spot_img
spot_img

ನೀರನ್ನು ಮಿತವಾಗಿ ಬಳಸುವ ಜವಾಬ್ದಾರಿ ನಮ್ಮದು – ಈರಣ್ಣ ಕಡಾಡಿ

Must Read

- Advertisement -

ಬೆಳಗಾವಿ: ನೀರು ಭಗವಂತ ಕೊಟ್ಟ ಪ್ರಸಾದ ಅದನ್ನು ಸರಿಯಾಗಿ ಬಳಕೆ ಮಾಡುವ ಮುಖಾಂತರ ನೀರನ್ನು ಉಳಿಸುವ ಮತ್ತು ಹಿತಮಿತವಾಗಿ ಬಳಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಗುರುವಾರ ನ-16 ರಂದು ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ  ಬೆಳಗಾವಿ ನಗರದ ವಾರ್ಡ ನಂ-4 ನರಗುಂದಕರ ಭಾವೆ ಚೌಕ್ ದತ್ತಾತ್ರೆಯ ಮಂದಿರ ಹತ್ತಿರ ಬೊರವೆಲ್ (ಕೊಳವೆ ಬಾವಿ) ಕೊರೆಯುವ ಕಾರ್ಯಕ್ಕೆ  ಪೂಜೆ ಸಲ್ಲಿಸಿ,  ಚಾಲನೆ ನೀಡಿ ಮಾತನಾಡಿದರು.

ಇತ್ತೀಚೆಗೆ ದೇಶದಲ್ಲಿ ಮಳೆಯ ಪ್ರಮಾಣ ಬಹಳ ಕುಸಿತವಾಗಿದ್ದು ಅಂತರ್ಜಲ ಮಟ್ಟ ದಿನ ದಿನಕ್ಕೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ನಾವೆಲ್ಲರೂ ಇಂಗು ಗುಂಡಿ ನಿರ್ಮಿಸುವುದು, ಗಿಡಮರ ಬೆಳೆಸುವುದು, ಅರಣ್ಯ ಪ್ರದೇಶ ಹೆಚ್ಚು ಮಾಡುವುದು ಸೇರಿದಂತೆ ಹೀಗೆ ಹಲವಾರು ಚಟುವಟಿಕೆಗಳನ್ನು ಮಾಡಬೇಕಾಗಿದೆ. ಹೀಗಾಗಿ ಬೆಳಗಾವಿ ಮಹಾನಗರ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದು, ನಗರದ ಅಲ್ಲಲ್ಲಿ ನೀರಿನ ಸಮಸ್ಯೆ ಇದ್ದು ಬೋರ್ವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು

- Advertisement -

ಈ ಸಂದರ್ಭದಲ್ಲಿ ಮಾಜಿ ಶಾಸಕರು ಹಾಗೂ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ಅನೀಲ ಬೆನಕೆ, ನಗರ ಸೇವಕರಾದ  ಜಯತೀರ್ಥ ಸವದತ್ತಿ,  ರಾಜಶೇಖರ ಡೊಣಿ, ಬಾಬುಲಾಲ ಪುರೋಹಿತ,  ವಿಕ್ರಮ ಪುರೋಹಿತ,  ಶಿಲ್ಪಾ ಕೆಕರೆ, ವಿಜಯ ಭದ್ರಾ,  ಮಹಾನಗರ ಜಿಲ್ಲಾ ಮಾಧ್ಯಮ ಸಂಚಾಲಕ  ಶರದ ಪಾಟೀಲ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು

- Advertisement -
- Advertisement -

Latest News

ಬೆಳಗಾವಿ ಜಿಲ್ಲೆಯ ಒಂದೇ ಮನೆಯ ಇಬ್ಬರು ಪಿ ಎಸ್ ಐ ಹುದ್ದೆಗೆ ಆಯ್ಕೆ

ಮೂಡಲಗಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಶಿವಾನಂದ ಬೆನ್ನಳ್ಳಿ ಮತ್ತು ಅವರ ಸಹೋದರನ ಮಗಳು ಶಿಲ್ಪಾ ಪ್ರವೀಣ ಬೆನ್ನಳ್ಳಿ ಇವರು ಪೋಲಿಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group