Homeಸುದ್ದಿಗಳುರಸಗೊಬ್ಬರ ಗೊಂದಲದ ಬಗ್ಗೆ ಜೆ ಪಿ ನಡ್ಡಾ ಜೊತೆ ಈರಣ್ಣ ಕಡಾಡಿ ಚರ್ಚೆ

ರಸಗೊಬ್ಬರ ಗೊಂದಲದ ಬಗ್ಗೆ ಜೆ ಪಿ ನಡ್ಡಾ ಜೊತೆ ಈರಣ್ಣ ಕಡಾಡಿ ಚರ್ಚೆ

ಮೂಡಲಗಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಜೆ.ಪಿ. ನಡ್ಡಾ ಅವರನ್ನು ಕರ್ನಾಟಕ ಬಿಜೆಪಿ ಸಂಸದರ ನಿಯೋಗದೊಂದಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಭೇಟಿಯಾಗಿ ರಾಜ್ಯದಲ್ಲಿ ರಸಗೊಬ್ಬರದ ವಿತರಣೆಯಲ್ಲಿ ಆಗಿರುವ ಗೊಂದಲ ಕುರಿತು ಸಚಿವರೊಂದಿಗೆ ಚರ್ಚಿಸಿದರು.

ನವದೆಹಲಿಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಖಾರಿಫ್ ಋತುವಿಗೆ ಕರ್ನಾಟಕ ರಾಜ್ಯ 6.30 ಲಕ್ಷ ‌ಮೆಟ್ರಿಕ್ ಟನ್ ಯೂರಿಯಾ ಪೂರೈಸಲು ಕೋರಲಾಗಿತ್ತು. ರಾಜ್ಯದ ರೈತರ‌ ಹಿತದೃಷ್ಟಿಯಿಂದ ಕೇಂದ್ರ ರಸಗೊಬ್ಬರ ಇಲಾಖೆ ಜುಲೈ ಅಂತ್ಯಕ್ಕೆ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ರಾಜ್ಯದಲ್ಲಿ‌ ಇಲ್ಲಿಯವರೆಗೆ 7.08 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಮಾರಾಟವಾಗಿದೆ. 1.65 ಲಕ್ಷ ಮೆಟ್ರಿಕ್ ಟನ್‌ ಯೂರಿಯಾ ರಾಜ್ಯದ ಗೋದಾಮಿನಲ್ಲಿ ದಾಸ್ತಾನು ಇರುವುದಾಗಿ ಮಾಹಿತಿ ನೀಡಿದರು ಜೊತೆಗೆ ಈಗಾಗಲೇ ಸುಮಾರು 16 ಸಾವಿರ ಟನ್‌ ರಸಗೊಬ್ಬರವನ್ನು ರಾಜ್ಯಕ್ಕೆ ಕಳುಹಿಸಿ ಕೊಡುತ್ತಿದ್ದೇವೆ ಎಂದು ಸಚಿವರು ನಮ್ಮ ನಿಯೋಗಕ್ಕೆ ವಿವರ ನೀಡಿದ್ದಾರೆ ಎಂದರು.

ಕರ್ನಾಟಕ ರಾಜ್ಯದ ಕಲಬುರ್ಗಿ, ಕೊಪ್ಪಳ, ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ರಾಜ್ಯ ಸರ್ಕಾರ ತನ್ನ ಬಳಿ ಇರುವ 1.65 ಲಕ್ಷ ಮೆಟ್ರಿಕ್ ಟನ್‌ ರಸಗೊಬ್ಬರವನ್ನು ಸರಿಯಾಗಿ ವಿತರಣೆ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿರುವ ಅಧಿಕಾರ ಹಂಚಿಕೆಯ ಗಲಾಟೆಯಲ್ಲಿ ರಸಗೊಬ್ಬರ ವಿತರಣೆಗೆ ಅಗತ್ಯ ಕ್ರಮಕೈಗೋಳ್ಳುವಲ್ಲಿ ವಿಫಲರಾಗಿದ್ದು ಮುಕ್ತ ಮಾರುಕಟ್ಟೆಯಲ್ಲಿ ಏಜೆಂಟರು ಯೂರಿಯಾ ರಸಗೊಬ್ಬರದ ದುರ್ಬಳಕೆ ಮಾಡಿಕೊಂಡಿದ್ದು ಅಂಥವರಿಗೆ ಅವಕಾಶ ನೀಡಿ ರೈತರನ್ನು ಬೀದಿಗೆ ತಳ್ಳಿ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುವುದು ಎಷ್ಟು ಸರಿ ? ರೈತರ ರಸಗೊಬ್ಬರ ವಿಷಯದಲ್ಲಿ ರಾಜಕೀಯ ಮಾಡಲಾರದೇ ಸರಿಯಾದ ವಿತರಣೆಗೆ ಕ್ರಮಕೈಗೊಂಡು ರೈತರ ನೆರವಿಗೆ ದಾವಿಸಬೇಕಾದ ಅವಶ್ಯಕತೆ ಇದೆ ಎಂದು ಕಡಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ನಿಯೋಗದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದರಾದ ಜಗದೀಶ ಶೆಟ್ಟರ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಿ.ಸಿ ಗದ್ದಗೌಡರ, ರಮೇಶ ಜಿಗಜಿಣಗಿ, ಡಾ. ಕೆ. ಸುಧಾರಕರ, ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group