿಕೊಡಿ ದೆಹಲಿ, ಪಂಜಾಬ ಮಾದರಿಯಲ್ಲಿ ಅಧಿಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಭೋಗೇಶ ಸೊಲ್ಲಾಪುರ ಮಾತನಾಡಿ, ದೇಶದ ಬಡ ಮಕ್ಕಳಿಗೆ ನೀಡಲಾಗುತ್ತಿರುವ ಶಿಕ್ಷಣ ದಲ್ಲಿ ಮಾಫಿಯಾ ನಡೆಯುತ್ತಿದೆ ಈ ಸರಕಾರ ನಡೆಸುತ್ತಿರುವ ಸಚಿವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಇದರಿಂದ ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿಸಿ ಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿಲ್ಲ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ದೆಹಲಿ ಪಂಜಾಬ ನಲ್ಲಿ ಒಳ್ಳೆಯ ಕೆಲಸ ಮಾಡಿದೆ.

- Advertisement -

ಎಲ್ಲಾ ಪಕ್ಷಗಳಿಗೂ ಜನರು ಅವಕಾಶ  ಕೊಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ 40% ಸರ್ಕಾರವಾಗಿದೆ. ಬಿಜೆಪಿಗೆ ಮತ್ತೊಮ್ಮೆ ಅವಕಾಶ ಕೊಡಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು 2014ರಲ್ಲಿ ಮೋದಿ, ಅಮಿತ್ ಶಾ ಹೇಳಿದ್ದರು ಜನಸಾಮಾನ್ಯರಿಗೆ ಒಂದು ಕಾನೂನು ಸಚಿವರಿಗೆ ಒಂದು ಕಾನೂನು ನೀಡಿದ್ದು ನಾಚಿಕೆಗೇಡಿ ಸಚಿವರು ಬಿಜೆಪಿ ಪಕ್ಷದಲ್ಲಿ ಇದ್ದಾರೆ. ದೆಹಲಿಯಲ್ಲಿ ಕಳೆದ 10 ವರ್ಷಗಳಿಂದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ್ದಾರೆ. ಅಲ್ಲದೆ ಪಂಜಾಬನಲ್ಲಿ ಕಳೆದ 1 ವರ್ಷದಿಂದ ಅಧಿಕಾರ ನಡೆಸುತ್ತಿದೆ ಕಾಂಗ್ರೆಸ್ ಪಕ್ಷದ ನಮ್ಮ ಪಕ್ಷದವತಿಯಿಂದ ನೀಡಲಾಗುತ್ತಿರುವ ಯೋಜನೆಗಳನ್ನು ಕಾಪಿ ಮಾಡಿ ಈ ಸಾರ್ವತ್ರಿಕ ಚುನಾವಣೆಯಲ್ಲಿ ಅಳವಡಿಸಿಕೊಂಡಿದೆ ಎಂದು ಆರೋಪಿಸಿದರು.

ಅಭ್ಯರ್ಥಿ ಮುರೆಗೆಪ್ಪಗೌಡ ರದ್ದೇವಾಡಗಿ ಮಾತನಾಡಿ, 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಜಿಲ್ಲಾ ಉಪಾಧ್ಯಕ್ಷನಾಗಿ  ಕಾರ್ಯನಿರ್ವಹಿಸಿದ್ದೇನೆ ಆ ದಿಸೆಯಲ್ಲಿ ದುಡಿದವರಿಗೆ ಕೂಲಿ ಕೊಡಿ ಎಂದು ಕಳೆದ ಮೂರು ಬಾರಿ ಟಿಕೇಟ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೇನೆ ಆದರೆ ಟಿಕೆಟ್ ಬಲಾಢ್ಯರ ಪಾಲಾಗುವಂತೆ ಮಾಡಿ ನನ್ನ ನಂಬಿಕೆಗೆ ದಕ್ಕೆ ತಂದಿದ್ದಾರೆ. 

ಅದಕ್ಕೆ ಎ ಎ ಪಿ ಪಕ್ಷ ಭ್ರಷ್ಟಾಚಾರ ವಿರುದ್ಧ ಸಹಾಯವಾಣಿ ನೀಡುತ್ತೇವೆ ನನಗೊಮ್ಮೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.

- Advertisement -

ತಾಲೂಕಾಧ್ಯಕ್ಷ ಶಬ್ಬೀರ ಪಟೇಲ ಮಾತನಾಡಿದರು. ಶಿವು ಬಿರಾದಾರ ಇದ್ದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group