ಬಸವಣ್ಣನವರ ಕರ್ಮಭೊಮಿ ಬೀದರ್ ನಲ್ಲಿ ನಡೆದ ಆಡಿದ ಭೂಮಿಯಲ್ಲಿ ರಾಜ್ಯದ ಬಜೆಟ್ ನಲ್ಲಿ ಒಂದು ಜನಾಂಗಕ್ಕೆ ಅನ್ಯಾಯ ಆಗಿದ್ದು ಎಂದು ಆರೋಪ ಮಾಡಿದ ಅಲೆಮಾರಿ ಜನಾಂಗದ ಮುಖಂಡರು.
ಈ ಬಜೆಟನಲ್ಲಿ ಅಲೆಮಾರಿ-ಅರೆ ಅಲೆಮಾರಿ ಜನಾಂಗವನ್ನು ಕಡೆಗಣಿಸಲಾಗಿದೆ ಎಂದು ಅಖಿಲ ಭಾರತ ಗೋಂಧಳಿ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ರಾಮ ಡಿ.ವಾಗ್ಮಾರೆ ಅಸಮಾಧಾನ ವ್ಯಕ್ತಪಡಿಸಿದರು.
ಬೀದರ ನಲ್ಲಿ ಮಾತನಾಡಿದ ಅವರು, ಅಲೆಮಾರಿ-ಅರೆ ಅಲೆಮಾರಿ ಜನಾಂಗಕ್ಕೆ ಬಜೆಟ್ ನಲ್ಲಿ ಆದ್ಯತೆ ನೀಡಿರುವ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.ಆದ್ಯತೆ ನೀಡಿದ್ದೇ ಆದರೇ ಎಷ್ಟು ಕೋಟಿ ನಿಗದಿಪಡಿಸಲಾಗಿದೆ. ಯಾವುದಕ್ಕೆ ಎಷ್ಟು ಎಂಬ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಡೆಗಣನೆ ವಿರುದ್ಧ ಗೋಂಧಳಿ ಸಮಾಜದಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ವಾಗ್ಮಾರೆ ಅವರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ