“Brutality of cow killing please Stop it…..”
ಹಿಂದು ಧರ್ಮದಲ್ಲಿ ಪ್ರಾಣಿ ಪಕ್ಷಿಗಳಿಗೂ ಕೂಡ ಪೂಜನೀಯ ಸ್ಥಾನ ಕೊಟ್ಟಿದ್ದಾರೆ.
ಗಣೇಶನ ವಾಹನ ಇಲಿ , ಕಾರ್ತಿಕೇಯ ನ ವಾಹನ ನವಿಲು, ಭವಾನಿ ಮಾತೆಯ ವಾಹನ ಹುಲಿ, ವಿಷ್ಣು ದೇವ ರಂಗನಾಥನ ವಾಹನ ಎಳು ಹೆಡೆಯ ಸರ್ಪ,ಹಾಗೂ ಪರಮೇಶ್ವರ ಶಿವನ ವಾಹನ ಗೋಮಾತೆ ಅಲ್ಲವೆ.
ನಮ್ಮ ಹಾಗೆ ಪ್ರಾಣಿಗಳಿಗೂ ಜೀವ ಇದೆ, ಅವುಗಳಿಗೂ ನೋವು ನಲಿವುಗಳು ಇದೆ. ಜೀವಿಯ ಜೀವಕ್ಕೆ ಒಂದು ಚಿಕ್ಕ ಮುಳ್ಳು ಚುಚ್ಚಿದರು ನೋವಾಗುತ್ತದೆ. ಆದರೆ ಜಗತ್ತಿನ ಬುದ್ಧಿವಂತ ಏಕೈಕ ಪ್ರಾಣಿಯಾದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಡೀ ಭೂಂಡಲದ ಪ್ರಾಕೃತಿಕ ಸಂಪತ್ತನ್ನು ಅವೈಜ್ಞಾನಿಕವಾಗಿ ದುರುಪಯೋಗಿಸಿಕೊಳ್ಳುತ್ತಿದ್ದಾನೆ.
ತನ್ನ ನಿತ್ಯ ಬದುಕಿನಲ್ಲಿ ಪ್ರಾಣಿ ಪಕ್ಷಿಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಸರ್ವೆ ಸಾಮಾನ್ಯ,ಆದರೆ ಅವುಗಳ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಅಲ್ಲವೆ?
ಸ್ವಾರ್ಥಿಯಾದ ಮಾನವ ತನ್ನ ಮೋಜಿಗಾಗಿ, ಸ್ವಾರ್ಥಕ್ಕಾಗಿ, ತನ್ನ ವೈಯಕ್ತಿಕ ಬಳಕೆಗಾಗಿ ಆದಿ ಅನಾದಿಕಾಲದಿಂದಲೂ ಪ್ರಾಣಿ ಪಕ್ಷಿಗಳನ್ನು ಬೇಟೆ ಆಡುತ್ತಾ ಬಂದಿದ್ದಾನೆ.
ಇಲ್ಲಿ ಒಂದು ಜೀವಿಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಇದೆ.
ಹಸುವನ್ನು ಹಿಂದೂಗಳು ಗೋಮಾತೆ ಎಂದು ಪೂಜಿಸುತ್ತೇವೆ. ಇನ್ನೊಂದು ಕಡೆ ಗೋಮಾಂಸ ತಿನ್ನುವವರು ಕೂಡ ಕಡಿಮೆಯಿಲ್ಲ. ಗೋಮಾಂಸ ಪ್ರಿಯರಿಗೆ ಅದರ ರುಚಿ ಮಾತ್ರ ಗೊತ್ತು, ಆದರೆ ಕಸಾಯಿ ಖಾನೆಗಳಲ್ಲಿ ಗೋವುಗಳ ಹತ್ಯೆ ಮಾಡಿ ಯಾವ ರೀತಿ ಗೊಮಾಂಸ ಪಡೆಯುತ್ತಾರೆ ಅಂದರೆ ಆ ಗೋವುಗಳ ಗತಿ ಎನು ಅಂದರೆ ಗೋವುಗಳು ಚಡಪಡಿಸಿ ಸಾಯುವ ಚಿಕ್ಕ ಕಥೆ ಕೇಳಿ.
ಕೇಳು ನಿರ್ದಯಿ ಮನುಷ್ಯ,” ನಾನು ಗೋಮಾತೆ”ಕ ಸಾಯಿಖಾನೆಗೆ ನನ್ನನ್ನು ಹಾಕಲಾಗುತ್ತದೆ ಮತ್ತು 4 ದಿನಗಳ ವರೆಗೂ ನನ್ನ ಹೊಟ್ಟೆಗೆ ಏನೂ ಕೊಡುವುದಿಲ್ಲ!ಯಾಕೆಂದರೆ….ನನ್ನ ರಕ್ತ ದಲ್ಲಿನ ಹಿಮೋಗ್ಲೋಬಿನ್ ಕರಗಿ ಮಾಂಸ ದಲ್ಲಿ ಆಂಟಿ ಕೊಳ್ಳಲಿ ಎಂದು! ನಂತರ ನನ್ನನ್ನು ಎಳೆದು ಕೊಂಡು ತರಲಾಗುತ್ತದೆ ಏಕೆಂದರೆ….ನಾ ಮೂರ್ಛೆ ಹೋಗಿರುತ್ತೇನೆ. ನನ್ನ ಮೇಲೆ 200 ಡಿಗ್ರಿ ಸೆಲ್ಸಿಯಸ್ ನಷ್ಟು ಕುದಿಯುವ ನೀರನ್ನು ಸುರಿಯಲಾಗುತ್ತದೆ ……ನನ್ನಲ್ಲಿ ಹಾಹಾಕಾರ ಉಂಟಾಗುತ್ತದೆ .
ಆಗ ನನ್ನ ಹಾಲು ಕುಡಿಯುವ ನಿಮ್ಮನ್ನು (ಮನುಷ್ಯ)ನೆನೆಯುತ್ತೇನೆ ! ನಂತರ ನನ್ನನ್ನು ಕಠೋರವಾಗಿ ದೊಣ್ಣೆ ಯಿಂದ ಹೊಡೆಯ ಲಾಗುವುದು ….ಯಾಕೆಂದರೆ ನನ್ನ ಚರ್ಮ ಸುಲಭವಾಗಿ ಬಿಡಿಸಿ ಕೊಳ್ಳಲಿ ಎಂದು!
ನನ್ನ ಎರಡು ಕಾಲುಗಳನ್ನು ಕಟ್ಟಿ ಉಲ್ಟಾ ನೇತು ಹಾಕುತ್ತಾರೆ ನಂತರ ನನ್ನ ಶರೀರದಿಂದ ಚರ್ಮವನ್ನು ತೆಗೆದು ಹಾಕುತ್ತಾರೆ .
ಕೇಳಿ ಭೂಮಿ ಮೇಲಿನ ಜೀವಿಗಳೇ…..ಈಗಲೂ ನನ್ನ ಪ್ರಾಣ ಹೋಗಿರುವುದಿಲ್ಲ!!
ನಾನು ಕಾತರದ ಕಣ್ಣುಗಳಿಂದ ನೋಡುವೆ ಈ ಕಸಾಯಿಖಾನೆಯವರಲ್ಲಿ ಮನುಷ್ಯತ್ವ ಜನ್ಮತಳೆಯುತ್ತದೆನೋ ಎಂದು! ಇಂತಹ ಸಮಯದಲ್ಲೂ ನನ್ನಿಂದ ಪೋಷಣೆಗೊ0ಡ ಯಾರಾದರೂ ಮನುಷ್ಯ ನನ್ನನ್ನು ಕಾಪಾಡುವುದಿಲ್ಲ…
ನನ್ನ ಚರ್ಮದ ಮೇಲೆ ಆಸೆ ಇಟ್ಟುಕೊಂಡ ವರೆ….ದುಷ್ಟ ಕಸಾಯಿಖಾನೆಯವ ನನ್ನ ಜೀವವಿರು ವಾಗಲೇ ನನ್ನ ಚರ್ಮ ತೆಗೆದು ಬಿಡುತ್ತಾರೆ…..ನಾನು ನರಳಿ ನರಳಿ ಹಂಬಲಿಸಿ ಪ್ರಾಣ ಬಿಡುತ್ತೇನೆ.
ಇಂತಹ ಪಾವನ ಪವಿತ್ರ ಭಾರತ ಭೂಮಿಯ ಮೇಲೆ ನನ್ನನ್ನು ಕಾಪಾಡಲು ಪಾಲನೆ ಮಾಡಲು ಯಾವುದೇ ಧರ್ಮ ಕಾನೂನು ಇಲ್ಲವೇ……ನಿಮ್ಮಿಂದಾದ ಕ್ರೂರವಾದ ಅತ್ಯಾಚಾರವನ್ನು ಸಹಿಸಿಯು ಕೂಡ ನಾನು ನಿಮಗೆ ‘ಶಾಪ ‘ ವನ್ನು ಕೊಡಲಾಗದು …..ಏಕೆಂದರೆ……..ನಾನು ನಿನ್ನ ತಾಯಿಯಲ್ಲ ವೇ….
ನೀವು ಗೋಮಾತೆಯನ್ನು ಪ್ರೀತಿಸುವವರಾದರೇ …
ಮತ್ತು ಗೋಮಾತೆಯ ಹಾಲನ್ನು ಕುಡಿದವರೇ ಆಗಿದ್ದರೆ……ಈ ಸಂದೇಶವನ್ನು ಎಲ್ಲರಿಗೂ ಮುಟ್ಟಿಸಿ .
ಸ್ವಲ್ಪ ವಾದರೂ ಸರಿ ಹಾಲಿನ ಋಣವನ್ನಾದರೂ ಕಮ್ಮಿ ಮಾಡಿ ಕೊಳ್ಳಿ. ಹಿಂದೂಗಳೆಲ್ಲರ ಒಂದೇ ಕೂಗು….
ಇನ್ನು ಗೋಹತ್ಯೆ ಯನ್ನು ಸಹಿಸಲಾಗದು..!
ಗೋಮಾತೆಯ ಈ ಪೀಡನೆಯನ್ನು ದಯವಿಟ್ಟು ತಡೆಗಟ್ಟಿ.
ಆ ಗೋವಿನ ನೋವು ಕರುಳು ಹಿಂಡುತ್ತದೆ , ಇನ್ನುಳಿದ ಪ್ರಾಣಿಪಕ್ಷಿಗಳ ಕಥೆ ಏನು? ಇವುಗಳ ರಕ್ಷಣೆ ಮಾಡು ದೇವಾ…..ನಮ್ಮ ಸಮಾಜದಲ್ಲಿ ಯಾವುದೇ ಹತ್ಯೆಯನ್ನು ಮಹಾಪಾಪ ಎಂದೇ ಪರಿಗಣಿಸಲಾಗುತ್ತದೆ. ಕೊಲೆಗಾರರನ್ನು ಶಿಕ್ಷಿಸಲು ಅನ್ವಯವಾಗುವ ಕ್ರಿಮಿನಲ್ ಕಾನೂನುಗಳನ್ನು ಪ್ರಾಣಿಹಂತಕರ ವಿಚಾರಣೆಗೆ ಅನ್ವಯಿಸಬೇಕು ಎಂಬ ವಾದವನ್ನು ಮಂಡಿಸುತ್ತಾ ಹಲವಾರು ಸಂಘಟನೆಗಳ ಪ್ರಯತ್ನ ಸಾಗಿದೆ. ಆದರೆ ನಮ್ಮ ಮನಸ್ಸಾಕ್ಷಿಯು ಪ್ರಾಣಿ ಹತ್ಯೆ ತಡೆಯಲು ಮುಖ್ಯ ಕಾರಣವಾಗಬೇಕಾಗಿದೆ. ಒಂದು ಪ್ರಾಣಿಯ ಹತ್ಯೆ ಮಾಡುವ ಮನಸ್ಸು ಅದರಿಂದ ಹೊರಬಂದು ಪಾಪಪ್ರಜ್ಞೆಯೊಂದಿಗೆ ಆ ದುಷ್ಟ ಕಾರ್ಯಕ್ಕೆ ಕೈ ಹಾಕದಂತಾಗಬೇಕು. ಅಂದಾಗ ಮಾತ್ರ ಗೋ ಹತ್ಯೆ ಯಂತಹ ಪಾಪದ ಕಾರ್ಯ ನಿಲ್ಲಲು ಸಾಧ್ಯ. ಏನೇ, ಆಗಲಿ ಪ್ರಾಣಿ ಹತ್ಯೆ ನಿಲ್ಲುವಂತಾಗಬೇಕಾದ ಅಗತ್ಯತೆ ಇಂದಿನ ದಿನಗಳಲ್ಲಿ ಕಡ್ಡಾಯ ಕಾನೂನು ಆಗಬೇಕು
ನಂದಿನಿ ಸನಬಾಳ್
ಪಾಳಾ ಕಲಬುರಗಿ