ಬೀದರನಲ್ಲಿ ಮನೆಗಳ್ಳತನ ಪ್ರಕರಣ ಅಂತಾರಾಜ್ಯ ಕಳ್ಳನ ಬಂಧನ

Must Read

ಹತ್ತು ಲಕ್ಷ ರೂ.ಮೌಲ್ಯದ 200ಗ್ರಾಂ. ಚಿನ್ನಾಭರಣ ಜಪ್ತಿ..

ಬೀದರ್ – ನಗರದ ಆದರ್ಶ ಕಾಲೋನಿ, ಜ್ಯೋತಿ ಕಾಲೋನಿಗಳ ಮೂರು ಮನೆಗಳಲ್ಲಿ ನಡೆದಿದ್ದು ಸರಣಿ‌ ಕಳ್ಳತನ ಪ್ರಕರಣವನ್ನು ಬೀದರ ಪೊಲೀಸರು ಬೇಧಿಸಿದ್ದು ಒಬ್ಬ ಅಂತಾರಾಜ್ಯ ಕಳ್ಳನನ್ನು ಸೆರೆ ಹಿಡಿದು ಆತನಿಂದ ಅಪಾರ ಪ್ರಮಾಣದ ಚಿನ್ನಾಭರಣ ವಶಪಡಿಸೊಕೊಂಡಿದ್ದಾರೆ.

ಈತನ ವಿರುದ್ಧ ಮಹಾರಾಷ್ಟ್ರದ ಸೋಲಾಪೂರ, ರಾಯಚೂರು, ಗದಗ, ಹುಬ್ಬಳ್ಳಿ, ಧಾರವಾಡ, ಬಾದಾಮಿ, ಬಾಗಲಕೋಟ ವಿಜಯಪೂರ ಗಳಲ್ಲಿ ಮನೆ ಕಳ್ಳತನ ದ ಪ್ರಕರಣ ದಾಖಲಾಗಿವೆ.

ಆರೋಪಿಯನ್ನ ಹಿಡಿಯುವಲ್ಲಿ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣವರ ಮತ್ತು ಡಿವೈಎಸ್ ಪಿ ಸತೀಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು ಸಿಪಿಐ ಶ್ರೀಕಾಂತ್ ಅಲ್ಲಾಪೂರೆ ಮತ್ತವರ ತಂಡದಿಂದ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮಾಧ್ಯಮ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group