ಬೀದರ ಜಿಲ್ಲೆಗೆ ಗಂಡಾಂತರ ತರುವುದೇ ಎಳ್ಳ ಅಮಾವಾಸ್ಯೆ?

Must Read

ಬೀದರ – ಎಳ್ಳ ಅಮವಾಸ್ಯೆ ಹಬ್ಬ ಹಿನ್ನೆಲೆಯಲ್ಲಿ ಬೀದರ್ ಜನರು ಹೊಲಕ್ಕೆ ಹೋಗಬೇಕಾಗಿದ್ದು ಹೊಲಕ್ಕೆ ಹೋಗಿ ಚರಗ ಚೆಲ್ಲಿ ಊಟ ಮಾಡಿಕೊಂಡು ಬರಬೇಕು ಆದರೆ ಜನರು ಹೊಲಕ್ಕೆ ಹೋಗದೇ ಬೀದರನ ಪ್ರಸಿದ್ಧ ಉದ್ಯಾನವನದಲ್ಲಿ ಸಾರ್ವಜನಿಕರು ಎಳ್ಳ ಅಮವಾಸ್ಯೆ ಹಬ್ಬ ಆಚರಣೆ ಮಾಡಿದರು.

ಈ ಎಳ್ಳ ಅಮವಾಸ್ಯೆ ಸಂದರ್ಭದಲ್ಲಿ ಕರೋನ ನಿಯಮ ಉಲಂಘನೆ ಮಾಡಿದ ಜನರು ‌ಒಬ್ಬರು ಕೂಡ ಮಾಸ್ಕ ಹಾಕದೆ ಉದ್ಯಾನವನದಲ್ಲಿ ತುಂಬಿಕೊಂಡು ಕೊರೋನಾ ನಿಯಮ ಪಾಲಿಸದೆ ಎಳ್ಳ ಅಮಾವಾಸ್ಯೆ ಆಚರಿಸಿದರು.ಆದರೆ ಹಬ್ಬದ ಸಂದರ್ಭದಲ್ಲಿ ಉದ್ಯಾನದಲ್ಲಿ ಯಾಕೆ ಇಷ್ಟು ಒಂದು ಜನರು ಸೇರಲು ಬಿಟ್ಟಿದ್ದಾರೆ ಎಂದು ಬೀದರ ಜಿಲ್ಲೆಯ ಜನರು ಜಿಲ್ಲಾ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಒಂದೇ ಕುಟುಂಬದಲ್ಲಿ ಐದು ಜನರಿಗೆ ಕರೋನ ವೈರಸ್ ವಕ್ಕರಿಸಿದ ವಿಷಯ ಗೊತ್ತಿದ್ದರು ಜಿಲ್ಲಾ ಆಡಳಿತ ನಿರ್ಲಕ್ಷ್ಯ ತೋರಿದೆ ಎಂದು ಸಾರ್ವಜನಿಕರ ಅಭಿಪ್ರಾಯ. ಇದೇ ರೀತಿ ಜಿಲ್ಲಾಡಳಿತ ಕೊರೋನಾ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದರೆ ಬೀದರ್ ಕರೋನ ಮುಕ್ತ ಜಿಲ್ಲೆ ಹೇಗೆ ಆಗುತ್ತದೆ ಎಂದು ಕೇಳುವ ಸಾರ್ವಜನಿಕರು ಎರಡು ವರ್ಷದ ಹಿಂದಿನ ಭೀಕರ ಪರಿಸ್ಥಿತಿ ಜಿಲ್ಲೆಗೂ ಬರುವುದೇನೋ ಎಂಬ ಆತಂಕದಲ್ಲಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group