ರಸ್ತೆಯಲ್ಲಿ ಸಿಲುಕಿದ ಈಶ್ವರ ಖಂಡ್ರೆ ಕಾರು

Must Read

ಬೀದರ – ಹಿಂದುಳಿದ ಪ್ರದೇಶ ಎಂದು ಹಣೆ ಪಟ್ಟಿ ಹಚ್ಚಿಕೊಂಡಿರುವ ಜಿಲ್ಲೆ ಬೀದರ್ ನ ಔರಾದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರ ಕಾರು ರಸ್ತೆಯಲ್ಲಿ ಸಿಲುಕಿ ತಳ್ಳಿಸಿಕೊಂಡ ಘಟನೆ ವರದಿಯಾಗಿದೆ.

ಬೀದರ ಉಸ್ತುವಾರಿ ಸಚಿವರ ತವರೂರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿದ್ದ ಈಶ್ವರ ಖಂಡ್ರೆಯವರ ಇನ್ನೋವ ಗಾಡಿಯು ಕಚ್ಚಾ ರಸ್ತೆ ಬದಿಯಲ್ಲಿ ಸಿಲುಕಿಕೊಂಡ ಪ್ರಸಂಗ ನಡೆಯಿತು.

ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಖಂಡ್ರೆ ಪ್ರಚಾರಕ್ಕೆ ಕಮಲನಗರ ಮತ್ತು ಔರಾದ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಹೋಗುವ ಸಂದರ್ಭದಲ್ಲಿ ಹಳ್ಳಿಯ ರಸ್ತೆಯಲ್ಲಿ ಕಾರು ಸಿಲುಕಿಕೊಂಡಿತು. ಜಿಲ್ಲಾ ಉಸ್ತುವಾರಿ ಸಚಿವರ ಔರಾದ ಕ್ಷೇತ್ರದಲ್ಲಿಯೇ ರಸ್ತೆ ವ್ಯವಸ್ಥೆ ಹೀಗಿದೆಯೆಂದರೆ ಇನ್ನುಳಿದ ರಸ್ತೆಗಳ ಗತಿಯೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಉಸ್ತುವಾರಿ ಸಚಿವರು ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದಾಗಿ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು ಜೊತೆಯಲ್ಲಿ ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಇದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group